ಸೋಮವಾರ, ಜನವರಿ 27, 2020
16 °C

‘ಜಾತಿ ವಿನಾಶಕ್ಕೆ ಅಂತರ್ಜಾತಿ ವಿವಾಹವೇ ಪರಿಹಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಜಾತಿನಿರ್ಮೂಲನೆಗೆ ಅಂತ­ರ್ಜಾತಿ ವಿವಾಹವೇ ಪರಿಹಾರ. ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ದಲಿತ ಹೆಣ್ಣುಮಗಳನ್ನು ಮದುವೆ­ಯಾಗುವ ಮೂಲಕ ಈ ವಿಚಾರದಲ್ಲಿ ದೇಶದ ಯುವಕರಿಗೆ ಮಾದರಿಯಾಗ­ಬೇಕು’ ಎಂದು ಭಾರತೀಯ ರಿಪಬ್ಲಿಕನ್‌ ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷ ರಾಮ್‌ದಾಸ್‌ ಅಠಾವಳೆ ಹೇಳಿದರು.ಸಮತಾ ಸೈನಿಕ ದಳ ಮತ್ತು ಭಾರ­ತೀಯ ರಿಪಬ್ಲಿಕನ್‌ ಪಕ್ಷ ನಗರದಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಮುಖಂಡರ ಸಮಾವೇಶದಲ್ಲಿ ಮಾತನಾಡಿದರು.‘ದೇಶದಲ್ಲಿ ಅಂತರ್ಜಾತಿ ವಿವಾಹಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ­ಗಳು ಅಂತರ್ಜಾತಿ ವಿವಾಹಕ್ಕೆ ಉತ್ತೇಜನ ನೀಡಬೇಕು. ಅಂತರ್ಜಾತಿ ವಿವಾಹವಾದವರಿಗೆ ಸಾಮಾಜಿಕ ಭದ್ರತೆ ಒದಗಿಸಲು ಸರ್ಕಾರ ಮುಂದಾ­ಗ­ಬೇಕು’ ಎಂದು ಒತ್ತಾಯಿಸಿದರು.‘ಭೂಸುಧಾರಣೆಯ ಕಾನೂನು­ಗಳು ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ಭೂರಹಿತ ದಲಿತರಿಗೆ ಜಮೀನು ಹಂಚಿಕೆ ಮಾಡಲು ಮುಖ್ಯ­ಮಂತ್ರಿ ಸಿದ್ದರಾಮಯ್ಯ ವಿಶೇಷ ಆಸಕ್ತಿ ವಹಿಸಬೇಕು’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)