ಗುರುವಾರ , ಜನವರಿ 23, 2020
21 °C
ಸಂತೋಷ ಹೆಗ್ಡೆ, ಕೋ.ಚೆನ್ನಬಸಪ್ಪ, ವಿಜ್ಞಾನಿ ಶಿವಕುಮಾರ್‌

‘ನಾಡೋಜ’ ಗೌರವಕ್ಕೆ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ನಿವೃತ್ತ ನ್ಯಾಯ ಮೂರ್ತಿ, ಮಾಜಿ ಲೋಕಾ ಯುಕ್ತ ಎನ್‌. ಸಂತೋಷ ಹೆಗ್ಡೆ, ನಿವೃತ್ತ ನ್ಯಾಯಾಧೀಶ, ಸಾಹಿತಿ ಕೋ.ಚೆನ್ನಬಸಪ್ಪ ಹಾಗೂಬೆಂಗಳೂರಿನ ಇಸ್ರೊ ಕೇಂದ್ರದ ನಿರ್ದೇಶಕ ಎಸ್‌.ಕೆ.ಶಿವಕುಮಾರ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಕ್ತ ಸಾಲಿನ ‘ನಾಡೋಜ’ ಗೌರವಕ್ಕೆ ಆಯ್ಕೆ ಯಾಗಿದ್ದಾರೆ.ಇದೇ 21ರಂದು ನಡೆಯುವ ವಿಶ್ವವಿದ್ಯಾಲಯದ ‘ನುಡಿಹಬ್ಬ’ ಕಾರ್ಯ ಕ್ರಮ ದಲ್ಲಿ ಈ ಮೂವರು ಗಣ್ಯರಿಗೆ ‘ನಾಡೋಜ’ ಗೌರವ ಪದವಿ ಪ್ರದಾನ ಮಾಡ­ಲಾಗು­ವುದು ಎಂದು ಮಂಗಳ ವಾರ ಸುದ್ದಿಗೋಷ್ಠಿಯಲ್ಲಿ ವಿ.ವಿ. ಕುಲಪತಿ ಡಾ.ಹಿ.ಚಿ.­ಬೋರ­ಲಿಂಗಯ್ಯ ತಿಳಿಸಿದರು.ರಾಜ್ಯಪಾಲ ಎಚ್‌.ಆರ್‌.ಭಾರ ದ್ವಾಜ್, ಉನ್ನತ ಶಿಕ್ಷಣ ಸಚಿವ ಆರ್‌.ವಿ. ದೇಶ­ಪಾಂಡೆ ಪಾಲ್ಗೊಳ್ಳುವರು. ಹಿರಿಯ ಪತ್ರಕರ್ತ ನಾಗೇಶ ಹೆಗಡೆ  ‘ನುಡಿಹಬ್ಬ’ದ ಭಾಷಣ ಮಾಡು ವರು ಎಂದು ಹೇಳಿದರು.‘ಪ್ರಸಕ್ತ ಸಾಲಿನಲ್ಲಿ ‘ನಾಡೋಜ’ ಗೌರವವನ್ನು ಮೂವರಿಗೆ ಸೀಮಿತ ಗೊಳಿಸಲಾ­ಗಿದೆ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)