ಭಾನುವಾರ, ಜೂನ್ 13, 2021
20 °C

‘ಚುನಾವಣಾ ಅಕ್ರಮ ತಡೆಗೆ ಸೂಚನೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ: ಲೋಕಸಭಾ ಚುನಾವಣೆ ಸಂಬಂಧ ಅಕ್ರಮ ಚಟುವಟಿಕೆ ಹಾಗೂ ಇತರೆ ಕಾನೂನು ಬಾಹಿರ ಕಾರ್ಯ ತಡೆಯುವಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕೆಂದು ಉಪವಿಭಾಗದ ಅಧಿಕಾರಿಯೂ ಆದ ಚಾಮರಾಜನಗರ ಲೋಕಸಭೆ ಕ್ಷೇತ್ರದ ಕೊಳ್ಳೇಗಾಲ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಎಚ್.ಎಸ್. ಸತೀಶ್‌ಬಾಬು ಅಧಿಕಾರಿಗಳಿಗೆ ತಿಳಿಸಿದರು.ಮಂಗಳವಾರ ಉಪವಿಭಾಗ ಕಚೇರಿಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಆಕ್ಸಿಕುಟಿವ್ ಮ್ಯಾಜಿಸ್ಟ್ರೇಟ್‌ಗಳಿಗೆ ನಡೆದ ತರಬೇತಿ ಸಭೆಯಲ್ಲಿ ಮಾತನಾಡಿದರು.ಪ್ರತಿ ಮತಗಟ್ಟೆಯ ಕೊಠಡಿಯಲ್ಲಿ ವಿದ್ಯುತ್, ಕಟ್ಟಡ ವ್ಯವಸ್ಥೆಯ ಬಗ್ಗೆ ಗಮನ ಹರಿಸುವುದು ರಾಜಕೀಯ ಪಕ್ಷಗಳ ಸಭೆಗಳಲ್ಲಿ ಚಿತ್ರೀಕರಣ ಮಾಡು ವುದು. ಸಾರ್ವಜನಿಕರಿಂದ ಬಂದ ದೂರನ್ನು ಅಧಿಕಾರಿಗಳು ಶೀಘ್ರದಲ್ಲಿ ಕಾನೂನು ಕ್ರಮ ಕೈಗೊಳುವುದು ಮತ್ತು ಹೊಸದಾಗಿ ಮತದಾನ ಪಟ್ಟಿಗೆ ಹೆಸರು ಸೇರ್ಪಡೆಗೆ ಇದೇ ತಿಂಗಳು 16ರಂದು ಕೊನೆ ದಿನ ಎಂದು ತಿಳಿಸಿದರು.ಈ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್‌ ಯಂತ್ರದಲ್ಲಿ ಚುನಾವಣಾ ಕಣದ ಎಲ್ಲಾ ಅಭ್ಯರ್ಥಿಗಳು ಬೇಡವಾದಲ್ಲಿ ಮತದಾನ ಯಂತ್ರದ ಕೊನೆಯ ಗುಂಡಿ ಒತ್ತುವುದು. ಸಾರ್ವಜನಿಕರು ಗರಿಷ್ಠ 50000 ರೂ ಗಳನ್ನು ನಗದನ್ನು ಕೊಂಡ್ಯೊಯಬಹುದು. ಅದಕ್ಕಿಂತ ಹೆಚ್ಚು ಹಣ ಕಂಡು ಬಂದಲ್ಲಿ ಅಧಿಕಾರಿಗಳಿಗೆ ಸೂಕ್ತ ದಾಖಲೆ ನೀಡಬೇಕು ಎಂದರು.ಬರುವ ಯುಗಾದಿ ಹಬ್ಬದ ಪ್ರಯುಕ್ತ ರಾಜಕೀಯ ಪಕ್ಷಗಳ ನಾಯಕರುಗಳು ಯಾವುದೇ ತರಹದ ಪ್ರೇರಪಣೆ ಮಾಡಬಾರದು ಮತ್ತು ತೋಟದ ಮನೆಗಳಲ್ಲಿ ಹಾಗೂ ಇತರೇ ಜಾಗಗಳಲ್ಲಿ ರಾಜಕೀಯ ಪಕ್ಷಗಳು ಊಟದ ವ್ಯವಸ್ಥೆ ಮಾಡುವಂತಿಲ್ಲ. ದೇವಸ್ಥಾನ ಚರ್ಚ್‌ ಮಸೀದಿಗಳಲ್ಲಿ ರಾಜಕೀಯ ಪ್ರಚಾರ ಮಾಡುವಂತಿಲ್ಲ. ಪಕ್ಷಗಳು ಸಭೆ ಸಮಾರಂಭ ಇತರ ಬಗ್ಗೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯಬೇಕು, ಕೊಳ್ಳೇಗಾಲ ಪಟ್ಟಣದಲ್ಲಿ ಚುನಾವಣೆ ಸಂಬಂಧ ದೂರುಗಳು ಬಂದಲ್ಲಿ ಉಪವಿಭಾ ಗಾಧಿಕಾರಿ ಸತೀಶ್‌ ಹಾಗೂ ನಗರಸಭೆ ಪೌರಾಯುಕ್ತ ಬಸವರಾಜು, ಸಮಾಜ ಕಲ್ಯಾಣ ಇಲಾಖಾಧಿಕಾರಿ ಜಗದೀಶ್ ಮತ್ತು ಕೃಷಿ ಮಾರುಕಟ್ಟೆ ಅಧಿಕಾರಿ ಶ್ರೀಹರಿ ಅವರುಗಳಿಗೆ ದೂರು ನೀಡತಕ್ಕದ್ದು ಎಂದು ತಿಳಿಸಿದರು.ದೂರವಾಣಿ: 08224 253615. ಯಳಂದೂರು ಪಟ್ಟಣದ ದೂರುಗಳನ್ನು ತಹಶೀಲ್ದಾರ್ ಸಿದ್ದಪ್ಪ, ಇಓ ರಂಗನಾಥ್, ಸಿಡಿಪಿಓ ನಾಗೇಶ್ ಅವರುಗಳಿಗೆ ನೀಡತಕ್ಕದ್ದು ಎಂದರು.ಸಭೆಯಲ್ಲಿ ಎಇಇ ಗಳಾದ ಉಜನಿ ಸಿದ್ದಪ್ಪ, ದೇವರಾಜು, ಅಂಬೇಡ್ಕರ್ ನಿಗಮದ ವ್ಯವಸ್ಥಾಪಕ ಹೇಮಂತ್ ಕುಮಾರ್, ಯಳದೂರು ತಹಶೀಲ್ದಾರ್ ಸಿದ್ದಪ್ಪ, ಬಿಇಓ ಮಂಜುನಾಥ್, ಕೃಷಿ ಅಧಿಕಾರಿಗಳು, ಸುಂದ್ರಮ್ಮ ಮತ್ತು ಸೋಮಶೇಖರ್ ಮುಂತಾದವರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.