ಮಂಗಳವಾರ, ಜೂನ್ 22, 2021
22 °C

‘ದೃಷ್ಟಿ’ ಸುಧಾರಣೆಗೆ ಬಿಡಿಎ ಸಮೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿ­ಕಾರ (ಬಿಡಿಎ) ಅಂತರ್ಜಾಲ ಆಧಾರಿತ ನಕ್ಷೆ ವ್ಯವಸ್ಥೆ ‘ದೃಷ್ಟಿ’ಯನ್ನು ಸುಧಾರಿಸಲು ಮುಂದಾ­ಗಿದ್ದು, ಇದಕ್ಕಾಗಿ ಸಾರ್ವಜನಿಕರಿಂದ ಅಭಿ­ಪ್ರಾಯ ಸಂಗ್ರಹಿಸುವ ಸಮೀಕ್ಷೆ ಆರಂಭಿಸಿದೆ.ಗೂಗಲ್‌ ಅರ್ಥ್‌ ನೆರವಿನಿಂದ ನಗರದ ಸಂಪೂರ್ಣ ನಕ್ಷೆ, ಜಮೀನಿನ ವಿವರ­ ತೋರಿ­ಸುವ ವ್ಯವಸ್ಥೆ ಇದಾಗಿದೆ.

ದೃಷ್ಟಿ ವ್ಯವಸ್ಥೆಯ ನಿರಂತರ ಬಳಕೆದಾರರಿಗೆ ಇ– ಮೇಲ್‌ ಕಳಿಸಿರುವ ನಿರ್ವಾಹಕರು, ಈ ವ್ಯವ­ಸ್ಥೆ­­ ಸುಧಾರಣೆಗೆ ಸಲಹೆ­ಗಳನ್ನು ಕೇಳಿದ್ದಾರೆ. ಸೇವೆ ತೃಪ್ತಿ ತಂದಿ­ದೆಯೇ, ವ್ಯವಸ್ಥೆಯನ್ನು ಇನ್ನಷ್ಟು ಸರಳ­ಗೊಳಿ­ಸಲು ಸಾಧ್ಯವೆ, ಈ ಬಗ್ಗೆ ಇತರೆ ಸಲಹೆಗಳನ್ನು ನೀಡಿ ಎಂಬ ಕಾಲಂಗಳನ್ನು ಸಲಹಾ­ಪಟ್ಟಿಯಲ್ಲಿ ಕೇಳಲಾಗಿದೆ. ಕೆಲ ತಿಂಗಳ ಹಿಂದೆ ಈ ಸೇವೆ ಸ್ಥಗಿತ­ಗೊಂಡಿತ್ತು.ಈ ಸೇವೆಯಿಂದ ಸರ್ಕಾರಿ ಜಮೀನು ಗುರುತಿಸಿ, ಒತ್ತುವರಿ ಮಾಡಿಕೊ­ಳ್ಳಲು ಅವಕಾಶವಾ­ಗು­ತ್ತದೆ ಎಂದು ಸರ್ಕಾರ­ದಲ್ಲಿ­­ರುವ ಕೆಲವರು ದೂರಿ­ದ್ದರು. ಹೀಗಾಗಿ ಈ ಸೇವೆ­­ಯನ್ನು ಕೆಲ ದಿನ­ಗಳ ಕಾಲ ಸ್ಥಗಿತ­ಗೊಳಿ­ಸಲಾ­ಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.ದೃಷ್ಟಿ ವ್ಯವಸ್ಥೆಯನ್ನು ಖಾಸಗಿ ಕಂಪೆನಿ­ನಿರ್ವ­ಹಿ­ಸು­ತ್ತಿದೆ. ಕಂಪೆನಿಗೆ ಗುತ್ತಿಗೆ ಆಧಾ­ರದಲ್ಲಿ ಈ ವ್ಯವಸ್ಥೆಯ ನಿರ್ವಹಣೆಯ ಜವಾ­ಬ್ದಾರಿ ವಹಿ­ಸ­­ಲಾಗಿದೆ. ಪ್ರತಿ ವರ್ಷವೂ ಗುತ್ತಿಗೆ ನವೀಕ­ರಣ­ವಾ­ಗುತ್ತದೆ. ಈ ವರ್ಷ ವ್ಯವಸ್ಥೆ ಸುಧಾ­ರಿ­ಸಲು ಕ್ರಮ ಕೈಗೊಳ್ಳಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.