ಉಗ್ರಸೇನನ ಪಾತ್ರ ಮಾಡಿದ ಸುಮಲತಾ ಅಪ್ಪನ ಕೈ ಹಿಡಿದು ಪುಟ್ಟಮಗು ಜಾತ್ರೆಯಲ್ಲಿ ಓಡಾಡುವಂತೆ ಸುತ್ತಾಡಿ ಸಂಭ್ರಮಿಸಿದ್ದಳು. ಐದು ಬಾರಿ ಬಣ್ಣ ಹಚ್ಚಿ ರಂಗದ ಮೇಲೆ ಬಂದಿದ್ದರೂ ಇದೇ ಮೊದಲಬಾರಿಗೆ ಅಪ್ಪ ತನ್ನ ವೇಷ ನೋಡಲು ಬಂದಿರುವುದೇ ಮಗಳ ಸಂಭ್ರಮಕ್ಕೆ ಎಣೆಯಿಲ್ಲದಂತಾಗಿತ್ತು.

ಕುಂದಾಪುರ ತಾಲೂಕಿನ ಮಾರಣಕಟ್ಟೆಯ ಕಲಾವತಿಗೆ ಮುಮ್ಮೇಳದಂತೆ ಹಿಮ್ಮೇಳದಲ್ಲಿಯೂ ಬಹಳ ಆಸಕ್ತಿ. ಭಾಗವತಿಕೆಯನ್ನೂ ಮಾಡಿ ಸೈ ಅನ್ನಿಸಿಕೊಂಡಾಕೆ.

ಕರಾವಳಿಯವಳೇ ಆಗಿದ್ದರೂ ನಾನು ಬೆಳೆದದ್ದೆಲ್ಲ ಬಾಗಲಕೋಟೆಯಲ್ಲಿ, ಹಾಗಾಗಿ ಯಕ್ಷಗಾನದ ಬಗ್ಗೆ ಅಷ್ಟು ಗೊತ್ತಿಲ್ಲದಿದ್ದರೂ ಇಷ್ಟಪಟ್ಟು ಕಲಿತೆ ಎನ್ನುತ್ತಾಳೆ ರಿಚಿಮತಿದೇವಿಯ ಪಾತ್ರವನ್ನು ಮನೋಜ್ಞವಾಗಿ ಅಭಿನಯಿಸಿದ ಸುಪ್ರೀತಾ.

ಸ್ವ ಉದ್ಯೋಗ ಮಾಡಿಕೊಂಡು ಅವಕಾಶ ಸಿಕ್ಕಾಗಲೆಲ್ಲಾ ಯಕ್ಷಗಾನ ಮಾಡಿ ಸಂಭ್ರಮಿಸುವ ಬೇಬಿ ಕನ್ಯಾನ ಅವರಿಗೆ ಈ ಬಾರಿ ಸಂಭ್ರಮಪಡುವುದಕ್ಕೆ ಮತ್ತೊಂದು ಕಾರಣ ತಂಗಿ ಶಾಂತಿಯೂ ವೇಷ ಮಾಡುತ್ತಿರುವುದು.

‘ನಮ್ಮೂರು ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿ. ಒಂದಕ್ಷರವನ್ನೂ ಓದಲು ಬಾರದ ನಾನು ಕುರಿಕಾಯುತ್ತ ಬೆಳೆದವನು. ಶಾಲೆಯ ಮೆಟ್ಟಿಲನ್ನೇ ಹತ್ತದ ನಾನಿಂದು ಬಣ್ಣಹಚ್ಚಿಕೊಂಡು ಯಕ್ಷಗಾನ ಮಾಡಿದ್ದೇನೆ. ಹುಟ್ಟಿದ ಮೇಲೆ ಇದೇ ಮೊದಲ ಬಾರಿಗೆ ರಂಗದ ಮೇಲೆ ಬಂದಿದ್ದೇನೆ. ಯಕ್ಷಗಾನದ ಮಾತುಗಳನ್ನು ಮೊಬೈಲಿನಲ್ಲಿ ರೆಕರ್ಡ್ ಮಾಡಿಕೊಂಡು ಕೇಳಿ ಕೇಳಿ ಕಲಿತೆ...’ ಹೀಗೆ ಹೇಳುವಾಗ ಪರಶುರಾಮನ ಕಣ್ಣುಗಳು ಹೊಳೆಯುತ್ತಿದ್ದವು.

....ಹೀಗೆ ಇವರೆಲ್ಲ ಬಣ್ಣ ಹಚ್ಚಿಕೊಂಡು ಚೆಂಡೆಮದ್ದಳೆಯ ತಾಳಕ್ಕೆ ಗೆಜ್ಜೆಕಟ್ಟಿಕೊಂಡು ಹೆಜ್ಜೆ ಹಾಕಿದ್ದು ಕುಂದಾಪುರ ತಾಲೂಕಿನ ಸಿ.ಡಬ್ಲ್ಯೂ.ಸಿ.ಯ ಅಂಗಸಂಸ್ಥೆ ‘ನಮ್ಮ ನಾಳಂದ’ ಶಾಲೆಯ ಆವರಣದಲ್ಲಿ. ದುಡಿಯುವ ಮಕ್ಕಳಿಗೆ ವೃತ್ತಿಕೌಶಲ್ಯವನ್ನು ಹೇಳಿಕೊಡುವ ಪಾಠಶಾಲೆ ನಮ್ಮ ಭೂಮಿ. ಇಲ್ಲಿ ಮಕ್ಕಳು ಇಷ್ಟಪಡುವ ವೃತ್ತಿಯಲ್ಲಿ ತರಬೇತಿ ನೀಡಲಾಗುತ್ತದೆ.

ಜೀವನ ಶಿಕ್ಷಣ, ಹೈನುಗಾರಿಕೆ, ಸಾವಯವ ಕೃಷಿ, ಪೇಪರ್ ಬ್ಯಾಗ್, ಜೇನು ಸಾಕಾಣಿಕೆ, ಕರಾಟೆ, ಸಂಗೀತ, ಚಿತ್ರಕಲೆ, ಕಟ್ಟಡ ನಿರ್ಮಾಣ, ಟೈಲರಿಂಗ್, ಕಂಪ್ಯೂಟರ್ ಮುಂತಾದ ವಿಷಯಗಳನ್ನು ಮಕ್ಕಳಿಗೆ ಇಲ್ಲಿ ಹೇಳಿಕೊಡಲಾಗುತ್ತದೆ. ಬರಿಯ ವೃತ್ತಿ ತರಬೇತಿಯಲ್ಲದೆ ಆ ವೃತ್ತಿಯಲ್ಲಿ ಮುಂದುವರಿಯಲು ಸಹಾಯಕವಾದ ಬ್ಯಾಂಕಿಂಗ್, ಮಾರ್ಕೆಟಿಂಗ್ ಮುಂತಾದವುಗಳ ಜೊತೆಗೆ ಸಾಂಸ್ಕೃತಿಕ ವೇದಿಕೆಯನ್ನೂ ಕಲ್ಪಿಸಲಾಗುತ್ತದೆ. ಇಲ್ಲಿನ ಮಕ್ಕಳು ತರಬೇತಿಯ ಜೊತೆ ಜೊತೆಗೆ ಯಕ್ಷಗಾನ, ನಾಟಕ, ಕೋಲಾಟ, ಜಾನಪದ ಹಾಡುಗಳು, ಭತ್ತ ಕುಟ್ಟುವ ಹಾಡುಗಳು ಮುಂತಾದವುಗಳನ್ನು ಕಲಿಯುತ್ತಾರೆ.

ತರಬೇತಿ ಪಡೆಯುತ್ತಿರುವ ಮಕ್ಕಳೆಲ್ಲ ‘ಭೀಮ ಸಂಘ’ಕ್ಕೆ ಸೇರಿದವರಾದರೆ, ತರಬೇತಿ ಮುಗಿಸಿ ಸ್ವ ಉದ್ಯೋಗ ಮಾಡುವ ಹದಿನೆಂಟು ವರ್ಷ ಮೀರಿದ ಯುವಕ ಯುವತಿಯರ ಸಂಘಟನೆ ‘ನಮ್ಮ ಸಭಾ’.

ಇವರೆಲ್ಲರ ಸಾಂಸ್ಕೃತಿಕ ವೇದಿಕೆ ಭೀಮ ಕಲಾರಂಗ. ಕನ್ನಡನಾಡಿನಲ್ಲಿ ಮೊತ್ತ ಮೊದಲ ಬಾರಿಗೆ ಪ್ಲಾಸ್ಟಿಕ್ ವಿರುದ್ಧ ದನಿ ಎತ್ತಿದ್ದು ಉಡುಪಿ ನಗರಸಭೆ ಡಾ. ನಿ. ಮುರಾರಿ ಬಲ್ಲಾಳ ನೇತೃತ್ವದಲ್ಲಿ. ಆಗ ಆ ದನಿಗೆ ಸಾಂಸ್ಕೃತಿಕ ಆಯಾಮ ನೀಡಿದ್ದು ಇದೇ ದುಡಿಯುವ ಮಕ್ಕಳ ವೇದಿಕೆ ಭೀಮ ಕಲಾರಂಗ. ಎ.ಕೆ. ಹಿಮಕರ ಅವರ ಮಾರ್ಗದರ್ಶನದಲ್ಲಿ ‘ಎಸೆದು ನೋಡಿ ಸುಟ್ಟು ನೋಡಿ’ ಎಂಬ ತನ್ನ ಬೀದಿನಾಟಕದ ಮೂಲಕ ಕರಾವಳಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ವಿರುದ್ಧದ ಅಭಿಯಾನವನ್ನೇ ಹುಟ್ಟುಹಾಕಿದ ಹೆಗ್ಗಳಿಕೆ ಈ ದುಡಿಯುವ ಮಕ್ಕಳದ್ದು ಎನ್ನುತ್ತಾರೆ ಭೀಮ ಕಲಾರಂಗದ ರೂವಾರಿಗಳಲ್ಲೊಬ್ಬರಾದ ಕಲಾವಿದ ಸುಂದರ ಬಾಯಾರು.

ಸಮಾಜದ ಬೇರೆ ಬೇರೆ ಸ್ಥರಗಳಲ್ಲಿ ದೌರ್ಜನ್ಯಕ್ಕೆ ತುತ್ತಾದ, ಬಡತನದ ಕ್ರೌರ್ಯಕ್ಕೆ ಸಿಕ್ಕಿ ನಲುಗಿದ, ಶ್ರೀಮಂತರು ನಾಗರಿಕರು ಎಂದೆಲ್ಲ ಕರೆಸಿಕೊಳ್ಳುವವರ ಮನೆಗಳಲ್ಲಿ ಕೆಲಸಕ್ಕಿದ್ದು ಹಸಿವಿಂದ ನರಳಿದ, ಇಸ್ತ್ರಿ ಪೆಟ್ಟಿಗೆಯ ಬೆಂಕಿಯಲ್ಲಿ ಅಂಗಾಂಗಳನ್ನು ಸುಟ್ಟುಕೊಂಡ, ಹೊಟ್ಟೆಯ ಹಸಿವಿಗೆ ಭಿಕ್ಷೆ ಬೇಡಿ ತಿಂದು ಬಸ್ಸು, ರೈಲುನಿಲ್ದಾಣಗಳಲ್ಲಿ ರಾತ್ರಿಗಳನ್ನು ಕಳೆದ ಅದೆಷ್ಟೋ ಮಕ್ಕಳ ಪಾಲಿಗೆ ಹೊಸ ಬದುಕನ್ನ ರೂಪಿಸಿಕೊಡುವ ನೆಲೆಯಾಗಿದ್ದು ನಮ್ಮ ಭೂಮಿ.

ಇಲ್ಲಿ ತರಬೇತಿ ಪಡೆದ ಮಕ್ಕಳು ವಿಶ್ವಸಂಸ್ಥೆಯ ವೇದಿಕೆಗಳಲ್ಲಿ ಮಾತನಾಡಿದ್ದಾರೆಂದರೆ ಸಾಮಾನ್ಯದ ಮಾತೆ? ತಮ್ಮಂತೆ ದೌರ್ಜನ್ಯಕ್ಕೆ ತುತ್ತಾದ ಮಕ್ಕಳ ದನಿಗಳಾಗಿದ್ದಾರೆ. ನಾಗರಾಜ ಕೊಳ್ಕೆರೆ ಎಂಬ ಯುವಕ ಇಂದು ಗುತ್ತಿಗೆದಾರ. ರಾಜ್ಯದ ತುಂಬಾ ಬಿಡುವಿಲ್ಲದೆ ದುಡಿಯುತ್ತಿದ್ದಾನೆ. ತನ್ನಂತಹ ಹಲವಾರು ಕೈಗಳಿಗೆ ಕೆಲಸ ನೀಡುತ್ತಾ ಜಗತ್ತಿನ ನಾನಾ ದೇಶಗಳನ್ನು ಸುತ್ತಿ ತಾನು ಬೆಳೆದು ಬಂದ ದಾರಿಯನ್ನ ಹೇಳಿ ನೂರಾರು ಯುವಕರನ್ನ ಹುರಿದುಂಬಿಸುತ್ತಿದ್ದಾನೆ.

ಬೇಬಿ ಕನ್ಯಾನ, ಯಲ್ಲಪ್ಪ ಮತ್ತಿಹಳ್ಳಿ, ರಮೇಶ ಮತ್ತಿಹಳ್ಳಿ, ಜಗದೀಶ ಸಿದ್ದಾಪುರ, ಪ್ರವೀಣ್, ಗಂಗಾಧರ ಬಳ್ಕೂರು, ಶಿವರಾಮ ಗುಡ್ಡಿಯಂಗಡಿ, ಭಾಸ್ಕರ ಸಾಗರ, ರಮೇಶ ಆಲೂರು, ಮಂಜು ಎಚ್.ಬಿ., ಸೊಲೊಮನ್ ಹುಬ್ಬಳ್ಳಿ, ಸಂತೋಷ ಬೆಳ್ವೆ, ಶಂಕರ ಮೊವಾಡಿ, ಸುನಿಲ್ ಕಾವ್ರಾಡಿ, ಅಶೋಕ ಉಪ್ಪುಂದ– ಮುಂತಾದ ಹಲವಾರು ಯುವಕ ಯುವತಿಯರು ಬೇರೆ ಬೇರೆ ಸಾಮಾಜಿಕ ಹಿನ್ನೆಲೆಯಿಂದ ನಮ್ಮ ಭೂಮಿಗೆ ಬಂದವರು. ಇಂದು ಅವರೆಲ್ಲ ತಮ್ಮ ತಮ್ಮ ಕೆಲಸಗಳಲ್ಲಿ ಪರಿಣತರು ಮತ್ತು ತಮ್ಮ ಜೀವನವನ್ನು ಹೊಸದಾಗಿ ರೂಪಿಸಿಕೊಂಡಿದ್ದಾರೆ.

ದುಡಿಯುವ ಮಕ್ಕಳ ಬೇರುಪ್ರೀತಿ
ತಮ್ಮ ಕಾಲ ಮೇಲೆ ನಿಂತಮೇಲೆ ತಾವು ಹತ್ತಿ ಬಂದ ಏಣಿಯನ್ನು ಒದೆಯುವವರೆ ಹೆಚ್ಚಿರುವ ಇಂದಿನ ಸಮಾಜದಲ್ಲಿ ಈ ದುಡಿಯುವ ಮಕ್ಕಳು ವಿಶಿಷ್ಟವಾಗಿ ನಿಲ್ಲುತ್ತಾರೆ. ಇವರೆಲ್ಲ ವರ್ಷಕ್ಕೊಮ್ಮೆ ಬೆಂಗಳೂರು, ಶಿರಸಿ, ಬಳ್ಳಾರಿ, ದಾವಣಗೆರೆ, ಸಾಗರ, ಶಿವಮೊಗ್ಗ, ಉಡುಪಿ, ಮಂಗಳೂರು ಮುಂತಾದೆಡೆಗಳಿಂದ ಬಂದು ಎರಡು ದಿನಗಳ ಕಾಲ ನಮ್ಮ ಭೂಮಿಯಲ್ಲಿ ಸೇರುತ್ತಾರೆ. ವಿಶೇಷ ಎಂದರೆ ಇಲ್ಲಿ ತರಬೇತಿ ಪಡೆಯುತ್ತಿರುವ ಮತ್ತು ಪಡೆದ ಮಕ್ಕಳು ತಮ್ಮೆಲ್ಲಾ ಕಾರ್ಯಕ್ರಮದ ರೂಪುರೇಷೆಗಳನ್ನು ತಾವೇ ರೂಪಿಸಿಕೊಳ್ಳುತ್ತಾರೆ. ನಮ್ಮ ಭೂಮಿ ಸಂಸ್ಥೆಯ ಹಿರಿಯರು ಮಕ್ಕಳನ್ನು ತರಬೇತುಗೊಳಿಸುವುದರಿಂದ ಹಿಡಿದು ಅವರು ತಮ್ಮ ಹಕ್ಕಿಗಾಗಿ ಹೋರಾಟ ರೂಪಿಸಿಕೊಳ್ಳಲು ಮಾರ್ಗದರ್ಶನ ನೀಡುತ್ತಾರೆ. ಬ್ಯಾಂಕಿಂಗ್, ಕಾನೂನು, ವೈದ್ಯಕೀಯ ವಲಯದ ತಜ್ಞರನ್ನು ಕರೆಯಿಸಿಕೊಂಡು ಸಲಹೆ ಪಡೆಯುತ್ತಾರೆ. ಸಂಜೆಗೆ ಇವರೆಲ್ಲ ಸೇರಿಕೊಂಡು ಯಕ್ಷಗಾನ ಮಾಡುತ್ತಾರೆ.

ನಮ್ಮ ಸಭಾ ಮತ್ತು ಭೀಮ ಸಂಘದ ಮಕ್ಕಳು ಈ ವರ್ಷವೂ ಎರಡು ದಿನಗಳ ಕಾಲ ಸೇರಿದ್ದರು. ಇದೇ ಫೆಬ್ರವರಿ ತಿಂಗಳ ೯ರಂದು ನಮ್ಮ ಭೂಮಿಯ ಅಂಗಸಂಸ್ಥೆ ನಮ್ಮ ನಾಳಂದ ಶಾಲೆಯಲ್ಲಿ ಚೆಂಡೆಮದ್ದಳೆಗಳ ನಿನಾದದಲ್ಲಿ ಕೇಳಿಬಂದಿದ್ದು ಸಮಗ್ರ ಕಂಸ ಎಂಬ ಯಕ್ಷಗಾನ ಪ್ರಸಂಗ. ಯಕ್ಷಗಾನ ಕಲೆಯ ಮೇರು ಗುರು ಬನ್ನಂಜೆ ಸಂಜೀವ ಸುವರ್ಣರ ಪರಮಾಪ್ತ ಶಿಷ್ಯರೂ, ತನ್ನ ಅದ್ಭುತ ಕಂಠಸಿರಿಯಿಂದ ಕೇಳುಗರನ್ನು ಮಂತ್ರಮುಗ್ಧಗೊಳಿಸಬಲ್ಲ ಭಾಗವತರೂ ಆದ ಶ್ರೀ ಎಂ.ಎಚ್. ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರು ಈ ಮಕ್ಕಳ ಯಕ್ಷರಂಗದ ಗುರುಗಳು. ಈ ದುಡಿಯುವ ಮಕ್ಕಳ ಯಕ್ಷಗಾನದ ಹೆಚ್ಚುಗಾರಿಕೆಯೆಂದರೆ ಇಲ್ಲಿ ಪಾತ್ರ ಮಾಡಿದ ಇಪ್ಪತ್ತಾರು ಕಲಾವಿದರಲ್ಲಿ ಇಪ್ಪತ್ತು ಜನ ಹೆಣ್ಣುಮಕ್ಕಳು ಎಂಬುದು.

ನಮ್ಮ ಪುರಾಣದಲ್ಲಿ ಕೃಷ್ಣನೆಂಬ ದೇವರು ರೂಪುಗೊಳ್ಳಲು ಕಾರಣವಾದದ್ದು ಕಂಸನೆಂಬ ಕ್ರೂರ ಪಾತ್ರ. ಬಾಲಕೃಷ್ಣ ತನ್ನ ಲೀಲೆಗಳಲ್ಲಿ ಮುಳುಗೇಳಲು ಕಾರಣವಾದದ್ದು ಕಂಸನಿಗಿದ್ದ ಸಾವಿನ ಭಯ. ತಾನು ಸಾಯುತ್ತೇನೆ ಎಂಬುದು ಅರಿವಾದಾಗ ವ್ಯಕ್ತಿಯೊಬ್ಬ ತನ್ನನ್ನು ರಕ್ಷಿಸಿಕೊಳ್ಳಲು ಮುಂದಾಗುತ್ತಾನೆ. ಹಾಗೆಯೇ ಕಂಸ ಇನ್ನೊಬ್ಬರ ನೋವು ಕಷ್ಟಗಳತ್ತ ಗಮನ ಹರಿಸದೆ ತಾನು ಬದುಕುಳಿಯಲು ಕಡೇ ಗಳಿಗೆಯವರೆಗೂ ಪ್ರಯತ್ನಿಸುತ್ತಾನೆ. ನಮ್ಮೆಲ್ಲರ ಕಣ್ಣುಗಳಲ್ಲಿ ಕ್ರೌರ್ಯದ ಹೆಬ್ಬಂಡೆಯಂತೆ ಕಾಣುವ ಕಂಸನಿಗೂ ಒಂದು ಬಾಲ್ಯವಿತ್ತು.

ಆ ಬಾಲ್ಯ ಹೇಗಿತ್ತು? ಯಾಕಾಗಿ ಇಂತಹ ಕಂಸ ರೂಪುಗೊಂಡ ಎಂದು ಹುಡುಕುತ್ತಾ ಹೋದರೆ ಆ ಬಾಲ ಕಂಸ ತಂದೆ-ತಾಯಿಯರ ನಿರ್ಲಕ್ಷ್ಯಕ್ಕೆ ತುತ್ತಾದವನು. ಅವನಿಗೆ ತಿಳಿಯಹೇಳುವ, ತಿದ್ದುವ ಕೈಗಳು ಕೈಹಿಡಿಯಲಿಲ್ಲ. ಹೀಗೆ ಬೆಳೆದ ಪ್ರತಿಯೊಂದು ಮಗುವೂ ಸಮಾಜಘಾತುಕವಾಗಬಲ್ಲದು ಎಂಬುದಕ್ಕೆ ಕಂಸನಿಗಿಂತ ದೊಡ್ಡ ಉದಾಹರಣೆ ಮತ್ತೊಂದಿಲ್ಲ. ಪುರಾಣದ ದೈವಲೀಲೆ ಕಂಸನನ್ನು ವಧಿಸುತ್ತಾದರೂ, ‘ಆ ಕಂಸತ್ವ’ ಇಂದಿಗೂ ಜೀವಂತವಾಗಿದೆ.

ಈ ಭೂಮಿಯ ಮೇಲೆ ಅತಿಹೆಚ್ಚು ದೌರ್ಜನ್ಯಕ್ಕೆ ತುತ್ತಾಗುವವರು ಮಕ್ಕಳು ಮತ್ತು ಬಡವರು. ಮಕ್ಕಳನ್ನು ತಿದ್ದಿ ಬೆಳೆಸಬೇಕಾದ ಸಮಾಜವೇ ಅವರನ್ನು ತನ್ನ ಬೇಕು ಬೇಡಗಳಿಗೆ ಆಹಾರವಾಗಿಸಿಕೊಂಡಿದೆ. ಮಕ್ಕಳನ್ನು ತಿದ್ದಿಬೆಳೆಸದೆ ಇಂದಿಗೂ ನಮ್ಮ ನಡುವೆ ಕಂಸತ್ವವನ್ನು ಜಾಗೃತವಾಗಿರಿಸಿಕೊಂಡ ಜನರ ನಡುವಿಂದ ಬಂದ ಮಕ್ಕಳಿಗಾಗಿ ಪ್ರಸಾದ್ ಕುಮಾರ್ ಮೊಗೆಬೆಟ್ಟು ಸಮಗ್ರ ಕಂಸ ಪ್ರಸಂಗವನ್ನು ಪ್ರಸ್ತುತಪಡಿಸಿ ಗಂಡು ಕಲೆ ಎಂದು ಹೆಮ್ಮೆಪಟ್ಟುಕೊಳ್ಳುತ್ತಿದ್ದ ಯಕ್ಷಗಾನಕ್ಕೆ ಹೆಣ್ತನದ ಸಿರಿಯನ್ನು ಈ ಮಕ್ಕಳ ಮೂಲಕ ದೊರಕಿಸಿಕೊಟ್ಟರು.

ಜಾತಿ ಯಾವುದಯ್ಯ...
ಯಕ್ಷಗಾನದಂತಹ ಜಾನಪದ ಕಲೆಯೂ ಭಾರತದ ಜಾತಿವ್ಯವಸ್ಥೆಯನ್ನು ತನ್ನೊಳಗೆ ಮತ್ತು ತನ್ನೊಡನೆಯೇ ಉಳಿಸಿಕೊಂಡು ಬಂದಂತದ್ದು. ಸಂಜೀವ ಸುವರ್ಣರಂತಹ ಮೇರು ಕಲಾವಿದರೂ ಜಾತಿಯ ಕ್ರೌರ್ಯಕ್ಕೆ ತುತ್ತಾಗಿದ್ದರೂ ಇಂದು ಅವರು ಆ ಕಲೆಯಲ್ಲಿ ಸಾಧಿಸಿದ್ದು ಅಪಾರ. ವೃತ್ತಿನಿರತ ಮೇಳಗಳಲ್ಲಿ ಇಂದಿಗೂ ಕೆಳಜಾತಿಯವರಿಗೆ ಯಕ್ಷಗಾನ ಮಾಡುವ ಅವಕಾಶ ಲಭಿಸಿಲ್ಲ. ಆದರೆ ಗುರು ಸಂಜೀವ ಸುವರ್ಣರು ತಮ್ಮ ಶಿಷ್ಯ ಪ್ರಸಾದ ಕುಮಾರ್ ಅವರೊಂದಿಗೆ ಕೂಡಿಕೊಂಡು ನಮ್ಮ ಭೂಮಿಗೆ ಬಂದು ಜಾತಿಯ ಕಟ್ಟಳೆಗಳನ್ನು ಮೀರಿ ಮಕ್ಕಳಿಗೆ ಯಕ್ಷಗಾನದ ಕುಣಿತಗಳನ್ನು ಹೇಳಿಕೊಟ್ಟರು. ಅವರಿಗೆ ವೇಷ ಹಾಕಿಸಿ ರಂಗಸ್ಥಳದಲ್ಲಿ ಕುಣಿಸಿದರು.

ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರ ಕಂಠಸಿರಿಯೊಂದಿಗೆ ರಂಗದಲ್ಲಿ ಅರಳಿಕೊಂಡ ‘ಸಮಗ್ರ ಕಂಸ’ ಸತತ ಮೂರು ಗಂಟೆಗಳ ಕಾಲ ಪ್ರೇಕ್ಷಕರನ್ನು ಯಕ್ಷಲೋಕಕ್ಕೆ ಕರೆದೊಯ್ಯಿತು. ಕೃಷ್ಣ ಪಾತ್ರಧಾರಿ ಸುಕನ್ಯ ಶಂಕರನಾರಾಯಣ ತನ್ನ ಅದ್ಭುತ ಹೆಜ್ಜೆಗಾರಿಕೆ ಅಭಿನಯದಿಂದ ಕಣ್ಮನ ಸೆಳೆದರೆ, ಪುಂಡುವೇಷ ಬಾಲಕಂಸನಾಗಿ ಶರತ್ ಮೊವಾಡಿ, ನಮ್ಮ ಭೂಮಿಯ ಹಿರಿಯ ಕಲಾವಿದ ಮಕ್ಕಳೊಳಗೆ ಮಕ್ಕಳಾಗಿ ಬೆರೆಯುವ ನಾಗರಾಜ ಶೆಟ್ಟಿ ಸಬ್ಲಾಡಿ ಎರಡನೇ ಕಂಸನಾಗಿ ಚಪ್ಪಾಳೆ ಗಿಟ್ಟಿಸುತ್ತಾರೆ.

ಪ್ರಬುದ್ಧ ಕಂಸನಾಗಿ ಪ್ರಬುದ್ಧ ಕಲಾವಿದ ಜಗನ್ನಾಥ ಗಾಣಿಗ ಗುಬ್ಕೋಣ್ ತನ್ನ ಅಭಿನಯದಿಂದ ರಂಗಸ್ಥಳ ತುಂಬಿ ನಿಲ್ಲುತ್ತಾರೆ. ಉಗ್ರಸೇನ (ಸುಮಲತಾ ಇಡೂರು), ರುಚಿಮತಿ (ಸುಪ್ರೀತ ನಾಡಗುಡ್ಡೆಯಂಗಡಿ), ಮಾಗಧ (ಬೇಬಿ ಕನ್ಯಾನ), ಅಕ್ರೂರ (ಮನುತಾ ಕೆ. ಹೊಸನಗರ), ಬಲರಾಮ (ಕಲಾವತಿ ಮಾರಣಕಟ್ಟೆ), ವಸುದೇವ (ಶಾಂತಿ ಗುಡ್ಡಿಯಂಗಡಿ), ದೇವಕಿ (ಕಾವ್ಯ ನಾಗೂರು), ದ್ರುಮಿಳ ಗಂಧರ್ವ (ಸುನಿಲ್ ಕಾವ್ರಾಡಿ), ಅಗಸ (ಕಿರಣ ಹಾನಗಲ್ಲ), ಆಸ್ತಿ (ಮಮತಶ್ರೀ ಆಲೂರು), ಪ್ರಾಸ್ತಿ (ಪ್ರಿಯ ಹೊಸೂರು) ಮುಷ್ಠಿಕ (ನಾಗಶ್ರೀ ಕಟ್ಬ್ಯಾಲ್ತೂರು), ನಾರದ (ಜ್ಯೋತಿ ಕೆರಾಡಿ), ಚಾಣೂರ (ಶೋಭಾ ಶೇಡಿಮನೆ), ದೂತ (ದಿವ್ಯ ಕೋಟ) ಒಬ್ಬೊಬ್ಬರ ಅಭಿನಯವೂ ಮನಮುಟ್ಟುವಂತದ್ದು.

ಬಾಲಗೋಪಾಲರಾಗಿ (ಕುಮಾರಿ ಮಂಜು ಹೊಸಮಠ), (ಮಂಜುಳ ಎಂ. ಮಣಿಪಾಲ), ಪೀಠಿಕೆ ಸ್ತ್ರೀಯರಾಗಿ (ಪ್ರೇಮಾ ಕರ್ಕಿ), (ಸರೋಜ ಮುಂಡಗೋಡು), ಸಖಿಯಾಗಿ (ರೇಣಾವತಿ ಮುದೂರು) ಮುಂತಾದವರು ಚಿಕ್ಕ ಚಿಕ್ಕ ಪಾತ್ರಗಳಲ್ಲಿಯೂ ಗಮನ ಸೆಳೆಯುತ್ತಾರೆ. ಹಿಮ್ಮೇಳದಲ್ಲಿ ಮದ್ದಳೆ: ದೇವದಾಸ ರಾವ್ ಕೂಡ್ಲಿ, ಚಂಡೆ: ರವಿರಾಜ್ ಕೋಟೇಶ್ವರ, ಶೃತಿ: ಕುಮಾರಿ ಸುಜಯ ಎಂ. ಹಳ್ಳಿಹೊಳೆ, ತೆರೆ: ಮಾಲತಿ ಕೊಡ್ಲಾಡಿ ಮತ್ತು ಗಾಯತ್ರಿ ಉಪ್ಪುಂದ.

ಸಮಾಜಸೇವೆಗೂ ಸೈ!
ನಮ್ಮ ಸಭಾದ ಸದಸ್ಯರು ಸಮಾಜ ಸೇವೆಗೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸುನಾಮಿಯಾದಾಗ ಪರಿಹಾರ ಕಾರ್ಯಕ್ಕಾಗಿ ಹದಿನೈದು ಜನರ ಸ್ವಯಂಸೇವಕರ ತಂಡ ಅಂಡಮಾನ್ಗೆ ತೆರಳಿತ್ತು. ಈ ಬಾರಿ ನಮ್ಮ ಭೂಮಿಯಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಿ ಎಲ್ಲಾ ಸದಸ್ಯರು ರಕ್ತದ ದೇಣಿಗೆ ನೀಡಿದ್ದಾರೆ. ‘ನಮ್ಮ ಭೂಮಿ’ಯ ಮಾತೃ ಸಂಸ್ಥೆ ಸಿ.ಡಬ್ಲ್ಯೂ.ಸಿ. ಈ ಬಾರಿಯ ನೊಬೆಲ್ ಶಾಂತಿ ಪುರಸ್ಕಾರಕ್ಕೂ ನಾಮನಿರ್ದೇಶನಗೊಂಡಿರುವುದು ಅಲ್ಲಿನ ಮಕ್ಕಳನ್ನು ಪುಳಕಗೊಳಿಸಿದೆ. ನಾರ್ವೆ ದೇಶದ ಸಂಸದರು ಈ ಸಂಸ್ಥೆಯ ಹೆಸರು ಸೂಚಿಸಿದ್ದರು ಎಂಬುದನ್ನು ಗಮನಿಸಬೇಕಾದ್ದು.

ಈ ‘ನಮ್ಮ ಭೂಮಿ’ ಇರುವುದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕನ್ಯಾನ ಗ್ರಾಮದಲ್ಲಿ. ಜಾಗತೀಕರಣದ ಜೂಜಿಗೆ ಬಿದ್ದು ನಾವು ಕಳೆದುಕೊಂಡ ಹಳ್ಳಿಯನ್ನು ಮತ್ತೆ ಕಾಣುವ ಹಂಬಲವಿದ್ದವರು ಇಲ್ಲಿಗೆ ಭೇಟಿ ನೀಡಬಹುದು. ಅಪೂರ್ವ ವಾಸ್ತುಶಿಲ್ಪದ ಹಳ್ಳಿಮನೆಗಳು, ಖಾದಿಯ ಬಟ್ಟೆಗಳು, ಬಿದಿರು, ಮಣ್ಣಿನ ಸಾಮಾನುಗಳು ಇಲ್ಲಿ ಈಗಲೂ ದೊರೆಯುತ್ತವೆ. ಇಪ್ಪತ್ತು ವರ್ಷಗಳ ಕೆಳಗೆ ಬೋಳುಗುಡ್ಡವಾಗಿದ್ದ ಈ ಜಾಗದಲ್ಲಿ ಇಂದು ಕಾಡನ್ನು ಬೆಳೆಸಿದ್ದಾರೆ ಮಕ್ಕಳು ಮತ್ತು ಮಹಾಬಲ ಜೋಷಿ, ರಾಮಜ್ಜ. ಇದಕ್ಕಿಂತಲೂ ವಿಶೇಷ ಇಲ್ಲಿನ ಮಕ್ಕಳು.

ದೂರದ ಊರುಗಳಲ್ಲಿದ್ದ ಸಂಬಂಧಿಕರು ಮನೆಗೆ ಬಂದಾಗ ಸಂಭ್ರಮಿಸುವ ಮನೆಮಕ್ಕಳಂತೆ ಅಕ್ಕಾ... ಅಣ್ಣಾ... ಎನ್ನುತ್ತಾ ನಮ್ಮ ಭೂಮಿಯನ್ನೆಲ್ಲಾ ತೋರಿಸುತ್ತಾರೆ. ಭಾರತೀಯರು ಎಂದು ಹೇಳಿಕೊಳ್ಳಲು ಒಂದು ಸಣ್ಣ ಗುರುತೂ ಇಲ್ಲದ ಪುಟ್ಟ ಮಕ್ಕಳಿಗೆ ನಂದನಕ್ಕ (ನಂದನಾ ರೆಡ್ಡಿ), ದಾಮಣ್ಣ, ಗಣಪತಿಯಣ್ಣ, ಶಿವಾನಂದ ಇಂಜಿನಿಯರ್, ಕವಿತಕ್ಕ, ಶಿವಮೂರ್ತಿಯಣ್ಣ, ನಾಗರಾಜಣ್ಣ, ಪ್ರಭು ಮೇಸ್ಟ್ರು, ವೆಂಕಟೇಶಣ್ಣ, ಉಮೇಶಣ್ಣ, ಜಿ. ಮಂಜಣ್ಣ, ಬಂಡಾರಿ ಮಾಮ, ಶಿವಲಿಂಗಣ್ಣ, ತೀರ್ಥಹಳ್ಳಿ ಮಂಜಣ್ಣ, ಪದ್ದಕ್ಕ, ಶಾರದಕ್ಕ, ರತ್ನಮ್ಮ, ಚಂದಮ್ಮನಂತಾ ಮಮತಾಮಯಿ ಮಾತೆಯರಿದ್ದಾರೆ.

ನಮ್ಮ ಸಭಾದವರು ತಮ್ಮ ಉದ್ಯೋಗದ ಯಶಸ್ಸನ್ನು ಇಲ್ಲಿರುವ ಮಕ್ಕಳೊಂದಿಗೆ ಆಚರಿಸಿಕೊಳ್ಳುತ್ತಾರೆ. ನಮ್ಮ ಸಮಾಜವೇ ಸೃಷ್ಠಿಸಿದ ನೋವಿನ ಮುದ್ದೆಗಳಾದ ಈ ಮುಗ್ಧ ಮಕ್ಕಳೊಂದಿಗೆ ನೀವು ನಿಮ್ಮ ಹುಟ್ಟುಹಬ್ಬ ಮುಂತಾದವುಗಳನ್ನು ಆಚರಿಸಿಕೊಂಡು ಅವರೊಂದಿಗೆ ಒಂದು ದಿನವಿದ್ದು ಬನ್ನಿ; ಬದುಕುವ ಕ್ರಮ, ಚಿಂತನೆಗಳೇ ಬದಲಾಗಬಹುದು. ಉಳಿಯುವುದಕ್ಕೂ ಅಲ್ಲಿ ವ್ಯವಸ್ಥೆ ಇದೆ. ನಮ್ಮ ಭೂಮಿ ಸಂಪರ್ಕ ಸಂಖ್ಯೆ: ೦೮೨೫೪–೨೬೪೨೧೦

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.