ಸೋಮವಾರ, ಜನವರಿ 27, 2020
26 °C

‘ಕಾಲಮಿತಿಯೊಳಗೆ ಹಳ್ಳಿಗಳಿಗೆ ನೀರು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಹಳ್ಳಿಯ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ಕಾಲಮಿತಿ­ಯಲ್ಲಿ ಪೂರ್ಣ­­ಗೊಳಿಸ­ಬೇಕು. ಕಾಮಗಾರಿ­ಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳ­ಬೇಕು. ಹೊಸ ತಂತ್ರಜ್ಞಾನದ ಮೂಲಕ ನಿಯೋಜಿತ ಎಲ್ಲ ಹಳ್ಳಿಗಳಿಗೂ ಸಮಾನ ನೀರು ಪೂರೈಕೆ ಮಾಡಬೇಕು ಎಂದು ಶಾಸಕ ಎಚ್.ವೈ.ಮೇಟಿ ಹೇಳಿದರು.ತಾಲ್ಲೂಕಿನ ಹಿರೇಗುಳಬಾಳದ ಪುನ­ರ್ವಸತಿ ಕೇಂದ್ರದ ಬಳಿ ₨ 11.37 ಕೋಟಿ ವೆಚ್ಚದ ಲವಳೇಶ್ವರ ಇತರ 11 ಹಳ್ಳಿಗೆ ಕುಡಿಯುವ ನೀರು ಪೂರೈಕೆ ಯೋಜನೆಯ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಕೇಂದ್ರ ಸರ್ಕಾರದ ರಾಜೀವ್‌ಗಾಂಧಿ ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆಯಡಿ ಅನು­ದಾನ ಮಂಜೂ­ರಾ­ಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾ­ರದ ಆಶ್ರಯದಲ್ಲಿ ಯೋಜನೆ ಕೈಗೊ­ಳ್ಳುತ್ತಿದ್ದು, ಗುತ್ತಿಗೆದಾ­ರರು ಕಾಮಗಾರಿ­ಯನ್ನು ನಿಗದಿತ ಸಮಯ­­ದಲ್ಲಿ ಪೂರ್ಣಗೊಳಿಸ­ಬೇಕು ಎಂದರು.ಈ ಹಿಂದೆ ಕೈಗೊಂಡ ಕೆಲ ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆ­ಗಳಲ್ಲಿ ಮೊದಲ ಹಳ್ಳಿಗೆ ಹೆಚ್ಚಿನ ನೀರು ಪೂರೈಕೆಯಾಗುತ್ತದೆ. ಕೊನೆ ಹಳ್ಳಿಗಳಿಗೆ ನೀರೇ ಬರುವುದಿಲ್ಲ. ಆದ್ದರಿಂದ ಹೊಸ ತಂತ್ರಜ್ಞಾನದ ಮೂಲಕ ಜನಸಂಖ್ಯೆ ಆಧಾರದ ಮೇಲೆ ಆಯಾ ಗ್ರಾಮಕ್ಕೆ ಎಷ್ಟು ನೀರು ಪೂರೈಕೆಯಾಗಬೇಕೋ ಅಷ್ಟು ಆ ದಿನಕ್ಕೆ ಪೂರೈಸುವ ತಂತ್ರ­ಜ್ಞಾನ ಬಳಸಬೇಕು ಎಂದರು.ಯೋಜನೆಯ ಕಾಮಗಾರಿ ಕೈಗೊ­ಳ್ಳುವ ಜತೆಗೆ ಐದು ವರ್ಷಗಳ ನಿರ್ವ­ಹಣೆ­­ಯನ್ನೂ ಗುತ್ತಿಗೆದಾರರೇ ಮಾಡ­ಬೇಕು. ಇದರಲ್ಲಿ ದೋಷ ಕಂಡುಬಂದರೆ ಗುತ್ತಿಗೆದಾರರನ್ನೇ ಹೊಣೆಗಾರ­ರನ್ನಾಗಿ ಮಾಡಲಾಗು­ವುದು. ಗುತ್ತಿಗೆದಾರರು ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಿ ಹಳ್ಳಿ ಜನರಿಗೆ ನೀರು ಕೊಡುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.ಲವಳೇಶ್ವರ ಬಹುಬಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆಯಡಿ ಆಲೂರ, ಜಡ್ರಾಮಕುಂಟಿ, ಮುಡಪಲ­ಜೀವಿ, ಕಡ್ಲಿಮಟ್ಟಿ, ಚಿಕ್ಕಹೊದ್ಲೂರ, ಚಿಕ್ಕ­­ಮುರಮಟ್ಟಿ, ಚಿಕ್ಕಗುಳಬಾಳ, ಹಿರೇ­ಹೊದ್ಲೂರ, ಹಿರೇಮುರಮಟ್ಟಿ, ಹಿರೇ­ಗುಳಬಾಳ, ಜಡ್ರಾಮಕುಂಟಿ ತಾಂಡಾಕ್ಕೆ ಕುಡಿಯುವ ನೀರು ಪೂರೈಕೆ­ಯಾಗಲಿದೆ ಎಂದು ಹೇಳಿದರು.ಗುಳಬಾಳ ಗ್ರಾಮಕ್ಕೆ ಈಗಾಗಲೇ ಶುದ್ಧ ಕುಡಿಯುವ ನೀರಿನ ಘಟಕ ಮಂಜೂ­ರಾಗಿದ್ದು, ಕಾಮಗಾರಿ ನಡೆ­ದಿದೆ. 15 ದಿನದಲ್ಲಿ ಕಾಮಗಾರಿ ಪೂರ್ಣ­ಗೊಂಡು ಗ್ರಾಮಸ್ಥರಿಗೆ ₨ 2ಗೆ 20 ಲೀ. ಶುದ್ಧ ನೀರು ದೊರೆ­ಯ­ಲಿದೆ. ಅಲ್ಲದೇ ಬಾಗಲಕೋಟೆ ಮತ­ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಹಳ್ಳಿ, ತಾಂಡಾ ಸೇರಿದಂತೆ 90 ಹಳ್ಳಿಗಳಿಗೂ ಶುದ್ಧ ಕುಡಿ­ಯುವ ನೀರಿನ ಘಟಕ ಸ್ಥಾಪನೆ ಮಾಡಲಾಗುವುದು ಎಂದರು.ಜಿಲ್ಲಾ ಪಂಚಾಯ್ತಿ  ಸದಸ್ಯರಾದ ಬಸವಂತ ಮೇಟಿ, ತಾಲ್ಲೂಕು ಪಂಚಾ­ಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಎಸ್. ಕೆ. ಗಾಣಿಗೇರ, ವ್ಯವಸ್ಥಾಪಕ ಸತೀಶ ನಾಯಕ, ಗ್ರಾ.ಪಂ. ಅಧ್ಯಕ್ಷ  ಹನುಮಂತ ಮೇಟಿ, ಪಂಚಾಯತ್‌ ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಎಂಜಿನಿಯರ್ ಟಿ. ವಿ. ಬಳೂಲದ, ನಿಪ್ಪಾಣಿಯ ಗುತ್ತಿಗೆ­ದಾರ ಬಿ.ಆರ್. ಪಾಟೀಲ, ಹಿರೇಗುಳ­ಬಾಳದ ಪ್ರಮುಖರಾದ ಬಸಯ್ಯ ಕಲ್ಯಾಣಮಠ, ಟಿ.ಪಿ. ಪಾಟೀಲ, ಮಹಾದೇವಪ್ಪ ವಾಲಿಕಾರ, ವೆಂಕಟೇಶ ಸೂರ, ಸಿಂಧೂರಪ್ಪ ವಾಲಿಕಾರ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)