‘ಚಿನ್ನದ ಮೀನು’ ಫೆಲ್ಪ್ಸ್ನನ್ನು ಹಿಂದಿಕ್ಕಿ ದಾಖಲೆ ಬರೆದ ಸ್ಕೂಲಿಂಗ್

ರಿಯೊ ಡಿ ಜನೈರೊ(ಎಎಫ್ಪಿ): ಈಜುಕೊಳದ ‘ಚಿನ್ನದ ಮೀನು’ ಖ್ಯಾತಿಯ ಅಮೆರಿಕದ ಮೈಕೆಲ್ ಫೆಲ್ಪ್ಸ್ ಅವರನ್ನು ಹಿಂದಿಕ್ಕಿರುವ ಸಿಂಗಪುರದ ಜೋಸೆಫ್ ಸ್ಕೂಲಿಂಗ್ 100 ಮೀಟರ್ ಬಟರ್ಫ್ಲೈ ವಿಭಾಗದಲ್ಲಿ ಒಲಿಂಪಿಕ್ಸ್ನ ಚಾರಿತ್ರಿಕ ದಾಖಲೆ ಬರೆದರು.
ಶುಕ್ರವಾರ ನಡೆದ ಸ್ಪರ್ಧೆಯಲ್ಲಿ 200 ಮೀಟರ್ಸ್ ವೈಯಕ್ತಿಕ ಮೆಡ್ಲೆಯಲ್ಲಿ ಚಿನ್ನ ಗೆದ್ದು ಚಾರಿತ್ರಿಕ ದಾಖಲೆ ಬರೆದಿದ್ದ ಫೆಲ್ಪ್ಸ್ ಅವರ ಓಟಕ್ಕೆ ಬ್ರೇಕ್ ಹಾಕಿರುವ ಜೋಸೆಫ್ ಸ್ಕೂಲಿಂಗ್, 50.30 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನಕ್ಕೆ ಕೊರಳೊಡ್ಡಿದರು.
ಎರಡನೇ ಸ್ಥಾನಕ್ಕೆ ದಕ್ಷಿಣ ಆಫ್ರಿಕಾದ ಚಾದ್ ಲಿ ಕ್ಲೊಸ್ ಅವರೊಂದಿಗೆ ಪೈಪೋಟಿ ನಡೆಸಿದ ಪೆಲ್ಪ್ಸ್ 51.14 ಸೆಕೆಂಡುಗಳಲ್ಲಿ ಗುರಿ ತಲುಪಿ, ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.