ಬೆಳಗಾವಿ: ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಯ (ಕೆಎಟಿ) ಪೀಠ ವನ್ನು ಬೆಳಗಾವಿಯಲ್ಲಿ ಸ್ಥಾಪಿಸುವುದಾಗಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಮೊಬೈಲ್ ಕರೆ ಮೂಲಕ ಬುಧವಾರ ಭರವಸೆ ನೀಡಿದ್ದರಿಂದ ನ್ಯಾಯವಾದಿಗಳು ನಡೆಸಿದ್ದ ಉಪವಾಸ ಸತ್ಯಾಗ್ರಹವನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದಾರೆ.

ಶಾಸಕ ಫಿರೋಜ್ ಸೇಠ್, ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ ಮತ್ತು ರಾಜು ಸೇಠ್ ಅವರು ಉಪವಾಸ ನಿರತರ ಸಮ್ಮುಖದಲ್ಲೇ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರೊಂದಿಗೆ ಮೊಬೈಲ್ ಕರೆಯಲ್ಲಿ ಮಾತನಾಡಿಸಿದರು. ಸಚಿವ ಜಯಚಂದ್ರ ಅವರು ಕೆಎಟಿ ಯನ್ನು ಬೆಳಗಾವಿ, ಧಾರ ವಾಡ ಹಾಗೂ ಗುಲ್ಬರ್ಗಾದಲ್ಲಿ ಸ್ಥಾಪಿ ಸುವ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆಯಲ್ಲಿದೆ. ಹೀಗಾಗಿ ಚುನಾವಣಾ ನೀತಿ ಸಂಹಿತೆ ಇರುವುದರಿಂದ ಹೆಚ್ಚಿಗೆ ಏನು ಮಾತನಾಡುವುದಿಲ್ಲ. ಆದರೆ, ಚುನಾವಣೆ ಮುಗಿದ ತಕ್ಷಣ ನಿಮ್ಮ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಫಿರೋಜ್ ಸೇಠ್ ಮತ್ತು ಲಕ್ಷ್ಮಿ ಹೆಬ್ಬಾಳಕರ ಅವರು ರಾಜ್ಯ ಸರ್ಕಾರ ಬೆಳಗಾವಿ ಜಿಲ್ಲೆ ಮತ್ತು ನಗರದ ಅಭಿ ವೃದ್ಧಿಗೆ ಬದ್ಧವಾಗಿದೆ. ನ್ಯಾಯವಾದಿಗಳ ಹೋರಾಟಕ್ಕೆ ಜಯ ಸಿಗಲಿದ್ದು, ಈ ನಿಟ್ಟಿನಲ್ಲಿ ಶ್ರಮಿಸುವುದಾಗಿ ಭರವಸೆ ನೀಡಿದರು.

ವಕೀಲರ ಸಂಘದ ನೂತನ ಅಧ್ಯಕ್ಷ ವಿನಯ ಮಾಂಗಳೇಕರ ಅವರು ಸರ್ಕಾರದ ಭರವಸೆಯ ಮೇರೆಗೆ ಸತ್ಯಾಗ್ರಹ ತಾತ್ಕಾಲಿಕ ಕೈಬಿಡಲಾಗುತ್ತಿದೆ ಎಂದು ಘೋಷಿಸಿದರು. ಬಳಿಕ ಜನಪ್ರತಿನಿಧಿಗಳು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಎ.ಜಿ.ಮುಳವಾಡಮಠ, ಗುರುರಾಜ ಹುಳ್ಯೇರ, ಆರ್.ಪಿ. ಪಾಟೀಲ ಹಾಗೂ ಮೋಹನ ಮಾವಿನ ಕಟ್ಟಿ ಅವರಿಗೆ ಎಳನೀರು ಕುಡಿಸಿದರು.

ಇದಕ್ಕೂ ಮುನ್ನ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಅವರು, ಕೆಎಟಿಯನ್ನು ಸ್ಥಾಪಿಸುವ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲಿದ್ದರೇ ಬೆಳ ಗಾವಿಯಲ್ಲಿ ಸ್ಥಾಪನೆ ಮಾಡಲಾಗು ವುದು. ಸದ್ಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕಲಾ ಗುವುದು ಎಂದು ಭರವಸೆ ನೀಡಿದರು.

ಸಂಸದ ಸುರೇಶ ಅಂಗಡಿ, ಶಾಸಕ ಸಂಜಯ ಪಾಟೀಲ ಅವರು ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಿದರು. ಸತ್ಯಾಗ್ರಹಕ್ಕೆ ವಿವಿಧ ಕನಡ ಪರ ಸಂಘಟ ನೆಗಳ ಮುಖಂಡರು, ಪಾಲಿಕೆ ಸದಸ್ಯರು, ಕಾಲೇಜು ವಿದ್ಯಾರ್ಥಿಗಳು ಬೆಂಬಲ ಸೂಚಿಸಿದರು.
ರಮೇಶ ದೇಶಪಾಂಡೆ, ಆರ್.ಸಿ. ಪಾಟೀಲ, ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾದ ಕೆ.ಬಿ. ನಾಯಕ, ಎ.ಆರ್. ಪಾಟೀಲ ಮತ್ತಿತರರು ಭಾಗವಹಿ ಸಿದ್ದರು.

ಅಸ್ವಸ್ಥರಾದ ವಕೀಲರು: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಆರ್.ಪಿ. ಪಾಟೀಲ ಅವರ ಆರೋಗ್ಯದಲ್ಲಿ ಏರುಪೇರು ಆಗಿದ್ದರಿಂದ ಸತ್ಯಾಗೃಹದ ಸ್ಥಳದಲ್ಲೆ ಕುಸಿದು ಬಿದ್ದ ಘಟನೆ ಬುಧವಾರ ನಡೆಯಿತು.

ಸ್ಥಳದಲ್ಲಿಯೇ ವೈದ್ಯರು ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರು. ಸದ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಚಿಕ್ಕೋಡಿ ವರದಿ
ಕೆಎಟಿ ಶಾಶ್ವತ ಪೀಠವನ್ನು ಬೆಳಗಾವಿ ಯಲ್ಲಿಯೇ ಸ್ಥಾಪಿಸಬೇಕು ಎಂದು ಒತ್ತಾ ಯಿಸಿ ಬೆಳಗಾವಿ ವಕೀಲರ ಸಂಘ ನಡೆಸುತ್ತಿರುವ ಉಪವಾಸ ಸತ್ಯಾ ಗ್ರಹಕ್ಕೆ ಚಿಕ್ಕೋಡಿ ವಕೀಲರ ಸಂಘದ ಸದ ಸ್ಯರೂ ಇದೇ 4 ಮತ್ತು 5 ರಂದು ನ್ಯಾಯಾ ಲಯದ ಕಲಾಪಗಳಿಂದ ದೂರ ಉಳಿ ಯುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ.

‘ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿಯಲ್ಲಿ ದಾಖಲಾಗುವ ಒಟ್ಟಾರೆ ಪ್ರಕರಣಗಳ ಅವಲೋಕನ ನಡೆಸಿದಾಗ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ದೂರುಗಳ ಪ್ರಮಾಣ ಹೆಚ್ಚಾಗಿರು ವುದು ಕಂಡು ಬಂದಿದೆ. ರಾಜ್ಯದ ಎರ ಡನೇ ರಾಜಧಾನಿ ಎಂದು ಹೇಳಲಾಗುವ ಬೆಳಗಾವಿಯಲ್ಲಿ ಕೆಎಟಿ ಶಾಶ್ವತ ಪೀಠ ವನ್ನು ಸ್ಥಾಪನೆ ಮಾಡಬೇಕು. ಹಾಗೂ ಚಿಕ್ಕೋಡಿ, ಹುಕ್ಕೇರಿ, ರಾಯಬಾಗ ಮತ್ತು ಅಥಣಿ ತಾಲ್ಲೂಕುಗಳ ಕಾರ್ಯ ವ್ಯಾಪ್ತಿಯನ್ನು ಒಳಗೊಂಡ 7ನೇ ಹೆಚ್ಚು ವರಿ ಜಿಲ್ಲಾ ನ್ಯಾಯಾಲಯ ಇರುವ ಚಿಕ್ಕೋಡಿಯಲ್ಲಿ ವರ್ಷದಲ್ಲಿ 2 ಬಾರಿ ಕೆಎಟಿ ಕಲಾಪಗಳು ನಡೆಯಬೇಕು ಎಂಬ ಬೇಡಿಕೆಯನ್ನು ಸಲ್ಲಿಸಿದ್ದಾಗಿ ಚಿಕ್ಕೋಡಿ ವಕೀಲರ ಸಂಘದ ಅಧ್ಯಕ್ಷ ರಾಜು ಮಿರ್ಜೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.