ಹೊಸಕೋಟೆ: ‘ಬಯಲು ಪ್ರದೇಶವಾದ ಚಿಕ್ಕಬಳ್ಳಾಪುರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಗೆ ನೀರು ಉಣಿಸುವಲ್ಲಿ ಶಾಶ್ವತ ನೀರಾವರಿ ಯೋಜನೆ ಕಾರ್ಯಕ್ರಮವನ್ನು 2002 ರಲ್ಲೇ ಸಿಪಿಐ(ಎಂ) ಪಕ್ಷ ರೂಪಿಸಿ ಹೋರಾಟ ನಡೆಸುತ್ತಾ ಬಂದಿದೆ. ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ ಹಾಗು ಇತರೆ ಪಕ್ಷಗಳು ಯೋಜನೆ ಬಗ್ಗೆ ಎಚ್ಚೆತ್ತು ಕೊಂಡಿರುವುದು ಹಾಸ್ಯಾಸ್ಪದ’ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಿಪಿಐ (ಎಂ) ಅರ್ಭ್ಯರ್ಥಿ ಜಿ.ವಿ.ಶ್ರೀರಾಮರೆಡ್ಡಿ ಹೇಳಿದರು.

ಗುರುವಾರ ಹೊಸಕೋಟೆಯಲ್ಲಿ ಹಮ್ಮಿಕೊಂಡಿದ್ದ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಕಾರ್ಪೋರೇಟ್ ಕಂಪೆನಿಗಳ ವಶಕ್ಕೆ ದೇಶವನ್ನು ನೀಡಿ ದಿವಾಳಿ ಮಾಡಲು ಹೊರಟಿದ್ದರೆ ಬಿಜೆಪಿ ಕೋಮುವಾದವನ್ನು ಪ್ರಚೋದಿಸುತ್ತಿದೆ. ಎರಡೂ ಪಕ್ಷಗಳ ಆರ್ಥಿಕ ನೀತಿ ಒಂದೇ ಆಗಿದ್ದು ದೇಶವನ್ನು ಕಬಳಿಸುವಲ್ಲಿ ಅವೆರಡೂ ಪಕ್ಷಗಳು ಪೈಪೋಟಿಗೆ ಇಳಿದಿದೆ’ ಎಂದು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.