ಮಂಡ್ಯ: ಜಿಲ್ಲಾ ಜಾಗೃತ ಅಂಕಣಕಾರರ ವೇದಿಕೆ ಇವರ ವತಿಯಿಂದ ಕೆ.ವಿ.ಶಂಕರಗೌಡ ಸಂಸ್ಮರಣೆ ಮತ್ತು ‘ಕೆ.ವಿ.ಎಸ್ – ಸಚ್ಚಿ ಅಂಕಣಶ್ರೀ’ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭವು ಮಾ. 4 ಮಧಾ್ಯಾಹ್ನ 3.45ಕ್ಕೆ ಗಾಂಧಿಭವನದಲ್ಲಿ ನಡೆಯಲಿದೆ.

ಮಾಜಿ ಶಾಸಕ ಎಂ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿದ್ದು, ಮೈಸೂರಿನ ಪ್ರಸಾರಾಂಗ ಮೈಸೂರು ವಿಶ್ವವಿದ್ಯಾಲಯ ನಿರ್ದೇಶಕ ಸಿ. ನಾಗಣ್ಣ, ಮುಖ್ಯ ಅತಿಥಿಯಾಗಿ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ವೇದಿಕೆ ಅಧ್ಯಕ್ಷ ಪ್ರೊ.ಸಿ. ಸಿದ್ದರಾಜು ಆಲಕೆರೆ ಉಪಸ್ಥಿತರಿರಲಿದ್ದಾರೆ.

ಪ್ರಶಸ್ತಿ ಪುರಸ್ಕೃತರ ಪರಿಚಯ: ಕೆವಿಎಸ್ ಅವರ ಹೆಸರಿನಲ್ಲಿ ಪ್ರೌಢಶಾಲಾ ಶಿಕ್ಷಕರಿಗೆ ನೀಡಲಾಗುವ ಕೆವಿಎಸ್ ಉತ್ತಮ ಶಿಕ್ಷಕ ಪ್ರಶಸ್ತಿಗೆ ಮಂಡ್ಯ ತಾಲ್ಲೂಕು ಹುಲಿಕೆರೆ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕರಾಗಿರುವ ಎಸ್.ಬೋರೇಗೌಡ ಆಯ್ಕೆಯಾಗಿದ್ದಾರೆ.

ಪಾಂಡವಪುರ ತಾಲೂಕು ಅರಳಕುಪ್ಪೆ ಗ್ರಾಮದ ಸಿದ್ದೇಗೌಡ ಮತ್ತು ಸಾಕಮ್ಮ ಅವರ ಪುತ್ರರಾದ ಇವರು, ಪ್ರಾಥಮಿಕ ಶಾಲಾ ವಿದ್ಯಾಭ್ಯಾಸವನ್ನು ಸ್ವಗ್ರಾಮದಲ್ಲಿ, ಪ್ರೌಢಶಿಕ್ಷಣವನ್ನು ಕ್ಯಾತನಹಳ್ಳಿಯ ವಿಶ್ವೇಶ್ವರಯ್ಯ ಪ್ರೌಢಶಾಲೆಯಲ್ಲಿ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ.ಹಾಗೂ ಸರ್ಕಾರಿ ತರಬೇತಿ ಸಂಸ್ಥೆಯಲ್ಲಿ ಬಿ.ಇಡಿ ಪದವಿ ಪಡೆದಿರುತ್ತಾರೆ.

1984 ರಲ್ಲಿ ಮದ್ದೂರು ತಾಲ್ಲೂಕಿನ ಕೆ.ಹೊನ್ನಲಗೆರೆಯಲ್ಲಿ ಪ್ರೌಢಶಾಲಾ ಸಹ ಶಿಕ್ಷಕರಾಗಿ ವೃತ್ತಿ ಜೀವನ ಪ್ರಾರಂಭಿಸಿದ್ದಾರೆ.
ಕೆ.ಎಸ್. ಸಚ್ಚಿದಾನಂದ ಹೆಸರಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ನೀಡುವ ಸಚ್ಚಿ ಉತ್ತಮ ಶಿಕ್ಷಕ ಪ್ರಶಸ್ತಿಗೆ ತಾಲ್ಲೂಕಿನ ದುದ್ದ ಸ.ಹಿ.ಪ್ರಾ.ಶಾಲೆಯ ಸಹಶಿಕ್ಷಕಿ ಪ್ರೇಮಕುಮಾರಿ ಆಯ್ಕೆಯಾಗಿದ್ದಾರೆ.

ಕೋಲಾರ ತಾಲ್ಲೂಕಿನ ಬೆತ್ತನಿ ಗ್ರಾಮದ ರೈತ ಕುಟುಂಬದ ಪುಟ್ಟರಾಜು ಮತ್ತು ಜ್ಯೋತಮ್ಮ ಅವರ ಪುತ್ರಿಯಾಗಿದ್ದಾರೆ. ಇವರು ಸ್ವಗ್ರಾಮ ಬೆತ್ತನಿಯಲ್ಲಿ ಪ್ರಾ.ಶಿಕ್ಷಣ, ಕೋಲಾರದ ಮೆಥೋಡಿಸ್ಟ್ ಬಾಲಕಿಯರ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ, ಬಂಗಾರಪೇಟೆಯಲ್ಲಿ ಶಿಕ್ಷಕ ತರಬೇತಿ ಪಡೆದ ಇವರು, 1975 ರಲ್ಲಿ ಕೋಲಾರ ಜಿಲ್ಲೆಯ ವೇಗಮಡಗು ಶಾಲೆಯಲ್ಲಿ ವೃತ್ತಿ ಜೀವನ ಆರಂಭಿಸದ್ದಾರೆ. ಜಿಲ್ಲೆಯ ದೊಡ್ಡಗರುಡನಹಳ್ಳಿ, ಕೀಲಾರ, ಹಾಲಹಳ್ಳಿ ಬಡಾವಣೆ, ಅವ್ವೇರಹಳ್ಳಿ ಸೇರಿದಂತೆ ವಿವಿಧ ಕಾರ್ಯ ನಿರ್ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.