ಸೋಮವಾರ, ಜನವರಿ 20, 2020
22 °C

‘ಜನಪರ ಚಿಂತನೆಯ ರಾಜಮನೆತನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಕಪುರ: ಒಂದು ಕಾಲಕ್ಕೆ ದೇಶದಲ್ಲಿನ 504 ಸಂಸ್ಥಾನಗಳಲ್ಲಿ ಮೈಸೂರು ಸಂಸ್ಥಾನವು ಮಾದರಿ ಸಂಸ್ಥಾನವಾಗಿತ್ತು. ಒಡೆಯರ ಮನೆತನವರು ಸುಖಭೋಗ, ವಿಲಾಸಿ ಜೀವನಕ್ಕೆ ಆಸೆ ಪಡದೆ ಸಾಮಾಜಿಕವಾಗಿ, ಜನಪರ ಚಿಂತನೆಗಳಿಂದ ಅಭಿವೃದ್ಧಿ ಕೆಲಸ ಮಾಡಿದ್ದರಿಂದ ದೇಶದಲ್ಲಿಯೇ ಮೈಸೂರು ರಾಜಮನೆತನದ ಬಗ್ಗೆ ಜನರಿಗೆ ಅಪಾರ ವಿಶ್ವಾಸ, ಗೌರವ, ಪ್ರೀತಿಯಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರವಿ ಹೇಳಿದರು.  

 

ತಾಲ್ಲೂಕಿನ ಕಸಬಾ ಹೋಬಳಿ ಅಳ್ಳಿಮಾರನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಶ್ರೀಕಂಠದತ್ತ ಒಡೆಯರು ವಿಧಿವಶವಾಗಿರುವ ಹಿನ್ನೆಲೆಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಒಂದು ನಿಮಿಷಕಾಲ ಮೌನಾಚರಣೆ ಮಾಡಿ ಅವರು ಮಾತನಾಡಿದರು. ಸಂಸ್ಥಾನವು ಇಂಗ್ಲೀಷರ ಅಧೀನದಲ್ಲಿ ಕೆಲಸ ಮಾಡುತ್ತಿದ್ದರೂ ಎಂದಿಗೂ ಪ್ರಜೆಗಳಿಗೆ ತೊಂದರೆ ನೀಡಲಿಲ್ಲ. ಬದಲಾಗಿ ಆರ್ಥಿಕ ಸಂಕಷ್ಟದ ಪರಿಸ್ಥಿತಿ ಯಲ್ಲೂ ರಾಜ್ಯದ ಜನತೆಗಾಗಿ ಕೃಷ್ಣರಾಜಸಾಗರ ಜಲಾಶಯವನ್ನು ನಿರ್ಮಾಣ ಮಾಡಿದರು. ಹಣ ಕಾಸಿನ ಮುಗ್ಗಟ್ಟು ಎದುರಾದಾಗ ಅರಮನೆಯಲ್ಲಿನ ಬಂಗಾರವನ್ನು ಮಾರಾಟ ಮಾಡಿ ಎದುರಿಸಿದರು. ಅವರು ಮಾಡಿರುವ ಜನಪರ ಕೆಲಸಗಳು ಇಂದಿಗೂ ಅವಿಸ್ಮರಣೀಯವಾಗಿವೆ ಎಂದು ಸ್ಮರಿಸಿದರು.ಪರಂಪರೆಯ ಗುಣಗಾನ

ಮಾಗಡಿ:
  ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್‌  ನಿಧನಕ್ಕೆ ಡಿ.ದೇವರಾಜ ಅರಸು ಸಾಂಸ್ಕೃತಿಕ, ವಿಚಾರ ವೇದಿಕೆ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸ ಲಾಯಿತು. ಪಟ್ಟಣದ ಕೋಟೆ ರಾಮೇಶ್ವರ ನಗರದಲ್ಲಿ ಸಭೆ ನಡೆಸಿ ಒಡೆಯರ್‌ ಅವರ ಗುಣಗಾನ ಮಾಡ ಲಾಯಿತು.

ವೇದಿಕೆಯ ಕಾರ್ಯದರ್ಶಿ ಬಿ.ವಿ. ಜಯರಾಮು, ಖಜಾಂಚಿ ಹೊಸಪೇಟೆ ಜಯಣ್ಣ, ಸಹ ಕಾರ್ಯದರ್ಶಿ ಟಿ.ಎಂ. ಶ್ರೀನಿವಾಸ್‌, ಹೊಸಪೇಟೆಯ ನಾಗ ರಾಜು, ನೇತೇನ ಹಳ್ಳಿ ಗ್ರಾ.ಪಂ.ಅಧ್ಯಕ್ಷ ದಶರಥ, ಎಂ.ಎಸ್‌.ಸಿದ್ದಲಿಂಗೇಶ್ವರ್‌ ಇತರರು ಇದ್ದರು.ಡ್ಯೂಂಲೈಟ್‌ ಸರ್ಕಲ್‌ನಲ್ಲಿ ನಡೆದ ಸಂತಾಪ ಸೂಚಕ ಸಭೆಯಲ್ಲಿ ಅನಿಲ್‌ ಕುಮಾರ್‌, ಮೋಹನ್‌ ಕುಮಾರ್‌ ಮತ್ತು ಕೆಂಪೇಗೌಡ ವೃತ್ತದಲ್ಲಿ ನಡೆದ ಸಂತಾಪ ಸೂಚಕ ಸಭೆಯಲ್ಲಿ ವಿಜಯ ಸಿಂಹ, ಕೆ.ಎಸ್‌.ಶಶಿಧರ್‌ ಇತರರು ಸಂತಾಪ ಸೂಚಿಸಿದರು. ತಾಲ್ಲೂಕು ಕುರುಬರ ಸಂಘ, ಮಡಿವಾಳರ ಸಂಘ, ಯಾದವ ಸಂಘ, ಕುರುಹಿನಶೆಟ್ಟಿ , ಗಾಣಿಗ, ವೀರಶೈವ ಯುವಕರ ಸಂಘ, ಒಕ್ಕಲಿಗರ ಯುವ ವೇದಿಕೆ, ದಲಿತ ಸಂಘರ್ಷ ಸಮಿತಿ, ತಿಗಳ ಗೌಡ ಯುವಕರ ಸಂಘ, ಬಣಜಿಗರ ಸಂಘ, ತಾಲ್ಲೂಕು ಬೆಳವಸಿರಿ ಗೊಲ್ಲರ ಸಂಘ ಇನ್ನಿತರೆ ಸಂಘ ಸಂಸ್ಥೆಗಳ ವತಿ ಯಿಂದ ಸಂತಾಪ ಸಭೆಗಳನ್ನು ನಡೆಸ ಲಾಯಿತು.ತಾಲ್ಲೂಕಿನ ಕುದೂರು, ತಿಪ್ಪಸಂದ್ರ,  ಲಕ್ಕೇನ ಹಳ್ಳಿ, ಮೋಟಗೊಮಡನ ಹಳ್ಳಿ, ಗುಡೇಮಾರನ ಹಳ್ಳಿ, ಸೋಲೂರು, ಮಾದಿಗೊಂಡನ ಹಳ್ಳಿ, ಪೋಲೋಹಳ್ಳಿ, ಬಾಚೇನ ಹಟ್ಟಿ, ದೇವರಹಟ್ಟಿಯ ಲಕ್ಷ್ಮೀನರ ಸಿಂಹಸ್ವಾಮಿ, ಶ್ರೀಗಿರಿಪುರದ ಗೊಲ್ಲರಹಟ್ಟಿಯ ಚಿತ್ರಲಿಂಗೇಶ್ವರ ಸ್ವಾಮಿ ದೇವಾಲಯದ ಮುಂಭಾಗ ದಲ್ಲಿ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮೌನ ಆಚರಿಸಿ ಸಂತಾಪ ಸೂಚಿಸಲಾಯಿತು.ವ್ಯಾಪಾರ ವಹಿವಾಟು ಬಂದ್‌

ಚನ್ನಪಟ್ಟಣ:
ತಾಲ್ಲೂಕಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಟ್ಟಣದ ಗಾಂಧಿ ಭವನದಲ್ಲಿ ಬುಧವಾರ ಶ್ರದ್ಧಾಂಜಲಿ ಸಲ್ಲಿಸಿದರು.

ಜಿಲ್ಲಾ ಜಾನಪದ ಅಕಾಡೆಮಿ ಅಧ್ಯಕ್ಷ ಸು.ತ.ರಾಮೇಗೌಡ, ಸಿ.ಲಿಂ.ನಾಗರಾಜ್,  ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಟಿ.ನಾಗೇಶ್, ಕಾರ್ಯದರ್ಶಿ ರಾಜಶೇಖರ್, ತಾಲ್ಲೂಕು ಕಸಾಪ ಅಧ್ಯಕ್ಷ ಎಂ.ಶಿವ ಮಾದು, ಕಾರ್ಯದರ್ಶಿ ರಾಮ ಕೃಷ್ಣಯ್ಯ, ತಾ.ಪಂ. ಉಪಾಧ್ಯಕ್ಷ ವೆಂಕಟೇಶ್, ಸದಸ್ಯ ಚಿನ್ನಗಿರಿ ಗೌಡ, ನಗರ ಸಭೆ ಸದಸ್ಯರಾದ ರಮೇಶ್‌ಬಾಬು, ಮಧು, ಹಾಪ್‌ಕಾಮ್ಸ್ ಮಾಜಿ ನಿರ್ದೇಶಕ ಎಸ್.ಸಿ.ಶೇಖರ್, ಪಿಎಲ್‌ಡಿ ಬ್ಯಾಂಕ್ ಮಾಜಿ ನಿರ್ದೇೇಶಕ ರಾಂಪುರ ಧರಣೀಶ್, ಜೆಡಿಎಸ್ ಮುಖಂಡ ಎಂ.ಜಿ.ಕೆ.ಪ್ರಕಾಶ್, ಕನ್ನಡ ಸೇನೆ ತಾಲ್ಲೂಕು ಅಧ್ಯಕ್ಷ ನಾಗೇಂದ್ರ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯ ಉಪಾಧ್ಯಕ್ಷ ಮರಂಕೇಗೌಡ, ತಾಲ್ಲೂಕು ಅಧ್ಯಕ್ಷ ಬೇವೂರು ಯೋಗೀಶ್‌ಗೌಡ, ನೃತ್ಯಗುರು ಸುಜೇಂದ್ರಬಾಬು, ಮಾಜಿ ತಾ.ಪಂ. ಸದಸ್ಯ ಸಿದ್ದರಾಮಯ್ಯ ಹೆಗ್ಗಡೆ ಮುಂತಾದವರು ಭಾಗವಹಿಸಿ ಸಂತಾಪ  ಸೂಚಿಸಿದರು.ಹಾಗೆಯೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಒಡೆಯರ್ ಅಭಿ ಮಾನಿಗಳು ಸಂತಾಪಸಭೆ ಏರ್ಪಡಿಸಿ  ಶ್ರದ್ಧಾಂಜಲಿ ಅರ್ಪಿಸಿದರು. ಪಟ್ಟಣದ ಎಂ.ಜಿ.ರಸ್ತೆ, ಪೇಟೆ ಬೀದಿ, ಜೆ.ಸಿ. ರಸ್ತೆಗಳಲ್ಲಿನ ಅಂಗಡಿ ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚಿ ಗೌರವ ಸಲ್ಲಿಸಿದರು.ಹೊಂಗನೂರು: ತಾಲ್ಲೂಕಿನ ಹೊಂಗ ನೂರಿನ ವಿಜಯನಗರದ ಅರಸು ಅಭಿವೃದ್ಧಿ ಸಂಘ, ಮಂಜುನಾಥ ಅರಸು ಗೆಳೆಯರ ಬಳಗದ ವತಿಯಿಂದ ಗ್ರಾಮದಲ್ಲಿ ಸಂತಾಪಸಭೆ ನಡೆಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಗ್ರಾಮದ ಶ್ರೀರಾಮ ಅರಸು ಮಂಡಳಿ ವತಿಯಿಂದ ಭಜನಾವಳಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸಂಘದ ಅಧ್ಯಕ್ಷ ಸುಗಂಧರಾಜೇ ಅರಸು, ಕಾರ್ಯ ದರ್ಶಿ ಕುಮಾರ್ ವೆಂಕಟರಾಜೇ ಅರಸು, ಸುಬ್ರಹ್ಮಣ್ಯರಾಜೇ ಅರಸು, ರಾಮ ಲಿಂಗರಾಜೇ ಅರಸು, ಗೋವಿಂದರಾಜೇ ಅರಸು, ಎಂಪಿಸಿಎಸ್ ಮಾಜಿ ಅಧ್ಯಕ್ಷ ಕುಮಾರರಾಜೇ ಅರಸು, ಎಸ್.ಡಿ. ಎಂ.ಸಿ ಅಧ್ಯಕ್ಷ ಅಶ್ವತ್ಥ್‌ರಾಜೇ ಅರಸು, ಮಲ್ಲಿಕಾರ್ಜುನ ರಾಜೇ ಅರಸು, ಗೆಳೆಯರ ಬಳಗದ ಸೋಮಶೇಖರ್‌ ರಾಜೇ ಅರಸು, ಚಿನ್ನಗಿರಿ, ಗಂಗಾಧರ್, ಗಿರೀಶ್, ರವಿ, ಕಾಂತರಾಜೇ ಅರಸು ಇತರರು ಇದ್ದರು.

ಪ್ರತಿಕ್ರಿಯಿಸಿ (+)