ದೇಶದ ಮೊಬೈಲ್ ಹ್ಯಾಂಡ್ಸೆಟ್ ಮಾರುಕಟ್ಟೆಯು 2011ರಲ್ಲಿ ಶೇ 10ರಷ್ಟು ಪ್ರಗತಿ ದಾಖಲಿದೆ. ಈ ಅವಧಿಯಲ್ಲಿ ಒಟ್ಟು 183 ದಶಲಕ್ಷ ಹ್ಯಾಂಡ್ಸೆಟ್ಗಳನ್ನು ರಫ್ತು ಮಾಡಲಾಗಿದ್ದು, ಇದರಲ್ಲಿ 3ಜಿ ಸೌಲಭ್ಯ ಇರುವ ಮೊಬೈಲ್ಗಳ ಸಂಖ್ಯೆ 18 ದಶಲಕ್ಷದಷ್ಟಿದೆ ಎಂದು ಸೈಬರ್ ಮೀಡಿಯಾ ಇತ್ತೀಚೆಗೆ ಬಿಡುಗಡೆ ಮಾಡಿರುವ `ಮೊಬೈಲ್ ಮಾರುಕಟ್ಟೆ-2011~ ವರದಿ ತಿಳಿಸಿದೆ.

ದೇಶದಿಂದ ರಫ್ತಾಗಿರುವ ಮೊಬೈಲ್ಗಳಲ್ಲಿ 97 ದಶಲಕ್ಷ ಹ್ಯಾಂಡ್ಸೆಟ್ಗಳು `ಡ್ಯುಯಲ್ ಸಿಮ್~ ಮೊಬೈಲ್ ಎನ್ನುವುದು ಗಮನಾರ್ಹ ಸಂಗತಿ.

ರಫ್ತು ವಹಿವಾಟಿನಲ್ಲಿ ಈ ಬಾರಿಯೂ ನೋಕಿಯಾ ಶೇ 31ರಷ್ಟು ಮಾರುಕಟ್ಟೆ ಪಾಲಿನೊಂದಿಗೆ ಮುಂಚೂಣಿಯಲ್ಲಿದೆ. ಶೇ 15ರಷ್ಟು ಪಾಲು ಹೊಂದಿರುವ ಸ್ಯಾಮ್ಸಂಗ್ ಮತ್ತು ಶೇ 5ರಷ್ಟು ಪಾಲು ಹೊಂದಿರುವ ಮೈಕ್ರೊಮ್ಯಾಕ್ಸ್ ನಂತರದ ಸ್ಥಾನಗಳಲ್ಲಿವೆ.

ಸ್ಮಾರ್ಟ್ಫೋನ್ ವಿಭಾಗಕ್ಕೆ ಬಂದರೆ, 2011ರಲ್ಲಿ 30 ಕಂಪೆನಿಗಳು 150ಕ್ಕೂ ಹೆಚ್ಚು ಹೊಸ ಸ್ಮಾರ್ಟ್ಫೋನ್ಗಳನ್ನು ದೇಶೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸ್ಮಾರ್ಟ್ಫೋನ್ ಮಾರಾಟಶೇ 87ರಷ್ಟು ಹೆಚ್ಚಿದ್ದು, 11 ದಶಲಕ್ಷ ಸ್ಮಾರ್ಟ್ಫೋನ್ಗಳನ್ನು ಈ ಅವಧಿಯಲ್ಲಿ ರಫ್ತು ಮಾಡಲಾಗಿದೆ.

ನೋಕಿಯಾ, ಸ್ಯಾಮ್ಸಂಗ್ ಮತ್ತು ಬ್ಲ್ಯಾಕ್ಬೆರಿ ಈ ಬಾರಿ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಅವಧಿಯಲ್ಲಿ `ಆಂಡ್ರಾಯ್ಡ~ ಕಾರ್ಯನಿರ್ವಹಣಾ ತಂತ್ರಾಂಶದ ಬಳಕೆ ಶೇ 600ರಷ್ಟು ಪ್ರಗತಿ ಕಂಡಿದೆ ಎಂದು ಸೈಬರ್ ಮೀಡಿಯಾ ಹೇಳಿದೆ.

`ವಿಂಡೋಸ್ 7.5 ಮಿಗೊ~ ಕಾರ್ಯನಿರ್ವಹಣಾ ತಂತ್ರಾಂಶದ ಜತೆಗೆ ಮೈಕ್ರೊಸಾಫ್ಟ್ ಮತ್ತು ನೋಕಿಯಾ ಪಾಲುದಾರಿಕೆಯು, 2012ರಲ್ಲಿ ದೇಶೀಯ ಸ್ಮಾರ್ಟ್ಫೋನ್ ಮಾರುಕಟ್ಟೆಯ ಚಿತ್ರಣ ಬದಲಿಸಬಹುದು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. ಸದ್ಯ ದೇಶದಲ್ಲಿ 15 ದಶಲಕ್ಷಕ್ಕಿಂತ ಹೆಚ್ಚಿನ `3ಜಿ~ ಬಳಕೆದಾರರಿದ್ದು, ಸ್ಮಾರ್ಟ್ಫೋನ್ ಬೇಡಿಕೆ ಹೆಚ್ಚಲು ಇದೂ ಪ್ರಮುಖ ಕಾರಣ ಎನ್ನಲಾಗಿದೆ.

ದತ್ತಾಂಶ ಬಳಕೆ ದುಪ್ಪಟ್ಟು ಹೆಚ್ಚಳ
ಜಾಗತಿಕ ಮೊಬೈಲ್ ಬಳಕೆ ಕುರಿತು ಸಂಶೋಧನಾ ಸಂಸ್ಥೆ `ಇನ್ಮೊಬಿ~ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಕುತೂಹಲಕರವಾಗಿವೆ. ವಿಶೇಷವಾಗಿ ಭಾರತೀಯ ಚಂದಾದಾರರಲ್ಲಿ ಶೇ 33ರಷ್ಟು ಜನ ಮೊಬೈಲ್ ಮೂಲಕವೇ ಸುದ್ದಿ, ಮಾಹಿತಿಗಳನ್ನು ನೋಡುತ್ತಾರೆ.

ಟಿವಿ ಮೂಲಕ ಸುದ್ದಿ ನೋಡುವ ಪ್ರಮಾಣಕ್ಕೆ ಹೋಲಿಸಿದರೆ ಇದು ಶೇ 27ಪಟ್ಟು ಹೆಚ್ಚಿದೆ ಎನ್ನುತ್ತದೆ ಈ ವರದಿ. ದೇಶದ ಪ್ರಮುಖ 18 ನಗರಗಳಲ್ಲಿ ಸುಮಾರು 2,500ಕ್ಕೂ ಹೆಚ್ಚು ಚಂದಾದಾರರನ್ನು ಸಂದರ್ಶಿಸಿ ಈ ಸಮೀಕ್ಷೆ ನಡೆಸಲಾಗಿದೆ.

ಭಾರತೀಯ ಮೊಬೈಲ್ ಚಂದಾದಾರರು ಪ್ರತಿ ದಿನ ಸರಾಸರಿ 94 ನಿಮಿಷಗಳನ್ನು ಮೊಬೈಲ್ನಲ್ಲಿ ಮಾಹಿತಿ ವೀಕ್ಷಿಸಲು ಮೀಸಲಿಡುತ್ತಾರೆ. ಕರೆ ಮಾಡಲು ಬಳಸುವ ಸಮಯಕ್ಕಿಂತಲೂ ಇದು ಹೆಚ್ಚಿದೆ. ಲ್ಯಾಪ್ಟಾಪ್ ಮತ್ತು ಟಿವಿಯಲ್ಲಿ ಮನರಂಜನೆ ಕಾರ್ಯಕ್ರಮ ವೀಕ್ಷಿಸುವುದಕ್ಕಿಂತಲೂ ಹೆಚ್ಚು ಜನರು ಮೊಬೈಲ್ನಲ್ಲಿ ಇಂತಹ ಕಾರ್ಯಕ್ರಮ ನೋಡುತ್ತಾರೆ.

ಟಿವಿಯಲ್ಲಿ ಶೇ 26ರಷ್ಟು ಜನ ಮನರಂಜನೆ ಕಾರ್ಯಕ್ರಮ ವೀಕ್ಷಿಸಿದರೆ ಮೊಬೈಲ್ನಲ್ಲಿ ವೀಕ್ಷಿಸುವ ಸಂಖ್ಯೆ ಶೇ 41ರಷ್ಟಿದೆ. ಶೇ 72ರಷ್ಟು ಜನ ಮೊಬೈಲ್ಗಳೇ ಪ್ರಮುಖ ಸಂವಹನ ಸಾಧನ ಎನ್ನುತ್ತಾರೆ. ಶೇ 58ರಷ್ಟು ಬಳಕೆದಾರರು ತಮ್ಮ ಮೊಬೈಲ್ ಮೂಲ ಕವೇ ಅಂತರ್ಜಾಲ ಸಂಪರ್ಕ ಪಡೆದುಕೊಳ್ಳುತ್ತಿರುವುದಾಗಿ ಹೇಳಿದ್ದಾರೆ.

ಮೊಬೈಲ್ ಅನ್ನು ಸದಾ ಜತೆಯಲ್ಲಿಯೇ ಇಟ್ಟುಕೊಳ್ಳಬಹುದು. ಕೆಲಸದ ಅವಧಿಯಲ್ಲೂ ಬಳಸಬಹುದು. ಲಘು ಭಾರ, ಸುಲಭ ನಿರ್ವಹಣೆ ಇತ್ಯಾದಿ ಸಂಗತಿಗಳು ಮೊಬೈಲ್ ಬಳಕೆ ಹೆಚ್ಚುವಂತೆ ಮಾಡಿದೆ ಎನ್ನುತ್ತದೆ ಸಂಶೋಧನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.