ಗುರುವಾರ , ಫೆಬ್ರವರಿ 25, 2021
18 °C

‘ಕ್ಷೇತ್ರ ನಿರ್ಲಕ್ಷಿಸಿದವರಿಗೆ ಮತದಾರರಿಂದ ತಕ್ಕ ಪಾಠ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕ್ಷೇತ್ರ ನಿರ್ಲಕ್ಷಿಸಿದವರಿಗೆ ಮತದಾರರಿಂದ ತಕ್ಕ ಪಾಠ’

ಗೋಕಾಕ: ಬಿಜೆಪಿ ಅಭ್ಯರ್ಥಿ ಸುರೇಶ ಅಂಗಡಿ ಅವರು ತಮ್ಮ 10 ವರ್ಷದ ಅಧಿಕಾರವಧಿಯಲ್ಲಿ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಕಾರ್ಯ ಮಾಡದೇ ಕ್ಷೇತ್ರವನ್ನೇ ನಿರ್ಲಕ್ಷ ಮಾಡಿದ್ದರಿಂದ ಈ ಬಾರಿ ಚುನಾವಣೆಯಲ್ಲಿ ಮತದಾರರು ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಕಾಂಗ್ರೆಸ್‌ನ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ ವಿಶ್ವಾಸ ವ್ಯಕ್ತಪಡಿಸಿದರು.ನಗರದ ಆದಿತ್ಯನಗರ ಬಡಾವಣೆ ಸೇರಿದಂತೆ ವಿವಿಧ ವಾರ್ಡ್‌ಗಳಲ್ಲಿ ಭಾನುವಾರ ಬೆಂಬಲಿಗರೊಂದಿಗೆ ಪಾದಯಾತ್ರೆ ನಡೆಸಿ ಅವರು ಮಾತನಾಡಿದರು.ಕಾಂಗ್ರೆಸ್‌ ಪಕ್ಷವು ಮಹಿಳೆಯರನ್ನು ಮುಖ್ಯ ವಾಹಿನಿಗೆ ತರಲು ದಿಟ್ಟ ಹೆಜ್ಜೆ ಇಟ್ಟಿದ್ದು ಚೆನ್ನಮ್ಮನ ನಾಡಿನಲ್ಲಿ ಕಾಂಗ್ರೆಸ್‌ ಪಕ್ಷದಿಂದ ಮಹಿಳಾ ಅಭ್ಯರ್ಥಿಯಾಗಿ  ಕಣಕ್ಕಿಳಿದಿರುವ ನನ್ನನ್ನು ಮತದಾರರು ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿಕೊಂಡರು.ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಕಳೆದ 10 ವರ್ಷಗಳಿಂದ ಪ್ರತಿನಿಧಿಸಿದ ಅಂಗಡಿ ಅವರು ನಿರುದ್ಯೋಗಿ ಯುವಕರ ಸಮಸ್ಯೆಗೆ ಸ್ಪಂದಿಸಿಲ್ಲ, ಯುವಕರು ಇದನ್ನರಿತು ಮಹಾತ್ಮರ ಬಲಿದಾನದಿಂದ ಸ್ಥಾಪನೆಗೊಂಡ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿ ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಮುಂದುವರೆಯುವಂತೆ ಶ್ರಮಿಸಬೇಕು ಎಂದರು.ಲಖನ್‌ ಜಾರಕಿಹೊಳಿ ಮಾತನಾಡಿ, ಇದೇ ಪ್ರಥಮ ಬಾರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಮಹಿಳೆಯನ್ನು ಆಯ್ಕೆಗೊಳಿಸುವ ಅವಕಾಶ ಬಂದಿದೆ. ಕಾರ್ಯಕರ್ತರು ಇದನ್ನು ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಜಿ.ಪಂ. ಮಾಜಿ ಉಪಾಧ್ಯಕ್ಷ ತುಕಾರಾಮ ಕಾಗಲ್, ಕಾಂಗ್ರೆಸ್‌ ಪಕ್ಷದ ನಗರ ಘಟಕದ ಅಧ್ಯಕ್ಷ ನಜೀರ್‌ಅಹ್ಮದ್‌ ಶೇಖ್‌, ನಗರಸಭೆ ಅಧ್ಯಕ್ಷೆ ಲಗಮವ್ವಾ ಸುಲಧಾಳ, ಉಪಾಧ್ಯಕ್ಷ ಎ.ಡಿ.ಶಹಬಾಷ್‌ಖಾನ್‌, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್‌ ಖೋತ, ನಗರಸಭೆ ಸದಸ್ಯರಾದ ಎಸ್.ಎ.ಕೋತವಾಲ್, ಚಂದ್ರ ಕಾಂತ ಇಳಿಗೇರ, ಭೀಮಶಿ ಭರಮನ್ನವರ, ದುರ್ಗವ್ವ ಶಾಸ್ತ್ರಿಗೊಲ್ಲರ, ಜಯಾನಂದ ಹುಣಶ್ಯಾಳ, ಸಿದ್ದಪ್ಪ ಹುಚ್ಚರಾಯಪ್ಪಗೋಳ, ಪರಶುರಾಮ ಭಗತ್, ಗೌಸೀಯಾಬಿ ದೇಸಾಯಿ, ವಿಜಯಲಕ್ಷ್ಮೀ ಜತ್ತಿ, ಶೋಭಾ ಮೇಸ್ತ್ರಿ, ಮೈಮು ನಿಸ್ಸಾ ಅವಟಿ, ರಮೇಶ ಜುಪ್ರಿ, ಕುತುಬುದ್ದೀನ ಗೋಕಾಕ, ಸುರೇಶ ಬಡೆಪ್ಪಗೋಳ, ಭಗವಂತ ಹುಳ್ಳಿ, ಜಾಕೀರಹುಸೇನ್‌ ನದಾಫ, ಅಬ್ದುಲ ಜಮಾದಾರ, ಬಾಬು ಶೇಖಬಡೆ, ತಳದಪ್ಪ ಅಮ್ಮಣಗಿ, ಗಂಗೂಬಾಯಿ ಸುಭಂಜಿ, ಚಂದ್ರವ್ವ ಜಮಖಂಡಿ, ಸವಿತಾ ಝಾಂಗಟಿಹಾಳ, ಬಸವರಾಜ ಮುಳಗುಂದ, ಜಾವೇದ ಮುಲ್ಲಾ, ಮಡ್ಡೆಪ್ಪ ತೋಳಿನವರ ಸೇರಿದಂತೆ  ಪಕ್ಷದ ಅನೇಕ ಕಾರ್ಯಕರ್ತರು ಹಾಗೂ ಮುಖಂಡರು ಉಪಸ್ಥಿತರಿದ್ದರು.ಗೆಲುವು ನಿಶ್ಚಿತ -

ಘಟಪ್ರಭಾ (ಗೋಕಾಕ):
ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ ಅವರ ಗೆಲುವು ನಿಶ್ಚಿತ ಎಂದು ಬೆಳಗಾವಿ ಯೂತ್‌ ಕಾಂಗ್ರೆಸ್ ಅಧ್ಯಕ್ಷ ಜಾವೇದ್‌ ಮುಲ್ಲಾ ಹೇಳಿದರು.ಬೆಳಗಾವಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ ಅವರ ಪ್ರಚಾರಕ್ಕೆ ಇಲ್ಲಿಗೆ ಬಂದಿದ್ದ ಅವರು ಸುದ್ದಿಗಾರ ರೊಂದಿಗೆ ಮಾತನಾಡಿದರು.ಬೆಳಗಾವಿ ಲೋಕಸಭಾ ಕ್ಷೇತ್ರದಾದ್ಯಂತ ಕೈಗೊಂಡ ಪ್ರಚಾರ ಸಭೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಪ್ರತಿಕ್ರಿಯೆ ದೊರತಿದೆ ಎಂದು ಹೇಳಿದರು.ಬಿಜೆಪಿ ಸರ್ಕಾರವು ಹಲವಾರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿದ್ದು ಇದು ಜನ ಸಾಮಾನ್ಯರಿಗೆ ಗೊತ್ತಿದ್ದ ಸಂಗತಿಯಾಗಿದೆ. ಎರಡು ಸಲ ಕ್ಷೇತ್ರವನ್ನು ಪ್ರತಿನಿಧಿಸಿದ ಸುರೇಶ ಅಂಗಡಿ ಅವರು ಯಾವುದೇ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿರುವುದಿಲ್ಲ ಎಂದು ಆರೋಪಿಸಿದರು.ಈ ಸಂದರ್ಭದಲ್ಲಿ ಯೂತ್‌ ಕಾಂಗ್ರೆಸ್‌ ತಾಲ್ಲೂಕು ಘಟಕ ಅಧ್ಯಕ್ಷ ನೂರ ಮಕಾನ್‌ದಾರ್‌, ಸುಲೇಮಾನ್‌ ದೇಸಾಯಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.