ಬುಧವಾರ, ಮೇ 12, 2021
24 °C

ಹೋಮಿಯೋಪತಿ ಉಪೇಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕದ ಸರ್ಕಾರ 1961ರಲ್ಲೇ ಹೋಮಿಯೋಪತಿ ವೈದ್ಯ ಪದ್ಧತಿಗೆ ಮನ್ನಣೆ ನೀಡಿ ಪುರಸ್ಕರಿಸಿದೆಯಾದರೂ ಅದನ್ನು ಗ್ರಾಮೀಣ ಭಾಗದ ಅಶಕ್ತ ಜನರಿಗೆ ತಲುಪಿಸುವ ವಿಷಯದಲ್ಲಿ ವಿಫಲವಾಗಿದೆ.ಹೋಮಿಯೋಪತಿ ವೈದ್ಯರ  ಒತ್ತಾಯಕ್ಕೆ ಮಣಿದು ಹೋಮಿಯೋಪತಿ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆಯನ್ನು ಸ್ಥಾಪಿಸಿದೆ. ಆದರೆ  ಇಂದಿಗೂ ರಾಜ್ಯದ ಜನತೆಗೆ ಹೋಮಿಯೋಪತಿ ಚಿಕಿತ್ಸೆ ಗಗನ ಕುಸುಮವಾಗಿದೆ. ಅಪಾರ ಹಣ ಖರ್ಚು ಮಾಡಿದರೂ  ಗುಣವಾಗದ ಹಲವು ವ್ಯಾಧಿಗಳನ್ನು ಹೋಮಿಯೋಪತಿ ಚಿಕಿತ್ಸೆಯಿಂದ ಗುಣ ಪಡಿಸಬಹುದು.ಅನೇಕರಿಗೆ ಈ ಪದ್ಧತಿಯ ಬಗ್ಗೆ ಒಲವು ಇದ್ದರೂ ಚಿಕಿತ್ಸೆ ನೀಡುವ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ ಎಂಬುದು  ಸರ್ಕಾರದ ಗಮನಕ್ಕೆ ಬಂದಿಲ್ಲ. ಪ್ರತಿ ತಾಲ್ಲೂಕಿನಲ್ಲಿ ಹೋಮಿಯೋಪತಿ ಆಸ್ಪತ್ರೆಗಳನ್ನು ತೆರೆದು ಬಡ ರೋಗಿಗಳಿಗೆ ನೆರವಾಗಬಹುದು. ಹೋಮಿಯೋಪತಿ ವೈದ್ಯರ ಮತ್ತು ಬಡಜನರ ಬೇಡಿಕೆಯನ್ನು ಸರ್ಕಾರ ಗಮನಿಸಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.