ಮಳವಳ್ಳಿ: ಎರಡು ಬಾರಿ ಪ್ರಧಾನಮಂತ್ರಿ ಹುದ್ದೆ ತ್ಯಾಗ ಮಾಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬಗ್ಗೆ ಪ್ರಚಾರ ದೊರೆಯುತ್ತಿಲ್ಲ. ಆದರೆ, ನರಮೇಧ ಮಾಡಿದ್ದ ನರೇಂದ್ರಮೋದಿಯನ್ನು ದೇಶದ ಮಹಾನ್ ನಾಯಕನಂತೆ ಬಿಂಬಿಸಲಾಗುತ್ತಿದೆ ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಟೀಕಿಸಿದರು.

ತಾಲ್ಲೂಕಿನ ಕಿರುಗಾವಲಿನಲ್ಲಿ ಶನಿವಾರ ಲೋಕಸಭೆ ಚುನಾವಣೆ ಪೂರ್ವಭಾವಿಯಾಗಿ ನಡೆದ ಹೋಬಳಿ ಮಟ್ಟದ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಸೇರಿದಂತೆ ಹಲವು ಯೋಜನೆಗಳ ಮೂಲಕ ಕೂಲಿಕಾರರಿಗೆ ಕೆಲಸ ಹಾಗೂ ಗ್ರಾಮೀಣಾ ಭಿವೃದ್ದಿಗೆ ನೆರವು ನೀಡಿರುವುದು ಕಾಂಗ್ರೆಸ್ ನೇತೃತ್ವದ ಸರ್ಕಾರವಾಗಿದೆ ಎಂದು ತಿಳಿಸಿದರು.

ನರೇಂದ್ರಮೋದಿ ಅವರನ್ನು ನಮೋ ಎಂದು ಉಲ್ಲೇಖಿಸಿ ಕರೆಯುತ್ತಿದ್ದು ನಮೋ ಎನ್ನುವ ಬದಲು ‘ನಮೇ’ (ನರಮೇಧ) ಎಂದು ಕರೆಯಬೇಕಿದೆ. ಆರ್ಎಸ್ಎಸ್ ಮುಷ್ಠಿಯಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾದರೆ ಗುಲಾಮಗಿರಿಗೆ ತಲೆಹೊಡ್ಡಿದಂತೆ ಎಂದರು. ನಂತರ ಹಿಟ್ಟನಹಳ್ಳಿಕೊಪ್ಪಲು ಗ್ರಾಮದಿಂದ ದೇವಿಪುರ ಮಾರ್ಗವಾಗಿ ತಳಗವಾದಿವರಗೆ ಪಾದಯಾತ್ರೆ ನಡೆಸಿದರು.

ಕೆಪಿಸಿಸಿ ಸದಸ್ಯ ಶಿವಣ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಸವರಾಜು, ಸದಸ್ಯ ಚಿಕ್ಕಲಿಂಗಯ್ಯ,ಮಾಜಿ ಅಧ್ಯಕ್ಷ ಚೌಡಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪುಟ್ಟರಾಮು, ದೇವರಾಜು, ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜು, ಪರಿಶಿಷ್ಟ ವರ್ಗದ ಅಧ್ಯಕ್ಷ ಶಾಂತರಾಜು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಘು, ಡಿಸಿಸಿ ಬ್ಯಾಂಕ್ ನಿರ್ದೇಶಕ ನರೇಂದ್ರ, ಮುಖಂಡರಾದ ಮಾದೇಗೌಡ, ಕರಿಯಪ್ಪ, ಸುಹಾಸ್ಮಹದೇವಯ್ಯ, ಸುರೇಶ್, ಜಯಣ್ಣ, ಮಹದೇವಪ್ಪ, ಬಾಬು, ರಿಯಾಜ್, ಅಬ್ಬಾಸ್, ಓಂಪ್ರಕಾಶ್ ಸೇರಿದಂತೆ ಕಿರುಗಾವಲು ಹೋಬಳಿಯ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.