ಬುಧವಾರ, ಜನವರಿ 29, 2020
24 °C

‘ಅಭಿವೃದ್ಧಿಗೆ ಪೂರಕ ಶಿಕ್ಷಣ ಸಿಗುತ್ತಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಸ್ತುತ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ದೇಶದ ಅಭಿವೃದ್ಧಿಗೆ ಪೂರಕವಾದಂತಹ ಶಿಕ್ಷಣ ಸಿಗುತ್ತಿಲ್ಲ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡ ಬೇಸರ ವ್ಯಕ್ತಪಡಿಸಿದರು.ನಗರದ ಸೇಂಟ್‌ ಜೋಸೆಫ್‌ ಸಂಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮತ್ತು ದಕ್ಷಿಣ ಭಾರತದ ಮಾನವ ಹಕ್ಕುಗಳ ಶಿಕ್ಷಣ ಹಾಗೂ ನಿರ್ವಹಣ ಘಟಕವು (ಎಸ್‌ಐಸಿಎಚ್‌ಆರ್‌ಇಎಂ) ಶನಿವಾರ ಆಯೋಜಿಸಿದ್ದ ಐದನೇ ವರ್ಷದ ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ‘ಮಾನವ ಹಕ್ಕುಗಳು ಹುಟ್ಟಿ ನಿಂದಲೇ ಬಂದಿದ್ದು, ಅವುಗಳನ್ನು ಕಸಿದುಕೊಳ್ಳುವ ಅಥವಾ ಉಲ್ಲಂಘನೆ ಮಾಡುವ ಅಧಿಕಾರ ಯಾರಿಗೂ ಇಲ್. ಆದರೆ, ಶಿಕ್ಷಣ ಸಂಸ್ಥೆಗಳಲ್ಲಿಯೇ ಮಾನವ ಹಕ್ಕುಗಳ ಉಲ್ಲಂಘನೆ ಯಾಗುತ್ತಿರುವುದು ವಿಷಾದದ ಸಂಗತಿ. ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಕೇವಲ ವಾಣಿಜ್ಯ ಉದ್ದೇಶವನ್ನು ಮಾತ್ರ ಹೊಂದಿದ್ದು, ವಿದ್ಯಾರ್ಥಿಗಳಲ್ಲಿ ಮಾನ ವೀಯ ಮೌಲ್ಯಗಳನ್ನು ರೂಡಿ ಸುವ ಕಡೆ ಗಮನ ಹರಿಸುತ್ತಿಲ್ಲ’ ಎಂದರು.‘ರಸ್ತೆ ನವೀಕರಣ, ಬಹು ಮಹಡಿ ಕಟ್ಟಡ ನಿರ್ಮಾಣ, ಸಂಚಾರ ನಿರ್ವಹಣೆ, ವಿಮಾನ ನಿಲ್ದಾಣಗಳು ಸೇರಿದಂತೆ ಮತ್ತಿತರ ಅಂಶಗಳು ಮಾತ್ರ ದೇಶದ ಅಭಿವೃದ್ಧಿಯನ್ನು ಬಿಂಬಿಸು ವುದಿಲ್ಲ. ಮಾನವ ಹಕ್ಕಗಳ ರಕ್ಷಣೆ ಕೂಡ ಸಮಾಜದ ಅಭಿವೃದ್ಧಿಯ ಭಾಗವಾಗಿದೆ. ಆದರೆ, ಖಾಸಗಿ ಶಿಕ್ಷಣ ಸಂಸ್ಥೆಗಳು ಮಾನವ ಹಕ್ಕುಗಳ ರಕ್ಷಣೆ ಯನ್ನು ಒಂದು ವಿಷಯವನ್ನಾಗಿ (ಕೋರ್ಸ್‌) ಪರಿಗಣಿಸಿಯೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.‘ಎಲ್ಲಾ ಕ್ಷೇತ್ರಗಳಲ್ಲೂ ಮಾನವ ಹಕ್ಕು ಉಲ್ಲಂಘನೆ ಅವ್ಯಾಹತವಾಗಿ ನಡೆಯುತ್ತಿದೆ. ಸಮಾಜದಲ್ಲಿ ಪ್ರತಿಯೊಬ್ಬ­ರಿಗೂ ಬದುಕುವ ಹಕ್ಕಿದೆ. ಸಮಾಜದಲ್ಲಿ ತಾಂಡವವಾಡುತ್ತಿರುವ ಅಸಮಾನತೆ ವಿರುದ್ಧ ಹೋರಾಟ ನಡೆಸುವುದು ಯುವಕರ ಜವಾಬ್ದಾರಿ ಯಾಗಬೇಕು. ಈ ನಿಟ್ಟಿನಲ್ಲಿ ಅವರ ಹೋರಾಟ ಸಾಗಬೇಕು’ ಎಂದರು.ನಂತರ ಮಾತನಾಡಿದ ರೆಕ್ಟರ್‌ ಡಾ. ಸ್ಟ್ಯಾನಿ ಡಿಸೋಜ, ‘ಆಕಾರದಲ್ಲಿ ಮಾತ್ರ ಮಾನವನಾದರೆ ಸಾಲದು. ಆಚಾರ ದಲ್ಲಿಯೂ ಮಾನವನಾಗ ಬೇಕು. ಮಾ­ನ­ವೀಯ ಮೌಲ್ಯಗಳು ವ್ಯಕ್ತಿತ್ವ ವೃದ್ಧಿಗೆ ಸಹಕಾರಿಯಾಗುತ್ತದೆ’ ಎಂದರು.ಸೇಂಟ್‌ ಜೋಸೇಫ್‌ ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಗ್ರೆಸೆ ಲೆಟ್‌ ಸ್ಟ್ಯಾನ್ಲಿ, ನಿರ್ದೇಶಕ ರೆವರೆಂಡ್‌ ಆನಂದ್‌ಪ್ರಭು, ರಾಜ್ಯಶಾಸ್ತ್ರ ವಿಭಾ ಗದ ಮುಖ್ಯಸ್ಥ ಕ್ರಿಸ್ಟೋಫರ್ ಹೋಸ್ಕಿನ್ಸ್‌ ಪಾಲ್ಗೊಂಡಿದ್ದರು

ಪ್ರತಿಕ್ರಿಯಿಸಿ (+)