ಮುಡಿಪು: ಕೊಣಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಸೈಗೋಳಿ ಜಂಕ್ಷನ್ನಲ್ಲಿರುವ ಹೋಟೆಲ್ನಲ್ಲಿ 13 ವರ್ಷದ ಬಾಲಕನೊಬ್ಬ ಕೆಲಸಕ್ಕಿರುವುದು ಮಂಗಳೂರು ರೋಶನಿ ನಿಲಯದ ಬಿಎಸ್ಡಬ್ಲ್ಯು ವಿದ್ಯಾರ್ಥಿಗಳ ಸಹಕಾರದಿಂದ ಶುಕ್ರವಾರ ಪತ್ತೆಯಾಗಿದ್ದು, ಬಳಿಕ ಚೈಲ್ಡ್ಲೈನ್ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಹೊಟೇಲ್ ದಾಳಿ ನಡೆಸಿ ಬಾಲಕನನ್ನು ರಕ್ಷಿಸಿದರು. ನಂತರ ಅಧಿಕಾರಿಗಳು ಮಾಲೀಕನ ವಿರುದ್ಧ ಕಾನೂನು ಕ್ರಮ ಕೈಗೊಂಡರು.

ಆಂಧ್ರಪ್ರದೇಶದ ಕಿತ್ತೂರು ಜಿಲ್ಲೆ ಚಿನ್ನಯ್ಯಪಳ್ಳಿಯ ಅಮೀರ್ ಸಾಹೀಬ್ ಎಂಬವರ ಪುತ್ರ ಝುಬೈರ್ ಎಂಬಾತನೇ ಬಾಲಕಾರ್ಮಿಕನಾಗಿದ್ದವನು. ಆಂಧ್ರದಿಂದ ಸಂಬಂಧಿಕರ ಮನೆಗೆಂದು ಬಂದಿದ್ದ ಈತ ಶಾಲೆಗೆ ಹೋಗುವುದನ್ನು ಬಿಟ್ಟು ಹೊಟೇಲ್ನಲ್ಲಿ ಕೆಲಸಕ್ಕೆ ಸೇರಿದ್ದ. ಇದೇ ಹೊಟೇಲ್ನಲ್ಲಿ ಈತನ ಸಂಬಂಧಿಯೂ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.

ಮಂಗಳೂರಿನ ರೋಶನಿ ನಿಲಯದ ಬಿಎಸ್ಡಬ್ಲ್ಯು ವಿದ್ಯಾರ್ಥಿಗಳಾದ ಅರುಣ್, ಮಹಮ್ಮದ್ ಮುಸ್ತಫಾ, ಅರ್ಪಿತಾ ಹಾಗೂ ನಿಖಿತಾ ಎಂಬವರು `ಬಾಲ ಕಾರ್ಮಿಕರ ಸಮೀಕ್ಷೆ~ ಅಧ್ಯಯನದ ವೇಳೆ ಕೊಣಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಶುಕ್ರವಾರ ಈ ವಿದ್ಯಾರ್ಥಿಗಳು ಅಸೈಗೋಳಿ ಬಳಿ ಸಮೀಕ್ಷೆ ನಡೆಸುತ್ತಿದ್ದಾಗ ಪ್ಲಾಜಾ ಹೊಟೇಲ್ನಲ್ಲಿ ಬಾಲಕನೊಬ್ಬ ಕಾರ್ಮಿಕನಾಗಿರುವ ವಿಚಾರ ತಿಳಿಯಿತು.

ಹೊಟೇಲ್ ಪ್ರವೇಶಿಸಿದ ವಿದ್ಯಾರ್ಥಿಗಳಿಗೆ ಒಳಗಡೆ ಕಸ ಗುಡಿಸುತ್ತಿದ್ದ ಬಾಲಕ ಕಣ್ಣಿಗೆ ಬಿದ್ದ. ಈ ಬಗ್ಗೆ ವಿಚಾರಿಸಿದಾಗ ಹೊಟೇಲ್ ಮಾಲೀಕ, `ಈತ ಇಲ್ಲಿ ಕೆಲಸಕ್ಕೆ ಸೇರಿ 3 ದಿನವಷ್ಟೇ ಆಗಿದೆ~ ಎಂದು ಹೇಳಿ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು. ನಂತರ ಪರಿಸರದಲ್ಲಿ ವಿಚಾರಿಸಿದಾಗ ಬಾಲಕ 3 ತಿಂಗಳಿಂದ ಕೆಲಸಕ್ಕಿರುವುದು ತಿಳಿದುಬಂದಿತು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.

ನಂತರ ಕಾಲೇಜಿಗೆ ಹಾಗೂ ಚೈಲ್ಡ್ ಲೈನ್ ಸಂಸ್ಥೆಗೆ ವಿಷಯ ತಿಳಿಸಿದರು. ಈ ಸಂದರ್ಭದಲ್ಲಿ ಹೋಟೆಲ್ ಮಾಲೀಕ ಹುಡುಗನ್ನು ಬೇರೆಡೆಗೆ ಕರೆದೊಯ್ದಿದ್ದ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಸಂಜೆ ವೇಳೆಗೆ ಚೈಲ್ಡ್ ಲೈನ್ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಮಂಗಳೂರು ಪೊಲೀಸ್ ಅಧಿಕಾರಿ ಜತೆಗೆ ಹೋಟೆಲ್ಗೆ ಬಂದು ಬಾಲಕ ಹಾಗೂ ಮಾಲೀಕನನ್ನು ವಿಚಾರಣೆ ನಡೆಸಿದರು.

ಬಾಲಕ ಸಂಬಂಧಿಕರ ಮನೆಗೆಂದು ಬಂದಿದ್ದ. ಹೊಟೇಲ್ನಲ್ಲಿ ಕೆಲಸಕ್ಕಿರಲಿಲ್ಲ ಎಂದು ಮಾಲೀಕ ವಾದಿಸಿದ. ಆಗ ವಿದ್ಯಾರ್ಥಿಗಳು ಹಾಗೂ ಹೊಟೇಲ್ ಮಾಲೀಕನ ನಡುವೆ ವಾಗ್ವಾದ ಉಂಟಾಯಿತು. ನಂತರ ಅಧಿಕಾರಿಗಳು ಸಮಾಧಾನಪಡಿಸಿ ಬಾಲಕಾರ್ಮಿಕ ಝುಬೈರ್ನ ವಿಚಾರಣೆ ನಡೆಸಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದರು.

ಶಾಲೆ ಬಿಟ್ಟು ಬಂದಿದ್ದ: ಕೊಣಾಜೆಯ ಅಸೈಗೋಳಿ ಹೊಟೇಲ್ ಪ್ಲಾಝಾದಲ್ಲಿ ಪತ್ತೆಯಾದ ಹದಿಮೂರರ ಹರೆಯದ ಬಾಲಕಾರ್ಮಿಕ ಝುಬೈರ್ ಆಂಧ್ರಪ್ರದೇಶದ ಚಿನ್ನಯ ಪಳ್ಳಿ ಎಂಬಲ್ಲಿಯ ಭದ್ರಾಚಲಂ ಸರಕಾರಿ ತೆಲುಗು ಶಾಲೆಯಲ್ಲಿ 7ನೇ ತರಗತಿವರೆಗೆ ಕಲಿತು ನಂತರ ಮಂಗಳೂರು ತಾಲೂಕಿನ ಕೀನ್ಯಾ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದ. ಈತನ ತಂದೆ-ತಾಯಿಗೆ ನಾಲ್ವರು ಮಕ್ಕಳು. ಈತ ಕೊನೆಯವ.

`ಅಧಿಕಾರಿಗಳು ತಡವಾಗಿ ಬಂದರು~
ರೊಶನಿ ನಿಲಯದ ನಾಲ್ವರು ವಿದ್ಯಾರ್ಥಿಗಳು ಅಸೈಗೋಳಿ ಹೋಟೆಲ್ನಲ್ಲಿ ಬಾಲಕಾರ್ಮಿಕ ಇರುವ ಬಗ್ಗೆ ಚೈಲ್ಡ್ ಲೈನ್ ಸಂಸ್ಥೆಗೆ ಮಧ್ಯಾಹ್ನವೇ ದೂರು ನೀಡಿದ್ದರೂ ನಿರ್ಲಕ್ಷವಹಿಸಿದ ಅಧಿಕಾರಿಗಳು ಸಂಜೆ 4 ಗಂಟೆಗೆ ಆಗಮಿಸಿದರು. ಆವರೆಗೂ ವಿದ್ಯಾರ್ಥಿಗಳು ಕಾದು ಕುಳಿತಿದ್ದರು.

`ಮಧ್ಯಾಹ್ನ 10ಕ್ಕೂ ಹೆಚ್ಚು ಬಾರಿ ಕರೆ ಮಾಡಿದರೂ ಈಗ ಬರುತ್ತೇವೆ ಎಂದಷ್ಟೇ ಉತ್ತರಿಸುತ್ತ್ದ್ದಿದರು. ನಾವು ಊಟವನ್ನೂ ಮಾಡದೇ ಕಾದುಕುಳಿತಿದ್ದೆವು. ಅಧಿಕಾರಿಗಳು ತಡವಾಗಿ ಬಂದಿದ್ದೇ ಅಲ್ಲದೆ, ನಿಮಗೆ ಈ ಕೆಲಸ ಮಾಡಲು ಹೇಳಿದ್ದು ಯಾರು ಎಂದು ನಮ್ಮನ್ನೇ ಗದರಿಸಿದರು~ ಎಂದು ವಿದ್ಯಾರ್ಥಿಗಳು ಪ್ರಜಾವಾಣಿ ಬಳಿ ಅಸಮಾಧಾನ ತೋಡಿಕೊಂಡರು.

ದ.ಕ.: ಬಾಲಕಾರ್ಮಿಕ ಸಮಸ್ಯೆ
ಸರ್ಕಾರ ಬಾಲಕಾರ್ಮಿಕ ಸಮಸ್ಯೆ ಪೂರ್ಣ ತೊಡೆದು ಹಾಕಲು ಹಲವು ಕಾನೂನು ಜಾರಿಗೆ ತಂದಿದ್ದರೂ ಬುದ್ಧಿವಂತರ ಜಿಲ್ಲೆ ದಕ್ಷಿಣ ಕನ್ನಡದಲ್ಲಿ ಇನ್ನೂ ಸಮಸ್ಯೆ ವ್ಯಾಪಕವಾಗಿದೆ ಎನ್ನುವುದಕ್ಕೆ ಅಸೈಗೋಳಿಯಲ್ಲಿ ಪತ್ತೆಯಾದ ಪ್ರಕರಣವೇ ಸಾಕ್ಷಿ. ಪ್ರಮುಖವಾಗಿ ಹೋಟೆಲ್, ಬಾರ್ಗಳಲ್ಲಿ ಅದೆಷ್ಟೋ ಬಾಲಕರು ರಾತ್ರಿ-ಹಗಲು ದುಡಿಯುತ್ತಿದ್ದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ.

ರೋಶನಿ ನಿಲಯದ ವಿದ್ಯಾರ್ಥಿಗಳ ಇಲ್ಲಿ ಸಮೀಕ್ಷೆ ಆರಂಭಿಸಿದ ನಂತರ ಕೆಲವು ಅಂಗಡಿಗಳಲ್ಲಿ ಕೆಲಸಕ್ಕಿದ್ದ ಬಾಲಕರು ನಾಪತ್ತೆಯಾಗಿದ್ದಾರೆ ಎಂದು ಅಸೈಗೋಳಿಯ ಕೆಲವು ನಾಗರಿಕರು ತಿಳಿಸಿದ್ದಾರೆ. ಅಲ್ಲದೆ ಬಾಲಕಾರ್ಮಿಕ ಪತ್ತೆಹಚ್ಚಿ ರಕ್ಷಿಸಿದ ವಿದ್ಯಾರ್ಥಿಗಳನ್ನು ಸ್ಥಳೀಯರ ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.