ಹೊಸಪೇಟೆ: ‘ಈಗಿರುವ ಚಿತ್ರಕಲೆ ಪಠ್ಯಕ್ರಮ ನ್ಯೂನತೆ ಮತ್ತು ಗೊಂದಲಗಳಿಂದ ಕೂಡಿದ್ದು, ಪಠ್ಯಕ್ರಮದ ಪರಿಷ್ಕರಣೆ ಅಗತ್ಯವಾಗಿದೆ’ ಎಂದು ಗುಲ್ಬರ್ಗದ ದಿ ಐಡಿಯಲ್ ಫೈನ್ ಆರ್ಟ್ಸ್ ಇನ್ಸ್ಟಿಟ್ಯೂಟ್ನ ಪ್ರಾಚಾರ್ಯ ಬಸವರಾಜ ಜಾನೆ ಅಭಿಪ್ರಾಯಪಟ್ಟರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಚಿತ್ರಕಲಾ ವಿದ್ಯಾಲಯಗಳ ನಿರ್ವಹಣಾ ಕೇಂದ್ರದ ವತಿಯಿಂದ ಶುಕ್ರವಾರ ದೃಶ್ಯಕಲಾ ವಿಭಾಗದಲ್ಲಿ ಆಯೋಜಿಸಿದ್ದ ಎರಡನೇ ಹಂತದ ಚಿತ್ರಕಲೆ ಬಿ.ವಿ.ಎ, ಡಿಪ್ಲೋಮಾ ಪಠ್ಯ ಪರಿಷ್ಕರಣೆ ಹಾಗೂ ಅಭಿಶಿಕ್ಷಣ ತರಬೇತಿ–-೩ನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಪಠ್ಯ ಪರಿಷ್ಕರಣೆ ಹಿನ್ನೆಲೆಯಲ್ಲಿ ಕನ್ನಡ ವಿಶ್ವವಿದ್ಯಾಲಯ ಕೈಗೆತ್ತಿಕೊಂಡಿರುವ ತರಬೇತಿ ಶಿಬಿರ ಸಮಯೋಚಿತವಾಗಿದೆ’ ಎಂದು ಅವರು ನುಡಿದರು.

ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಉಪನ್ಯಾಸಕ ನಾಗಪ್ಪ ಪ್ರಧಾನಿ ಮಾತನಾಡಿ, ‘ಶಿಲ್ಪಕಲಾ ಪಠ್ಯ ವಿಷಯಗಳನ್ನು ಕಲಾಶಾಲೆಗಳೂ ಅಳವಡಿಸಿಕೊಳ್ಳಬೇಕು. ಹಾಗೆಯೇ ಶಿಲ್ಪಕಲಾ ಪಠ್ಯಕ್ರಮವು ಪರಿಷ್ಕರಣೆಗೆ ಒಳಪಡಬೇಕು’ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ ಅವರು, ‘ಚಿತ್ರಕಲೆಯ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಅಪಾರ ಅನುಭವ ಹೊಂದಿರುವ ಅಧ್ಯಾಪಕರು, ಪಠ್ಯಕ್ರಮವನ್ನು ಪರಿಷ್ಕರಿಸಲು ಅಗತ್ಯ ಸೌಲಭ್ಯವನ್ನು ಕನ್ನಡ ವಿಶ್ವವಿದ್ಯಾಲಯ ಒದಗಿಸುತ್ತದೆ. ಈ ತರಬೇತಿ ಕಾರ್ಯಾಗಾರದ ಮೂಲಕ ಉತ್ತಮ ಪಠ್ಯಕ್ರಮ ಹೊರಬರಬೇಕಿದೆ’ ಎಂದರು.

ಸಂಗೀತ ವಿಭಾಗದ ವಿದ್ಯಾರ್ಥಿ ಮಾರುತಿ ಪ್ರಾರ್ಥಿಸಿದರು. ಉಪಕುಲಸಚಿವ ಡಾ.ಎ. ವೆಂಕಟೇಶ್ ಸ್ವಾಗತಿಸಿದರು. ಚಿತ್ರಕಲಾ ವಿದ್ಯಾಲಯದ ನಿರ್ವಹಣಾ ಕೇಂದ್ರದ ನಿರ್ದೇಶಕ ಡಾ. ಎಚ್.ಕೆ. ನಾಗೇಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶಿವಾನಂದ ಬಂಟನೂರ ಅತಿಥಿಗಳನ್ನು ಪರಿಚಯಿಸಿದರು. ಡಾ. ಮೋಹನ್ರಾವ್ ಪಾಂಚಾಳ ನಿರೂಪಿಸಿದರು. ಡಾ. ಎಚ್.ಎನ್. ಕೃಷ್ಣೇಗೌಡ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.