ಶುಕ್ರವಾರ, ಜನವರಿ 24, 2020
21 °C

‘ಕುರುಡು ನಂಬಿಕೆ’ ಕಿರುಚಿತ್ರ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ‘ಕುರುಡು ನಂಬಿಕೆ’ ಕಿರು­ಚಿತ್ರದ ಡಿವಿಡಿಯನ್ನು ನಗರದಲ್ಲಿ ಈಚೆಗೆ ನಡೆದ ಜಿಲ್ಲಾ ದ್ವಿತೀಯ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನ­ದಲ್ಲಿ ಸಮ್ಮೇಳನಾಧ್ಯಕ್ಷೆ ನೀಲಾ ಕೆ. ಬಿಡುಗಡೆ ಮಾಡಿದರು. ಬೀದರ್‌ನವರೇ ಆದ ಮಹೇಶ್ ವಿ. ಪಾಟೀಲ್ ನಿರ್ದೇಶಿಸಿರುವ ಕಿರುಚಿತ್ರ ಬೆತ್ತಲೆ ಸೇವೆಯಂಥ ಮೂಢ ನಂಬಿಕೆ­ಯನ್ನು ಎಳೆ ಎಳೆಯಾಗಿ ಬಿಡಿಸಿಡುತ್ತದೆ.ಅಸಿಮಾ ಭಟ್ ನಾಯಕಿಯಾ­ಗಿದ್ದಾರೆ. ಸ್ಥಳೀಯ ಕಲಾವಿದರಾದ ಶಂಭುಲಿಂಗ ವಾಲ್ದೊಡ್ಡಿ, ವಿಜಯಶ್ರೀ ಸ್ವಾಮಿ, ರಾಯಲ್ ಮೇಥಿವ್, ಪಾರ್ವತಿ ಜೆ.ಡಿ., ಚಂದ್ರಗುಪ್ತ ಚಾಂದಕವಠೆ, ಕಮಲಮ್ಮ ಅಪ್ಪಾ­ರಾವ್, ಸಂಗೀತಾ ಕಡ್ಡೆ, ದೇವಿದಾಸ್ ಚಿಮಕೋಡೆ, ಯೇಸುದಾಸ್ ಅಲಿಯಂಬುರೆ, ರಮೇಶ್ ಡಿ.ಎ.ಆರ್., ತೇಜಸ್ವಿನಿ ಲೋಕೇಶ್, ಎಸ್. ಲೋಕೇಶ್, ಕಿರಣ ಸ್ವಾಮಿ, ಋಷಿ ಶ್ರೀಸಂದ, ರಾಮಲು ಬಾಬುರಾವ್, ಬೆಟ್ಟಮ್ಮ ಬಾಬುರಾವ್ ನಟಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ಪ್ರತಿಕ್ರಿಯಿಸಿ (+)