ಭಟ್ಕಳ: ‘ಅಂಗವಿಕಲ ಮಕ್ಕಳನ್ನು ವಿಶೇಷ ಕಾಳಜಿಯಿಂದ ನೋಡಿಕೊಳ್ಳು ವುದು ಅಗತ್ಯ’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯೆ ಜಯಶ್ರೀ ಮೊಗೇರ ಹೇಳಿದರು. ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಹಾಗೂ ಸಮೂಹ ಸಂಪನ್ಮೂಲ ಕೇಂದ್ರದ ಸಹಯೋಗದಲ್ಲಿ ಇತ್ತೀಚೆಗೆ ನಡೆದ ಅಂಗವಿಕಲ ಮಕ್ಕಳ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಅಂಗವಿಕಲ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸ ಬೇಕು. ಇಂಥ ಮಕ್ಕಳಿಗೆ ಸರ್ಕಾರ ನೀಡುತ್ತಿರುವ ಸೌಲಭ್ಯವನ್ನು ಪರಿ ಪೂರ್ಣವಾಗಿ ಬಳಕೆ ಮಾಡಬೇಕು’ ಎಂದರು. ಸಮನ್ವಯ ಶಿಕ್ಷಣ ಅನುಷ್ಠಾನ ಸಮಿತಿ ಸದಸ್ಯ ಶ್ರೀಧರ ನಾಯ್ಕ ಮಾತನಾಡಿ, ‘ಸಾಮಾನ್ಯ ಮಕ್ಕಳಿಗಿಂತ ಹೆಚ್ಚಿನ ಮುತುವರ್ಜಿಯನ್ನು ಅಂಗವಿಕಲ ಮಕ್ಕಳ ಬಗ್ಗೆ ಪಾಲಕರು ನೀಡಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ ಮೊಗೇರ್, ಅಂಗವಿಕಲ ಮಕ್ಕಳಿಗೆ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಸಮನ್ವಯಾಧಿಕಾರಿ ವಿ.ಡಿ.ಮೊಗೇರ್, ಮುಖ್ಯ ಶಿಕ್ಷಕ ಶ್ರೀಧರ ಜಂಬರಮಠ ಉಪಸ್ಥಿತರಿದ್ದರು. ಬಿ.ಆರ್.ಪಿ ಎ.ಆರ್ ಭಟ್ ಸ್ವಾಗತಿಸಿದರು. ರಾಮ ಗೌಡ ವಂದಿಸಿದರು. ಗಣಪತಿ ನಾಯ್ಕ ನಿರೂಪಿಸಿದರು. ಗೋಪಾಲ ನಾಯ್ಕ, ಬಿ.ಕೆ.ನಾಯ್ಕ ಸಹಕರಿಸಿದರು. ನಂತರ ಅಂಗವಿಕಲ ಮಕ್ಕಳಿಗಾಗಿ ವಿವಿಧ ಸ್ಪರ್ಧೆ ಹಾಗೂ ಮನರಂಜನೆ ಕಾರ್ಯಕ್ರಮ ಜರುಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.