ಕಲಘಟಗಿ: ಅಂಗವಿಕಲತೆ, ಬಡತನದ ನಡುವೆಯೂ ತಾಲ್ಲೂಕಿನ ದಾಸ್ತಿಕೊಪ್ಪದ ಶೇಖರಗೌಡ ಪಾಟೀಲರ ಮಗ ಬಸನಗೌಡ ಪಾಟೀಲ ಕ್ರೀಡೆಯಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಜನತಾ ಇಂಗ್ಲಿಷ್ ವಿದ್ಯಾಲಯದಲ್ಲಿ ಆರನೇ ತರಗತಿ ಓದುತ್ತಿರುವ ಬಸವನಗೌಡ, ಸತತ ಎರಡನೇ ವರ್ಷ ಜಿಲ್ಲಾಮಟ್ಟದ ಅಂಗವಿಕಲರ ಕ್ರೀಡಾಕೂಟದಲ್ಲಿ ಬಾಲಕರ ಉದ್ದ ಜಿಗಿತ, ಭಲ್ಲೆ, ಮತ್ತು ಗುಂಡು ಎಸೆತಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ಹಾಸನದಲ್ಲಿ ನಡೆಯಲಿರುವ ರಾಜ್ಯಮಟ್ಟದ ಅಂಗವಿಕಲರ ಕ್ರೀಡಾಕೂಟಕ್ಕೆ ಸಜ್ಜಾಗಿ ನಿಂತಿದ್ದಾನೆ.

ಎರಡು ಕೋಣೆಗಳ ಪುಟ್ಟ ಮನೆಯಲ್ಲಿ ಕುಟುಂಬದ ಜೊತೆ ಬಸವನಗೌಡ ವಾಸವಾಗಿದ್ದಾರೆ. ಆತನ ಅಣ್ಣ ರವಿ ಮಿದುಳು ಜ್ವರದಿಂದ ಬಳಲುತ್ತಿದ್ದು, ತಂದೆ ಶೇಖರಗೌಡ ಪಾಟೀಲ ಬಲತೋಳಿನ ಚೈತನ್ಯ ಕಳೆದುಕೊಂಡಿದ್ದಾರೆ. ಬಟ್ಟೆ ಹಾಕಿಕೊಳ್ಳಲೂ ಪತ್ನಿಯ ನೆರವನ್ನು ಬೇಡುವ ಸ್ಥಿತಿ ಅವರಿಗೆ ಬಂದಿದೆ.

ಕಿತ್ತು ತಿನ್ನುವ ಬಡತನವಿದ್ದರೂ ಬಸನಗೌಡನ ಸಹೋದರಿಯರು ಕಲಿಕೆ ನಿಲ್ಲಿಸಿಲ್ಲ. ಮನೆಯಲ್ಲಿ ಪ್ರತಿಕೂಲ ಪರಿಸ್ಥಿತಿಯನ್ನು ಲೆಕ್ಕಿಸಿದೇ ಬಸನಗೌಡ ಶ್ರದ್ಧೆಯಿಂದ ಓದು ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ.

ದೈಹಿಕ ಶಿಕ್ಷಣ ಶಿಕ್ಷಕ ಡಿ.ಜಿ.ಪಾಟೀಲ ಮತ್ತು ಇತರ ಶಿಕ್ಷಕ ನೆರವನ್ನು ಸ್ಮರಿಸುವ ಬಸನಗೌಡ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಸ್ಥಾನ ಗಿಟ್ಟಿಸುವ ಹಂಬಲ ಹೊಂದಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.