ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖಾಲಿದ್‌ ವಿರುದ್ಧದ ಆರೋಪ ಕಟ್ಟುಕತೆ’

Last Updated 19 ಫೆಬ್ರುವರಿ 2016, 19:32 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಜೆಎನ್‌ಯುನಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ ಆರೋಪ ಹೊತ್ತಿರುವ ಹತ್ತು ವಿದ್ಯಾರ್ಥಿಗಳಲ್ಲಿ ಒಬ್ಬರಾಗಿರುವ ಉಮರ್ ಖಾಲಿದ್‌ ವಿರುದ್ಧದ ಆರೋಪಗಳು ‘ಕಟ್ಟುಕತೆ ಮತ್ತು ಸುಳ್ಳು’ ಎಂದು ಅವರ ಸಹೋದರಿ ಮರಿಯಂ ಫಾತಿಮಾ ಹೇಳಿದ್ದಾರೆ.

ಈ ಆರೋಪಗಳಿಂದಾಗಿ ತಮ್ಮ ಕುಟುಂಬ ‘ಸಹಜ ಸ್ಥಿತಿಯ ಭಾವನೆ’ ಯನ್ನೇ ಕಳೆದುಕೊಂಡಿದೆ ಎಂದಿರುವ ಅವರು ತಮ್ಮ ಸಹೋದರ ಭಾರತದ ‘ನಿಜವಾದ ಪುತ್ರ’ ಎಂದು ಹೇಳಿದ್ದಾರೆ.

ಖಾಲಿದ್‌ ವಿರುದ್ಧ ಮಾಧ್ಯಮದಲ್ಲಿ ನಡೆಯುತ್ತಿರುವ ‘ವಿಚಾರಣೆ’ ಬಗ್ಗೆಯೂ ಅಮೆರಿಕದಲ್ಲಿ ಪಿಎಚ್‌.ಡಿ ವ್ಯಾಸಂಗ ಮಾಡುತ್ತಿರುವ ಮರಿಯಂ ಹರಿಹಾಯ್ದಿದ್ದಾರೆ. ಕೈಗೆ ಸಿಕ್ಕವರನ್ನು ಗುಂಪು ಥಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದ್ದಾರೆ.

ತೀವ್ರವಾದಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಡೆಮೊಕ್ರಾಟಿಕ್‌ ಸ್ಟೂಡೆಂಟ್‌ ಯೂನಿಯನ್‌ನ ಮಾಜಿ ಸದಸ್ಯರಾಗಿರುವ ಖಾಲಿದ್‌ ವಿರುದ್ಧ ಜೆಎನ್‌ಯುನಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ ಕಾರ್ಯಕ್ರಮವನ್ನು ಸಂಘಟಿಸಿದ ಆರೋಪ ಇದೆ. ಜೆಎನ್‌ಯು ವಿವಾದ ಭುಗಿಲೆದ್ದ ನಂತರ ಖಾಲಿದ್‌ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ.

‘ಹೆಚ್ಚಿನ ಸುದ್ದಿ ವಾಹಿನಿಗಳು ಸುಳ್ಳು ಮಾಹಿತಿಯ ಆಧಾರದಲ್ಲಿ ಖಾಲಿದ್‌ ವಿರುದ್ಧ ‘ವಿಚಾರಣೆ’ ನಡೆಸುತ್ತಿವೆ. ಜೈಷ್‌–ಎ–ಮೊಹಮ್ಮದ್‌ ಉಗ್ರಗೊಂದಿಗೆ ಖಾಲಿದ್‌ಗೆ ಸಂಪರ್ಕ ಇದೆ ಎಂದು ಗುಪ್ತಚರ ಘಟಕ (ಐಬಿ) ವರದಿ ಮಾಡಿದೆ ಎಂದು ಮೊದಲಿಗೆ ಹೇಳಲಾಯಿತು. ಆದರೆ ಐಬಿಯೇ ಇದನ್ನು ನಿರಾಕರಿಸಿತು. ಆದರೆ ಈಗಲೂ ಇದೇ ಸುಳ್ಳನ್ನು ಪ್ರಚಾರ ಮಾಡಲಾಗುತ್ತಿದೆ’ ಎಂದು ಮರಿಯಂ ಬೇಸರ ವ್ಯಕ್ತಪಡಿಸಿದ್ದಾರೆ.

‘ಬುಡಕಟ್ಟು ಜನರ ಹಕ್ಕುಗಳು ಮತ್ತು ವಸಾಹತುಶಾಹಿ ಅರಣ್ಯ ನೀತಿಯನ್ನು ಪಿಎಚ್‌.ಡಿ ಅಧ್ಯಯನ ವಿಷಯವನ್ನಾಗಿ ಹೊಂದಿರುವ ಖಾಲಿದ್‌, ತನ್ನ ಜೀವನ ಮತ್ತು ವೃತ್ತಿಗಿಂತ ಶೋಷಣೆಗೊಳಗಾದವರ ಪರವಾಗಿ ಹೆಚ್ಚಿನ ಕಾಳಜಿ ಹೊಂದಿದ್ದಾನೆ. ಇದೇ ಕಾರಣಕ್ಕೆ ಆತ ವಿದೇಶಗಳಿಗೆ ಹೋಗುವ ಅವಕಾಶಗಳನ್ನೂ ನಿರಾಕರಿಸಿದ್ದಾನೆ’ ಎಂದು ಮರಿಯಂ ತಿಳಿಸಿದ್ದಾರೆ.

ಐವರು ಹೆಣ್ಣು ಮಕ್ಕಳಲ್ಲಿ ಹಿರಿಯವರಾಗಿರುವ ಮರಿಯಂ, ತಮ್ಮ ಸಹೋದರಿಯರಿಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದೂ ಹೇಳಿದ್ದಾರೆ.
ನಾಪತ್ತೆಯಾದ ಬಳಿಕ ಕುಟುಂಬಕ್ಕೆ ಖಾಲಿದ್‌ ಜತೆ ಸಂಪರ್ಕವೇ ಇಲ್ಲ ಎಂದಿರುವ ಅವರು, ‘ಆತನ ಸುರಕ್ಷತೆ ಬಗ್ಗೆ ಕಳವಳವಾಗಿದೆ’ ಎಂದು ಹೇಳಿದ್ದಾರೆ.

‘ಮಾಧ್ಯಮ ವಿಚಾರಣೆ ಬೇಡ’
ತಮ್ಮ ಮಗ ದೇಶದ್ರೋಹಿ ಘೋಷಣೆಗಳನ್ನು ಕೂಗಿದ್ದಾನೆಯೇ ಇಲ್ಲವೇ ಎಂಬುದನ್ನು ನ್ಯಾಯಾಂಗ ತೀರ್ಮಾನಿಸಬೇಕು. ಅದು ಮಾಧ್ಯಮ ವಿಚಾರಣೆಯಲ್ಲಿ ‘ತೀರ್ಮಾನ’ ಆಗಬಾರದು ಎಂದು ಉಮರ್‌ ಖಾಲಿದ್‌ ತಂದೆ ಸಯ್ಯದ್‌ ಕಾಸಿಂ ರಸೂಲ್‌ ಇಲ್ಯಾಸ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT