ಶನಿವಾರ, ಜನವರಿ 18, 2020
26 °C

‘ಗಾಂಧಿ ಕನಸಿನ ಸಮಾಜ ನಿರ್ಮಾಣ’

'ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಗಾಂಧಿ ಕನಸಿನ ಸಮಾಜ ನಿರ್ಮಾಣ’

ಬೆಂಗಳೂರು: ‘ಮಹಾತ್ಮ ಗಾಂಧೀಜಿ ಅವರ ಕನಸಿನ ಸಮಾಜ ನಿರ್ಮಾಣ ಆಗಬೇಕಿದೆ. ಇಂತಹ ಸಮಾಜ ನಿರ್ಮಾಣಕ್ಕೆ ಸರ್ಕಾರ ಪಣ ತೊಟ್ಟಿದೆ’ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ತಿಳಿಸಿದರು.‘ಕರ್ನಾಟಕ ರಾಜ್ಯ ಹರಿಜನ ಸೇವಕ’ ಸಂಘದ ವತಿಯಿಂದ ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಶನಿವಾರ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.‘ದಲಿತರು, ಅಸ್ಪೃಶ್ಯರು ಹಾಗೂ ಹಿಂದುಳಿದವರು ಮುಖ್ಯವಾಹಿನಿಗೆ ಬರಬೇಕು ಎಂಬುದು ಗಾಂಧೀಜಿ ಅವರ ಕನಸಾಗಿತ್ತು. ಅವರ ಕನಸನ್ನು ನಾವು ಈಡೇರಿಸಬೇಕಿದೆ’ ಎಂದರು.‘ಸ್ವಾತಂತ್ರ್ಯಪೂರ್ವದಲ್ಲಿ ದಲಿತರನ್ನು ಹೀನಾಯವಾಗಿ ನಡೆಸಿಕೊಳ್ಳ­ಲಾಗು­ತ್ತಿತ್ತು. ಅವರು ಊರಿನ ಮುಖ್ಯ ಬೀದಿಗೆ ಬರುವಂತೆ ಇರಲಿಲ್ಲ. ವೇದಗಳನ್ನು ಓದುವಂತೆ ಇರಲಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.ಮಾಜಿ ಮೇಯರ್‌ ಪಿ.ಆರ್‌.­ರಮೇಶ್‌, ‘ಮೀಸಲಾತಿ ವ್ಯವಸ್ಥೆಯಿಂದ ಸ್ಪರ್ಧಾತ್ಮಕ ಸಮಾಜ ನಿರ್ಮಾಣ­ವಾಗಿದೆ’ ಎಂದು ಅಭಿಪ್ರಾಯಪಟ್ಟರು.ಸಂಘದ ಗೌರವ ಅಧ್ಯಕ್ಷೆ ಪ್ರೇಮಾ ಕಾರಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಜಿ.ವಿಜಯ್‌, ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಮಹಾಲಿಂಗ ನಾಯಕ್‌ ಉಪಸ್ಥಿತರಿದ್ದರು.2012–13ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿ ಉತ್ತೀರ್ಣರಾದ ದಲಿತ ವಿದ್ಯಾರ್ಥಿಗಳಿಗೆ ಈ ಸಂದರ್ಭ ವಿದ್ಯಾರ್ಥಿ ವೇತನ ನೀಡಲಾಯಿತು.

ಪ್ರತಿಕ್ರಿಯಿಸಿ (+)