ಭಾನುವಾರ, ಮಾರ್ಚ್ 7, 2021
32 °C

‘ಕುಪ್ಪೈ ಅಯ್ಯರ್‌ ಎಂದಿದ್ದಕ್ಕೆ ಬೇಸರವಿಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕುಪ್ಪೈ ಅಯ್ಯರ್‌ ಎಂದಿದ್ದಕ್ಕೆ ಬೇಸರವಿಲ್ಲ’

ನಾಗಪಟ್ಟಣ (ಪಿಟಿಐ): ವಿರೋಧ ಪಕ್ಷದವರು ನನ್ನನ್ನು ‘ಕುಪ್ಪೈ (ಕಸ) ಅಯ್ಯರ್‌’ ಎಂದು ಕರೆಯುವುದರಿಂದ ನನಗೆ ಏನೂ ಬೇಸರವಾಗಿಲ್ಲ ಎಂದು ಕಾಂಗ್ರೆಸ್‌ ಮುಖಂಡ ಮಣಿಶಂಕರ್‌ ಅಯ್ಯರ್‌ ಅವರು ಹೇಳಿದ್ದಾರೆ.‘ನನಗೆ ಕಸದ ಅಯ್ಯರ್ ಎಂಬ ಬಿರುದು ನೀಡಿರುವುದು ತಿಳಿದಿದೆ. ಇದು ನನ್ನನ್ನು ನೋಯಿಸಲಿಲ್ಲ. ಬದಲಾಗಿ, ಇವು ನನ್ನ ಪ್ರಾಮಾಣಿಕ ಪ್ರಯತ್ನಕ್ಕೆ ನೀಡಿದ ಪ್ರಮಾಣಪತ್ರಗಳಾಗಿವೆ’ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.ರಾಜ್ಯಸಭೆ ಸದಸ್ಯರೂ ಆದ ಮಣಿಶಂಕರ್‌ ಅಯ್ಯರ್‌, ಎಲ್ಲ ಗ್ರಾಮ­ಗಳನ್ನು ಕಸದಿಂದ ಮುಕ್ತ­ಗೊಳಿಸುವ ನಿಟ್ಟಿನಲ್ಲಿ ಕಸ ಎತ್ತುವ ಯಂತ್ರ ಖರೀದಿಸಲು ಸಂಸದರ ಸ್ಥಳೀಯ ನಿಧಿ­ಯನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಿದ್ದರು. ಇದರಿಂದಾಗಿ ಅಯ್ಯರ್‌ ಅವರನ್ನು ಅವರ ವಿರೋಧಿಗಳು ಕುಪ್ಪೈ ಅಯ್ಯರ್‌ ಎಂದು ಗೇಲಿ ಮಾಡುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.