ಶನಿವಾರ, ಜನವರಿ 18, 2020
18 °C
ಚೆಲ್ಲಾಪಿಲ್ಲಿ

ಹೊಸ ವೈ–ಫೈ ಸಾಧನ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸ ವೈ–ಫೈ ಸಾಧನ ಬಿಡುಗಡೆ

ವೈರ್‌ಲೆಸ್ ಅಂತರ್ಜಾಲ ಸಂಪರ್ಕ ಸೇವೆ ಒದಗಿಸುತ್ತಿರುವ ಟಾಟಾ ಡೊಕೊಮೊ ಫೊಟಾನ್, ‘ಫೊಟಾನ್ ಮ್ಯಾಕ್ಸ್ ವೈ-ಫೈ’ ಸಾಧನವನ್ನು ಬಿಡುಗಡೆ ಮಾಡಿದೆ.‘ಈ ಸಾಧನವನ್ನು ಬಳಸಿಕೊಂಡು ’ಟಾಟಾ ಡೊಕೊಮೊ’ ಚಂದಾದಾರರು ತಮ್ಮದೇ ಆದ ರೀತಿಯಲ್ಲಿ ವೈರ್‌ಲೆಸ್ ಫಿಡಿಲಿಟಿ (ವೈ-ಫೈ) ವಲಯವನ್ನು ಸೃಷ್ಟಿಸಿಕೊಳ್ಳಬಹುದು. ಅದರ ಮೂಲಕ ಎಲ್ಲಿಯೇ ಆಗಲೀ, ಯಾವುದೇ ಸಮಯದಲ್ಲಾಗಲೀ ಲ್ಯಾಪ್‌ಟಾಪ್, ಡೆಸ್ಕ್‌ಟಾಪ್, ಟ್ಯಾಬ್ಲೆಟ್ ಅಥವಾ ಮೊಬೈಲ್ ಫೋನ್‌ಗೆ ಅಂತರ್ಜಾಲ ಸಂಪರ್ಕವನ್ನು ಸುಲಭವಾಗಿ ಪಡೆದುಕೊಳ್ಳಬಹುದು. ಮಾತ್ರವಲ್ಲ ಒಂದೇ ಬಾರಿಗೆ ಐದು ಗ್ಯಾಡ್ಜೆಟ್‌ಗಳಿಗೂ ಅಂತರ್ಜಾಲ ಸಂಪರ್ಕ ಸಾಧ್ಯವಾಗಿಸಿಕೊಳ್ಳಬಹುದು.ವಿಡಿಯೊ ಆನ್ ಡಿಮ್ಯಾಂಡ್, ವಿಡಿಯೊ ಸ್ಟ್ರೀಮಿಂಗ್, ಅತ್ಯಂತ ವೇಗವಾಗಿ ದತ್ತಾಂಶ ವರ್ಗಾವಣೆ ಹಾಗೂ ವೈಯಕ್ತಿಕ ಮತ್ತು ಸಾಂಸ್ಥಿಕ ತಂತ್ರಾಂಶಗಳ ಸೇವೆಯನ್ನೂ ಫೊಟಾನ್ ಮ್ಯಾಕ್ಸ್ ವೈ-ಫೈ ಮೂಲಕ ಸರಳ ಹಾಗೂ ವೇಗವಾಗಿ ಪಡೆದುಕೊಳ್ಳಲು ಸಾಧ್ಯವಿದೆ.ಇದರಿಂದಾಗಿ ಪೋಟಾನ್ ವೈ-ಫೈ ವೈರ್‌ಲೆಸ್ ಅಂತರ್ಜಾಲ ಸಂಪರ್ಕ ಸಾಧನ ಸಮಗ್ರ ಸ್ವರೂಪದಲ್ಲಿ ಹೊಸತೇ ಆದ ದೂರಸಂಪರ್ಕ ಸೇವೆಗಳನ್ನು ಸಾಧ್ಯವಾಗಿಸುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ಇದರ ಬೆಲೆ 1999 ರೂಪಾಯಿ.

ಪ್ರತಿಕ್ರಿಯಿಸಿ (+)