ಶನಿವಾರ, ಜೂನ್ 19, 2021
26 °C

‘ಕೋಮುವಾದಿ, ಅವಕಾಶವಾದಿಗಳನ್ನು ದೂರವಿಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಾಂಡವಪುರ: ಕೋಮುವಾದಿ ರಾಜಕಾರಣ ಮಾಡುತ್ತಿರುವ ಬಿಜೆಪಿ ಹಾಗೂ ಕೇವಲ ಅಧಿಕಾರಕ್ಕಾಗಿ ಅವಕಾಶವಾದಿ ರಾಜಕಾರಣ ಮಾಡುತ್ತಿರುವ ಜೆಡಿಎಸ್ ಪಕ್ಷಗಳನ್ನು ಜನತೆ ತಿರಸ್ಕರಿಸಬೇಕು ಎಂದು ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಮನವಿ ಮಾಡಿದರು. ತಾಲ್ಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ಕ್ಯಾತನಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ರೈತ ಸಂಘ ಮತ್ತು ಸರ್ವೋದಯ ಕರ್ನಾಟಕ ಪಕ್ಷದ ರಾಜಕೀಯ ಚಿಂತನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಮಂಡ್ಯ ಲೋಕಸಭೆಯ ಜೆಡಿಎಸ್‌ ಅಭ್ಯರ್ಥಿ ಸಿ.ಎಸ್. ಪುಟ್ಟರಾಜು ಜನಪರ ಚಳವಳಿಯ ಬಗ್ಗೆ ಗೌರವವಿಲ್ಲದೇ ರೈತ ಸಂಘಟನೆಯ ವಿರುದ್ಧ ಅನೇಕ ಬಾರಿ ಲಘುವಾಗಿ ಮಾತನಾಡಿ ಅದರ ಶಕ್ತಿಯನ್ನು ಕುಂದಿಸಲು ಸತತ ಪ್ರಯತ್ನ ಮಾಡಿದ್ದಾರೆ ಎಂದು ಟೀಕಿಸಿದರು. ಅಭ್ಯರ್ಥಿ ರಮ್ಯಾ ಮತ ಯಾಚಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ  ಎ.ಎಲ್. ಕೆಂಪೂಗೌಡ, ಮಾಜಿ ಸದಸ್ಯರಾದ ಕೆ.ಟಿ. ಗೋವಿಂದೇಗೌಡ, ಎಚ್‌. ಮಂಜುನಾಥ್‌, ತಾ.ಪಂ. ಸದಸ್ಯ ಕೆ.ಕೆ. ಗೌಡೇಗೌಡ, ರೈತ ಸಂಘದ ಅಧ್ಯಕ್ಷ ಹರವು ಪ್ರಕಾಶ್‌, ಸಂಘಟನಾ ಕಾರ್ಯದರ್ಶಿ ಬಿ.ಟಿ. ಮಂಜುನಾಥ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಗುರುಮೂರ್ತಿ, ಸುನೀತಾಪುಟ್ಟಣ್ಣಯ್ಯ, ನಂದಿನಿ, ಪಿಎಸ್‌ಎಸ್‌ಕೆ ನಿರ್ದೇಶಕ ರಾಮ್‌ದಾಸ್‌ ಹಾಜರಿದ್ದರು.ರಮ್ಯಾಗೆ ಬೆಂಬಲ: ಅಂಬರೀಷ್‌ ಬೆಂಬಲಿಗರ ನಿರ್ಧಾರ

ಮಂಡ್ಯ: ಕಾಂಗ್ರೆಸ್‌ ಅಭ್ಯರ್ಥಿ, ಸಂಸದೆ ರಮ್ಯಾ ಅವರನ್ನು ಬೆಂಬಲಿಸಲು ವಸತಿ ಸಚಿವ ಅಂಬರೀಷ್‌ ಬೆಂಬಲಿಗರು ನಿರ್ಧರಿಸಿದ್ದಾರೆ.

ಶನಿವಾರ ನಗರದಲ್ಲಿ ಸಭೆ ನಡೆಸಿದ ಅವರು, ಅಂಬರೀಷ್‌ ಅವರ ಸೂಚನೆಯಂತೆ ರಮ್ಯಾ ಅವರ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಲು ತೀರ್ಮಾನಿಸಿದರು.ಅಂಬರೀಷ್‌ ಬೆಂಬಲಿಗರು ಇಲ್ಲಿಯವರೆಗೆ ಪ್ರಚಾರದಿಂದ ದೂರ ಉಳಿದು ಭಿನ್ನಮತ ಸಾರಿದ್ದರು. ಕಾಂಗ್ರೆಸ್‌ ಜಿಲ್ಲಾ ಖಜಾಂಚಿ ಅಮರಾವತಿ ಚಂದ್ರಶೇಖರ್‌ ಅವರು ಸಿಂಗಾಪುರಿಗೆ ಹೋಗಿ ಬಂದ ನಂತರ, ಬೆಂಬಲಿಸಲು ನಿರ್ಧರಿಸಿದ್ದಾರೆ.ನಗರಸಭೆ ಅಧ್ಯಕ್ಷ ಸಿದ್ದರಾಜು, ಅಂಬರೀಷ್‌ ಅಭಿಮಾನಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬೇಲೂರು ಸೋಮಶೇಖರ್‌ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.