ಇತ್ತೀಚೆಗೆ ಬಜಾಜ್ ಕಂಪೆನಿಯು ಪಲ್ಸರ್ 200ಎನ್ಎಸ್ ಎಂಬ ಹೊಸ ಬೈಕ್ ಬಿಡುಗಡೆ ಮಾಡಿತು. ಪಲ್ಸರ್ಗಳು ಈಗಾಗಲೇ ರಸ್ತೆ ಮೇಲೆ ಇದ್ದರೂ ಇದು ಮಾತ್ರ ತೀರಾ ಭಿನ್ನ ಹಾಗೂ ವಿಶೇಷ. ಕಾರಣ ಈಗಿರುವ ಒಂದನೇ ತಲೆಮಾರಿನ ಪಲ್ಸರ್ಗಳು ಟ್ವಿನ್ ಅಂದರೆ ಎರಡು ಸ್ಪಾರ್ಕ್ ಪ್ಲಗ್ನಿಂದ ಚಲಿಸುತ್ತಿದ್ದವು. ಆದರೆ ಈಗ ಬಜಾಜ್ ತನ್ನ ಎರಡನೇ ತಲೆಮಾರಿನ ಎಂಜಿನ್ನಲ್ಲಿ ಮೂರು ಸ್ಪಾರ್ಕ್ ಪ್ಲಗ್ಗಳನ್ನು ಅಳವಡಿಸಿಕೊಂಡಿದೆ.

ಈಗಾಗಲೇ ಭಾರೀ ಶಕ್ತಿಶಾಲಿ ಬೈಕ್ ಎಂದೇ ಖ್ಯಾತಿ ಹೊತ್ತಿರುವ ಕೆಟಿಎಂ ಡ್ಯೂಕ್ 200 ಕೇವಲ ಒಂದು ಸ್ಪಾರ್ಕ್ ಪ್ಲಗ್ ಹೊಂದಿದೆ. ಕವಾಸಕಿ ನಿಂಜಾ 650ಆರ್ ಎರಡು ಸಿಲೆಂಡರ್ ಹೊಂದಿದ್ದರೂ ಎರಡೇ ಸ್ಪಾರ್ಕ್ಗಳನ್ನು ಹೊಂದಿದೆ.

ಆದರೆ ಬಜಾಜ್ ಪಲ್ಸರ್ 200ಎನ್ಎಸ್ ಮಾತ್ರ ಒಂದೇ ಸಿಲೆಂಡರ್ ಎಂಜಿನ್ಗೆ ಮೂರು ಸ್ಪಾರ್ಕ್ ಪ್ಲಗ್ಗಳನ್ನು ಅಳವಡಿಸಿದ್ದೇಕೆ? ಎಂದು ಹಲವರು ತಲೆ ಕೆರೆದುಕೊಳ್ಳುತ್ತಿದ್ದಾರೆ. ಇನ್ನೂ ಹಲವರು ಇದೊಂದು ಮಾರಾಟ ಗಿಮಿಕ್ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಹಾಗಿದ್ದರೆ ಇದರ ಅಸಲಿಯತ್ತು ಏನು?

ಭಾರತದಲ್ಲೇ ಮೊದಲ ಬಾರಿಗೆ ಏಕ ಸಿಲೆಂಡರ್ ಎಂಜಿನ್ಗೆ ಎರಡು ಸ್ಪಾರ್ಕ್ ಪ್ಲಗ್ ಅಳವಡಿಸಿದ ಕೀರ್ತಿ ಬಜಾಜ್ ಕಂಪೆನಿಗೆ ಸೇರುತ್ತದೆ. 2003ರಲ್ಲಿ ತಾನು ಅಭಿವೃದ್ಧಿಪಡಿಸಿದ ಡಿಟಿಎಸ್-ಐ (ಡಿಜಿಟಲ್ ಟ್ವಿನ್ ಸ್ಪಾರ್ಕ್ಪ್ಲಗ್ ಇಗ್ನೀಷನ್) ಎಂಜಿನ್ನಲ್ಲಿ ಒಂದೇ ಸ್ಪಾರ್ಕ್ಪ್ಲಗ್ ಇರುವ ಎಂಜಿನ್ಗಿಂತ ಎರಡು ಸ್ಪಾರ್ಕ್ ಪ್ಲಗ್ ಇರುವ ಎಂಜಿನ್ನಲ್ಲಿ ಗಾಳಿ ಹಾಗೂ ಇಂಧನದ ಮಿಶ್ರಣ ಸರಿಯಾಗಿ ಆಗಲಿದೆ ಎಂದು ವಾದ ಮಂಡಿಸಿತ್ತು. ಆದರೆ ಕೆಲ ವರ್ಷಗಳ ನಂತರ ಇದೇ ತಂತ್ರಜ್ಞಾನವನ್ನು ಟಿವಿಎಸ್ ತನ್ನ 125 ಸಿಸಿ ಬೈಕ್ಗೆ ಹಾಗೂ ರಾಯಲ್ ಎನ್ಫೀಲ್ಡ್ ತನ್ನ ಎಲ್ಲಾ ಮಾದರಿ ಬೈಕ್ಗಳಿಗೂ ಅಳವಡಿಸಿತು.

ಹಾಗಿದ್ದರೆ ಎರಡು ಸ್ಪಾರ್ಕ್ ಪ್ಲಗ್ಗಿಂತ ಮೂರರಲ್ಲಿ ಏನಿದೆ? ಸ್ಪಾರ್ಕ್ ಪ್ಲಗ್ಗಳು ಗಾಳಿ ಹಾಗೂ ಇಂಧನವನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರಣ ಮಾಡಿ ಅದು ಸರಿಯಾಗಿ ಉರಿದು ಅದರಿಂದ ಗರಿಷ್ಠ ಶಕ್ತಿಯನ್ನು ಎಂಜಿನ್ಗೆ ಒದಗಿಸುವುದು ಇದರ ಕೆಲಸ. ಇದರ ಸಂಖ್ಯೆ ಹೆಚ್ಚಾದಂತೆ ಕಾರ್ಯಕ್ಷಮತೆಯೂ ಹೆಚ್ಚಾಗಲಿದೆ. ಅಂದರೆ ಇಂಧನ ಕ್ಷಮತೆ, ಎಂಜಿನ್ ಕಾರ್ಯಕ್ಷಮತೆ ಹಾಗೂ ಹೆಚ್ಚು ಹೊಗೆ ಉಗುಳದೆ ಪರಿಸರ ಕಾಪಾಡುವ ಜವಾಬ್ದಾರಿಯನ್ನೂ ಇದು ಮಾಡಲಿದೆ.

ಒಂದೇ ಎಂಜಿನ್ಗೆ ಮೂರು ಸ್ಪಾರ್ಕ್ ಪ್ಲಗ್ ಅಳವಡಿಸಿರುವ ಬಜಾಜ್, ಮೊದಲ ಹಾಗೂ ಮುಖ್ಯವಾದ ಸ್ಪಾರ್ಕ್ ಪ್ಲಗ್ ಅನ್ನು ಮೇಲೆ ಕೇಂದ್ರ ಭಾಗದಲ್ಲಿ ಜೋಡಿಸಿದೆ. ಇನ್ನುಳಿದ ಎರಡನ್ನು ಕೆಳಗೆ ಅಳವಡಿಸಿದೆ. ಮೊದಲನೆಯ ಸ್ಪಾರ್ಕ್ ಪ್ಲಗ್ ಕೆಲಸ ಆರಂಭಿಸಿದ ಕೆಲವೇ ಕ್ಷಣಗಳ ನಂತರ ಎರಡನೆಯದು ಕೆಲಸ ಆರಂಭಿಸಲಿದೆ.

ಈ ಸಮಯದ ಅಂತರವನ್ನು ಆಕ್ಸಲರೇಟರ್ನ ಸ್ಥಿತಿ, ಎಂಜಿನ್ ಮೇಲಿನ ಹೊರೆ ಇತ್ಯಾದಿ ಅಂಶಗಳನ್ನು ಆಧರಿಸಿ ಎಲೆಕ್ಟ್ರಾನಿಕ್ ಕಂಟ್ರೋಲ್ ಯೂನಿಟ್ (ಇಸಿಯು) ನಿರ್ಧರಿಸಲಿದೆ. ಇದರಿಂದ ಇದೇ ಸಾಮರ್ಥ್ಯದ ಇತರ ಬೈಕ್ಗಳಿಗೆ ಹೋಲಿಸಿದಲ್ಲಿ ಪಲ್ಸರ್ 200ಎನ್ಎಸ್ ಇಂಧನ ಕ್ಷಮತೆಯಲ್ಲಿ ಕೊಂಚ ಮುಂದಿದೆ. ಆದರೆ ಅಧಿಕ ವೇಗ ಹಾಗೂ ಕಾರ್ಯಕ್ಷಮತೆಯಲ್ಲಿ ಇದೇ ಮಾತನ್ನು ಹೇಳಲಾಗದು.

ಎರಡು ಸ್ಪಾರ್ಕ್ ಪ್ಲಗ್ ಅಳವಡಿಸಿದಾಗ ಎಂಜಿನ್ನ ಕಾರ್ಯಕ್ಷಮತೆ ಶೇ 18ರಷ್ಟು ಹೆಚ್ಚಾಗಿತ್ತು. ಆದರೆ ಮೂರನೆಯದನ್ನು ಬಳಸಲು ಆರಂಭಿಸಿದ ಮೇಲೆ ಇದರ ಪ್ರಮಾಣ ಶೇ 27ಕ್ಕೆ ಏರಿದೆ. ಅಂದರೆ ಬಜಾಜ್ ಪಲ್ಸರ್ 200 ಬೈಕ್ 97 ಪಿಎಸ್ ಶಕ್ತಿ ಉತ್ಪಾದಿಸಬಲ್ಲದಾದರೆ 200ಎನ್ಎಸ್ 117 ಪಿಎಸ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಮೂರನೇ ಸ್ಪಾರ್ಕ್ಪ್ಲಗ್ನಿಂದಾಗಿ ಆಗಿರುವ ಅನುಕೂಲಗಳಲ್ಲಿ ಮತ್ತೊಂದು ಬೈಕ್ನ ಹೊಗೆ ಉಗುಳುವಿಕೆ ಸಾಧನವನ್ನು ಅಂದರೆ ಎಕ್ಸಾಸ್ಟ್ ಸಿಸ್ಟಂ ಮೇಲಿನ ಹೊರೆ ಇಳಿದಂತಾಗಿದೆ. ಪಲ್ಸರ್ 200ಎನ್ಎಸ್ ಎಕ್ಸಾಸ್ಟ್ ಚೇಂಬರ್ ಬದಲಾಯಿಸಬೇಕೆಂದರೆ 6,000ರೂಪಾಯಿಯ (ಪಲ್ಸರ್ 220ಎಫ್- ರೂ. 8,800 ಹಾಗೂ ಕೆಟಿಎಂ ಡ್ಯೂಕ್- ರೂ. 9,250) ಅಗತ್ಯವಿದೆ.

ಏಕೆಂದರೆ ಇಂಧನ ಉರಿದು ಶಕ್ತಿ ಉತ್ಪಾದಿಸುವ ಕ್ರಿಯೆಯಲ್ಲಿ ಕೆಲವೊಂದು ವಿಷಕಾರಿ ರಾಸಾಯನಿಕಗಳು ಬಿಡುಗಡೆಯಾಗುತ್ತವೆ. ಇವು ವಾತಾವರಣಕ್ಕೆ ಭಾರೀ ಅನಾಹುತ ತಂದೊಡ್ಡಬಹುದು. ಹೀಗಾಗಿ ಅವುಗಳಿಗೆ ಎಕ್ಸಾಸ್ಟ್ ಚೇಂಬರ್ನಲ್ಲಿ ತಡೆ ಹಾಕಲಾಗುತ್ತದೆ.

ಇಂದು ಪ್ರತಿಯೊಬ್ಬ ವಾಹನ ತಯಾರಕರೂ ಎಕ್ಸಾಸ್ಟ್ ಸಿಸ್ಟಂನಲ್ಲಿ `ಕ್ಯಾಟಲಿಟಿಕ್ ಕನ್ವರ್ಟರ್~ ಬಳಸುತ್ತಿದ್ದಾರೆ. ಇದು ಅಪಾಯಕಾರಿ ಅನಿಲವನ್ನು ಶೋಧಿಸಿ ಅಪಾಯಮುಕ್ತ ಅನಿಲವನ್ನು ವಾತಾವರಣಕ್ಕೆ ಬಿಡುವ ಕೆಲಸ ಮಾಡುತ್ತದೆ. ಇದು ಜೇನಿನ ಹುಟ್ಟಿನಂತಿರುತ್ತದೆ. ಇದರ ಮೇಲೆ ಪಲ್ಲಾಡಿಯಂ/ ಪ್ಲಾಟಿನಂ ಕಣಗಳನ್ನು ಸಿಂಪಡಿಸಲಾಗಿರುತ್ತದೆ. ಇದು ದುಬಾರಿಯಾದ್ದರಿಂದ ಇದರ ಬೆಲೆಯೂ ದುಬಾರಿ.

ಈ ಹಂತದಲ್ಲಿ ಬಜಾಜ್ ತನ್ನ ಪಲ್ಸರ್ 200ಎನ್ಎಸ್ನಲ್ಲಿ ಮೂರನೇ ಸ್ಪಾರ್ಕ್ ಪ್ಲಗ್ ಪರಿಚಯಿಸುವ ಮೂಲಕ ದಹನ ಕ್ರಿಯೆ ಉತ್ತಮಗೊಂಡು ಹಾನಿಕಾರಕ ಉಪವಸ್ತುಗಳು ಬಿಡುಗಡೆಯಾಗುವ ಪ್ರಮಾಣವನ್ನು ತಗ್ಗಿಸಿದೆ.

ಹೀಗಾಗಿ ಪಲ್ಸರ್ 200ಎನ್ಎಸ್ನ ಎಕ್ಸಾಸ್ಟ್ ಚೇಂಬರ್ನಲ್ಲಿ ಸಾಮಾನ್ಯಕ್ಕಿಂತ ಪುಟ್ಟ ಗಾತ್ರದ ಕ್ಯಾಟಲಿಟಿಕ್ ಕನ್ವರ್ಟರ್ ಬಳಸಲಾಗಿರುವುದೇ ಇದರ ಬೆಲೆ ಕಡಿಮೆ ಇರಲು ಕಾರಣ.

ಕ್ಯಾಟಲಿಟಿಕ್ ಕನ್ವರ್ಟರ್ ಇದೆ ಎಂದು ತಿಳಿಯುವುದು ಹೇಗೆ? ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡಬಹುದು. ಭಾರತದಲ್ಲಿ ತಯಾರಾಗುವ ಯಾವುದೇ ಬೈಕ್ ಅನ್ನು ಒಂದಷ್ಟು ಕಿಲೋ ಮೀಟರ್ ದೂರ ಓಡಿಸಿದ ನಂತರ ಎಂಜಿನ್ ಬಂದ್ ಮಾಡಿ ನಿಲ್ಲಿಸಿದ ನಂತರ `ಟಿಕ್-ಟಿಕ್~ ಎಂಬ ಶಬ್ದ ಎಂಜಿನ್ನಿಂದ ಕೇಳಿಬರುತ್ತದೆ.

ಎಕ್ಸಾಸ್ಟ್ ಸಿಸ್ಟಂನಲ್ಲಿರುವ ಕ್ಯಾಟಲಿಟಿಕ್ ಕನ್ವರ್ಟರ್ ವ್ಯವಸ್ಥೆ ವಿವಿಧ ಹಂತಗಳಲ್ಲಿ ಎಂಜಿನ್ ಅನ್ನು ತಣ್ಣಗಾಗಿಸುವ ಕ್ರಿಯೆ ಇದು. ಆದರೆ ಈ ಶಬ್ದ ಪಲ್ಸರ್ 200ಎನ್ಎಸ್ನಲ್ಲಿ ಕ್ಯಾಟಲಿಟಿಕ್ ಚೇಂಬರ್ನ ಗಾತ್ರ ಸಣ್ಣದಾಗಿರುವುದರಿಂದ ಈ ಶಬ್ದ ಕೇಳಿಸದು.

ಡಿಟಿಎಸ್ಐ
ಡಿಜಿಟಲ್ ಟ್ವಿನ್ ಸ್ಪಾರ್ಕ್ ಇಗ್ನೀಷನ್ (ಡಿಟಿಎಸ್ಐ) ಎನ್ನುವುದು ಬಜಾಜ್ನ ಟ್ರೇಡ್ಮಾರ್ಕ್. ಇದರ ಭಾರತೀಯ ಪೇಟೆಂಟ್ ಅನ್ನು ಬಜಾಜ್ ಪಡೆದಿದೆ. 1995ರಿಂದ 1997ರ ವರೆಗೂ ಬಿಎಂಡಬ್ಲೂ ಎಫ್650 ಫಂಡ್ಯೂರೊ ವಾಹನವು ಆಲ್ಫಾ ರೋಮಿಯೋ ಟ್ವಿನ್ ಸ್ಪಾರ್ಕ್ ಎಂಜಿನ್ ಅನ್ನು ಭಾರತಕ್ಕೆ ಪರಿಚಯಿಸಿತ್ತು.

ಅದರಂತೆ ಹೊಂಡಾ ಕಂಪೆನಿಯು ರೊಟಾಕ್ಸ್ ಮೋಟಾರ್ ಸೈಕಲ್ ಎಂಜಿನ್ ಎಂಬ ಐಡಿಎಸ್ಐ ಎಂಬ ತಂತ್ರಜ್ಞಾನವನ್ನು ಇದೇ ಮಾದರಿಯಲ್ಲಿ ಎರಡು ಸ್ಪಾರ್ಕ್ ಪ್ಲಗ್ ಬಳಸಿ ಅಭಿವೃದ್ಧಿಪಡಿಸಿದೆ.

ಪೇಟೆಂಟ್ ವಿವಾದ
ಪಲ್ಸರ್ ಡಿಟಿಎಸ್ಐ ಮಾರುಕಟ್ಟೆಗೆ ಬಂದ ನಂತರ 2007ರಲ್ಲಿ ಟಿವಿಎಸ್ ಕೂಡಾ ತನ್ನ ಫ್ಲೇಮ್ ಎಂಬ ಬೈಕ್ಗೆ ಇದೇ ತಂತ್ರಜ್ಞಾನವನ್ನು ಅಳವಡಿಸಿತು. ಇದನ್ನು ತೀವ್ರವಾಗಿ ಆಕ್ಷೇಪಿಸಿದ ಬಜಾಜ್ ಕೋರ್ಟ್ ಮೆಟ್ಟಿಲೇರಿತು.

2008ರಲ್ಲಿ ಪ್ರಕರಣವನ್ನು ಆಲಿಸಿದ ಮದ್ರಾಸ್ ಹೈಕೋರ್ಟ್ ಡಿಟಿಎಸ್ಐ ತಂತ್ರಜ್ಞಾನವನ್ನು ಫ್ಲೇಮ್ನಲ್ಲಿ ಬಳಸದಂತೆ ಸೂಚಿಸಿತು. ಅದರಂತೆ ಮಾರ್ಚ್ 2008ರಲ್ಲಿ ಟಿವಿಎಸ್ ಸುಧಾರಿತ ಏಕ ಸ್ಪಾರ್ಕ್ ಪ್ಲಗ್ ಎಂಜಿನ್ ಹೊಂದಿರುವ ಫ್ಲೇಮ್ ಮಾದರಿಯನ್ನು ಪರಿಚಯಿಸಿತು.

ಇದೊಂದು ಸಾಧಾರಣ ತಂತ್ರಜ್ಞಾನವಾಗಿದ್ದು ಒಂದು ಸ್ಪಾರ್ಕ್ ಪ್ಲಗ್ನ ಬದಲಾಗಿ ಎರಡು ಬಳಸುವ ತಂತ್ರಜ್ಞಾನವಾಗಿದೆ ಎಂಬ ವಾದ ಮುಂದಿಟ್ಟು ಸುಪ್ರೀಂಕೋರ್ಟ್ನ ಮೆಟ್ಟಿಲೇರಿದ ಟಿವಿಎಸ್ಗೆ ಜಯ ಸಿಕ್ಕಿತು. ಟಿವಿಎಸ್ ಕಂಪೆನಿಯು 125 ಸಿಸಿ ಸಾಮರ್ಥ್ಯದ ತನ್ನ ಫ್ಲೇಮ್ ಮಾದರಿಯಲ್ಲಿ ಎರಡು ಸ್ಪಾರ್ಕ್ ಪ್ಲಗ್ ಬಳಸಲು 6ನೇ ಸೆಪ್ಟೆಂಬರ್ 2009ರಂದು ಸುಪ್ರೀಂಕೋರ್ಟ್ ಅನುಮತಿ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.