ಹಾವೇರಿ: ಕಂಡ ಭಕ್ತರಿಗೆ ಕೈಮುಗಿವಾತನೆ ಭಕ್ತ,
ಮೃದುವಚನವೆ ಸಕಲ ಜಪಂಗಳಯ್ಯಾ
ಮೃದುವಚನವೆ ಸಕಲ ತಪಂಗಳಯ್ಯಾ
ಸದುವಿನಯವೆ ಸದಾಶಿವನ ಒಲುಮೆಯಯ್ಯಾ...

–12 ಶತಮಾನದಲ್ಲಿ ಬಸವಣ್ಣನ ವರು ನುಡಿದ ‘ವಚನ’ದ ಸ್ವರೂಪ ಎಂಬಂತೆ ಸದಾ ಹಸನ್ಮುಖಿ ಸದಾಶಿವ ಮಹಾಸ್ವಾಮಿ ಪೀಠಾಧ್ಯಕ್ಷರಾಗಿರುವ ಹುಕ್ಕೇರಿ ಮಠ ‘ನಮ್ಮೂರ ಜಾತ್ರೆ’ಗೆ ಸಿದ್ಧ ಗೊಂಡಿದೆ. ಶಿವಬಸವ ಮಹಾಶಿವ ಯೋಗಿಗಳ 70ನೇ ಹಾಗೂ ಶಿವಲಿಂಗ ಮಹಾಶಿವಯೋಗಿಗಳ 7ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮಗಳಿಗೆ ಇದೇ 16ರಿಂದ ಚಾಲನೆ ಸಿಗಲಿದೆ.

ಹಿನ್ನೆಲೆ: 1905ರಲ್ಲಿ ಹುಕ್ಕೇರಿಮಠದ ಪೀಠಾಧಿಪತಿಯಾದ ಶಿವಬಸವ ಮಹಾ ಶಿವಯೋಗಿಗಳ 69ನೇ ಹಾಗೂ 1946 ರಲ್ಲಿ ಪೀಠಾಧಿಪತಿಯಾದ ಶಿವ ಲಿಂಗ ಮಹಾಶಿವಯೋಗಿಗಳ 6ನೇ ಪುಣ್ಯ ಸ್ಮರಣೋತ್ಸವ.

ಶಿವಬಸವ ಸ್ವಾಮಿ 1909ರಲ್ಲಿ ಧಾರ್ಮಿಕ ಪಾಠ ಶಾಲೆ ಹಾಗೂ ದಾಸೋಹ, ದಾನಗಳನ್ನು ಆರಂಭಿಸಿ ದ್ದರು. 3ಮಾರ್ಚ್ 1918ರಲ್ಲಿ ಜನಿಸಿದ್ದ ಶಿವಲಿಂಗ ಸ್ವಾಮೀಜಿ 1946ರಲ್ಲಿ ಮಠದ ಪೀಠಾಧಿಪತಿಯಾದರು. ಸರ್ವ ಜನಾಂಗ ವನ್ನು ಸಾಮರಸ್ಯ ಭಾವದಿಂದ ಕಂಡರು.

1973ರ ಜುಲೈ 20ರಂದು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದರು. 1979ರಲ್ಲಿ ಕಲ್ಯಾಣಮಂಟಪ ನಿರ್ಮಿಸಿದರು. 1986 ರಲ್ಲಿ ಶಾರದಾ ಸಂಗೀತ ವಿದ್ಯಾಲಯ, 1992ರಲ್ಲಿ ಮಹಿಳಾ ಕಾಲೇಜು, 1996 ರಲ್ಲಿ ಪ್ರಸಾದ ನಿಲಯ ಆರಂಭಿಸಿದರು.

ಅವರ ಮರಣಾ ನಂತರ 2008ರಲ್ಲಿ ತಮ್ಮ 20ರ ವಯಸ್ಸಿನಲ್ಲೇ ಸದಾಶಿವ ಸ್ವಾಮೀಜಿ (20 ಆಗಸ್ಟ್ 1988) ಪೀಠಾ ಧಿಪತಿಗಳಾದರು. ಕಳೆದ ಏಳು ವರ್ಷ ಗಳಿಂದ ಧಾರ್ಮಿಕ ಕಾರ್ಯಗಳೊಂದಿಗೆ ಮಠವನ್ನು ಮುನ್ನೆಡೆಸುತ್ತಿದ್ದಾರೆ.

ಜಾತ್ರೆ: ಇದೇ 16ರಂದು ಬೆಳಿಗ್ಗೆ 8.30ಕ್ಕೆ ಷಟಸ್ಥಲ ಧ್ಜಜಾರೋಹಣ, ಸಂಜೆ 6.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ. ಇದೇ 17ರಂದು ಸಂಜೆ 6.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ಮತ್ತು ಮಹಿಳಾಗೋಷ್ಠಿ. ಅಂದು ಬೆಳಿಗ್ಗೆ 10.30 ಕ್ಕೆ ಓಂ ಟೀಂ ವತಿಯಿಂದ ಶಿವಬಸವೇಶ್ವರ ಕಲ್ಯಾಣಮಂಟಪದಲ್ಲಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ.

ಇದೇ 18ರಂದು ಬೆಳಿಗ್ಗೆ 10.30ಕ್ಕೆ ರೈತ ಸಮಾವೇಶ, ಸಂಜೆ 6.30ಕ್ಕೆ ಧಾರ್ಮಿಕ ಸಭೆ, ಧ್ವನಿಸುರುಳಿ ಬಿಡುಗಡೆ, ಇದೇ 19ರಂದು ಸಂಜೆ 6.30ಕ್ಕೆ ಧಾರ್ಮಿಕ ಕಾರ್ಯಕ್ರಮ. ಇದೇ 20 ರಂದು ಬೆಳಿಗ್ಗೆ 9ರಿಂದ ವೀರಾಪುರ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ವೈದ್ಯರಿಂದ ಉಚಿತ ಆರೋಗ್ಯ ಶಿಬಿರ ನಡೆಯಲಿದೆ.

ಮೆರವಣಿಗೆ: ಇದೇ 20ರಂದು ಉಭಯ ಶ್ರೀಗಳ ಪುಣ್ಯ ದಿನಾಚರಣೆ ಅಂಗವಾಗಿ ಬೆಳಿಗ್ಗೆ 8ಕ್ಕೆ ಗದ್ದುಗೆಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಮಧ್ಯಾಹ್ನ 12ಕ್ಕೆ ಮಹಾಗಣಾರಾಧನೆ, ಉಭಯ ಶ್ರೀಗಳ ಭಾವಚಿತ್ರದ ಮೆರವಣಿಗೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.