ಶನಿವಾರ, ಜೂನ್ 19, 2021
23 °C

‘ಬಟ್ಟೆ ಹರಿದುಕೊಂಡವನು ನಾನಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಾ: ವಿಧಾನಸೌದದಲ್ಲಿ ಬಟ್ಟೆ ಹರಿದುಕೊಂಡರು ಎಂದೇ ಬಿಂಬಿಸಲಾಗುತ್ತಿದೆ. ಆದರೆ ಅದರ ಹಿಂದಿನ ಸತ್ಯವೇ ಬೇರೆ. ನನ್ನ ಬಟ್ಟೆ ಹರಿದವರು ಮಾರ್ಷಲ್‌ಗಳು ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಗೂಳಿಹಟ್ಟಿ ಶೇಖರ್‌ ತಿಳಿಸಿದರು.

ನಗರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನನಗಾದ ಅನ್ಯಾಯ ಪ್ರತಿಭಟಿಸಿ ವಿಧಾನಸಭೆಯಲ್ಲಿ ಬೆಂಚ್‌ ಮೇಲೆ ನಿಂತಿದ್ದೇ ತಪ್ಪಾಯಿತು ಎಂದು ಬೇಸರ ವ್ಯಕ್ತಪಡಿಸಿದರು.ನಾನು ಮೂಲತಃ ದೇವೇಗೌಡರ ಗರಡಿಯಲ್ಲೇ ಪಳಗಿದವ ಎಂದ ಅವರು, ಐದು ವರ್ಷಕ್ಕೆ ಐದು ಪ್ರಶ್ನೆ ಕೇಳಿದ್ದೇ ಸಂಸದ ಜನಾರ್ದನಸ್ವಾಮಿ ಅವರ ಸಾಧನೆ ಎಂದು ವ್ಯಂಗ್ಯವಾಡಿದರು.ಮೇಲ್‌ ಮಾಡಿ... ಸ್ವಾಮಿ!

ಶಿರಾ
: ಸಮಸ್ಯೆ ಹೊತ್ತು ಸಂಸದ ಜನಾರ್ದನ ಸ್ವಾಮಿ ಬಳಿ ತೆರಳಿದರೆ ಮೇಲ್‌ ಮಾಡಿ ಚೆಕ್‌ ಮಾಡುವೆ ಎನ್ನುತ್ತಿದ್ದರು.

ಈಗ ಮತದಾರರು ನಿಮ್ಮ ಸಾಧನೆ ಮೇಲ್‌ ಮಾಡಿ. ಚೆಕ್‌ ಮಾಡಿ ಮತ ಹಾಕುತ್ತೇವೆ ಎಂದು ಹೇಳಿ... ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಕಾರ್ಯದರ್ಶಿ ಗೋವಿಂದರಾಜು ಮತದಾರರಿಗೆ ಮನವಿ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.