ಶುಕ್ರವಾರ, ಫೆಬ್ರವರಿ 26, 2021
20 °C

‘ಅಂಗವಿಕಲರನ್ನು ತಲುಪದ ಯೋಜನೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಅಂಗವಿಕಲರನ್ನು ತಲುಪದ ಯೋಜನೆ’

ಬೆಂಗಳೂರು: ‘ಅಂಗವಿಕಲರಿಗಾಗಿ ಸರ್ಕಾ­ರವು ರೂಪಿಸಿರುವ ಯೋಜನೆ ಗಳು ಪೂರ್ಣ ಪ್ರಮಾಣದಲ್ಲಿ ಅವರನ್ನು ತಲುಪುತ್ತಿಲ್ಲ’ ಎಂದು ಅಂಗವಿಕಲ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ನಿರ್ದೇಶಕ ಜಯವಿಭವ ಸ್ವಾಮಿ ಹೇಳಿದರು.ನಗರದ ಕೆಎಎಸ್‌ ಅಧಿಕಾರಿಗಳ ಸಂಘ­­ದಲ್ಲಿ ಬುಧವಾರ ನಡೆದ ‘ಅಂಗ­ವಿ­ಕಲರ ಪುನರ್ವಸತಿ ಯೋಜನೆಗಳ ಕುರಿತಾಗಿ ಅರಿವು ಮೂಡಿಸುವ ತರಬೇತಿ ಕಾರ್ಯಾಗಾರ’ ಉದ್ಘಾಟಿಸಿ ಮಾತನಾಡಿದರು. ‘ಅಂಗವಿಕಲರನ್ನು ಮದುವೆ ಯಾ­ಗುವ ಸಾಮಾನ್ಯ ವ್ಯಕ್ತಿಗೆ ₨ 50 ಸಾವಿರ ನೀಡುವ ಯೋಜನೆ ಜಾರಿ ಯಾಗಿ ವರ್ಷವಾಗಿದೆ. ಆದರೆ,  ಯೋಜ­­ನೆಯು ನಿರೀಕ್ಷಿತ ರೀತಿಯಲ್ಲಿ ಫಲಾನುಭವಿ­ಗಳನ್ನು ತಲುಪುತ್ತಿಲ್ಲ. ಈ ಯೋಜನೆ­ಗಾಗಿ ಇಲ್ಲಿಯವರೆಗೆ ಕೇವಲ 79 ಅರ್ಜಿಗಳಷ್ಟೇ ಬಂದಿವೆ’ ಎಂದರು.‘ಅಂಧ ಮಹಿಳೆಯರ ಹೆರಿಗೆ ಬಳಿಕ ಮಗುವಿಗೆ ಎರಡು ವರ್ಷ ತುಂಬುವವ ರೆಗೂ ಮಾಸಿಕ ₨ 2 ಸಾವಿರ ಸಹಾಯ ಧನ ನೀಡುವ ಯೋಜನೆ ಜಾರಿಯ­ಲ್ಲಿದೆ.  ಇಬ್ಬರು ಮಕ್ಕಳವರೆಗೆ ಈ ಸೌಲಭ್ಯ ಪಡೆಯಬಹುದು. ₨ 2.5ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಶೇ.40ಕ್ಕಿಂತ ಹೆಚ್ಚು ದೃಷ್ಟಿ ಸಮಸ್ಯೆ ಇರುವವರೂ ಈ ನೆರವು ಪಡೆಯಬಹುದು’ ಎಂದರು.‘ಕೆಲ ವರ್ಷಗಳ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯಲ್ಲಿದ್ದ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸ್ವತಂತ್ರವಾಗಿ ಅಸ್ತಿತ್ವಕ್ಕೆ ಬಂದು 10 ವರ್ಷ ಕಳೆದಿದೆ. ಆದರೂ ಇಲಾ ಖೆಯಲ್ಲಿ 476 ಜನರ ಕೆಲಸವನ್ನು 136 ಮಂದಿ ಮಾಡುತ್ತಿದ್ದೇವೆ’  ಎಂದು ಹೇಳಿದರು.‘ಶೇ 50 ಕ್ಕಿಂತ ಹೆಚ್ಚು ಗ್ರಾಮೀಣ ಭಾಗದ ಜನರಿಗೆ ಸರ್ಕಾರದ ಸೌಲಭ್ಯ­ಗಳ ಮಾಹಿತಿ ಇಲ್ಲ. ಈ ಬಗ್ಗೆ ಅರಿವು ಮೂಡಿಸುವ ಕಾರ್ಯವೂ ತಳ ಮಟ್ಟ­ದಿಂದ ಆಗ­ಬೇಕು. ಅಂಗವಿಕಲರಿ ಗಷ್ಟೇ ಇತರ ಅಂಗ­ವಿಕಲರ ಸಂಕಟ ಅರಿಯಲು ಸಾಧ್ಯ ಎಂಬ ಕಾರಣದಿಂದ ಕಲ್ಯಾಣಾ­ಧಿಕಾರಿ­ಗಳ ಹುದ್ದೆಗೆ ಅಂಗ ವಿಕ­ಲರನ್ನೇ ನೇಮಿಸ­ಲಾಗಿದೆ. ಫಲಾನು­ಭವಿಗಳ ಸಂಖ್ಯೆ ಹೆಚ್ಚಾದರೆ ಅದಕ್ಕೆ ಸಮನಾದ ನಿಧಿ ನೀಡುವ ಜವಾ­ಬ್ದಾರಿ ಸರ್ಕಾರಕ್ಕಿದೆ. ಮುಂಬ ರುವ ಬಜೆಟ್‌­ನಲ್ಲೂ ಇಲಾಖೆಗೆ ಉತ್ತಮ ನೆರವು ದೊರಕುವ ಬಗ್ಗೆ ವಿಶ್ವಾಸವಿದೆ’ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.