ಮಂಗಳವಾರ, ಜನವರಿ 21, 2020
19 °C

‘ಬಾಲ್ಯದಲ್ಲೇ ಭಾಷಾಭಿಮಾನ ಬೆಳೆಯಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರಟಗಿ: ಕನ್ನಡಭಾಷೆ, ನೆಲ, ಜಲ ಮೊದಲಾದ ವಿಷಯಗಳ ಅಭಿಮಾನ ಬಾಲ್ಯದಲ್ಲಿಯೇ ಬೆಳೆಯಬೇಕು. ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ಸೇರಿಸುವುದರಿಂದ ಭಾಷಾಭಿಮಾನ ಬೆಳೆಯುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ವೀರೇಶ್ ಸಾಲೋಣಿ ಹೇಳಿದರು.

ಜಾಗೃತ ಯುವಕ ಸಂಘ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ‘ಕನ್ನಡ ನುಡಿಹಬ್ಬ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜಿ.ಪಂ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಅಮರೇಶ್ ಕುಳಗಿ ಮಾತನಾಡಿ, ಕನ್ನಡ ಭಾಷೆಯ ಅಭಿಮಾನ ಮೂಡಿಸುವ ಕಾರ್ಯ ದಲ್ಲಿ ಸದಾಕಾಲ ನಡೆಯಲಿ ಎಂದರು.ಜಿ.ಪಂ ಸದಸ್ಯೆ ಜ್ಯೋತಿ ಬಿಲ್ಗಾರ್, ತಾ.ಪಂ ಸದಸ್ಯ ಹಿರೇಬಸಪ್ಪ ಸಜ್ಜನ್, ಸಂಘದ ಗೌರವಾಧ್ಯಕ್ಷ ಪ್ರಹ್ಲಾದ ಜೋಷಿ, ಶರಣಪ್ಪ ಕೋಟ್ಯಾಳ ಮಾತನಾಡಿದರು.ಗ್ರಾ.ಪಂ ಅಧ್ಯಕ್ಷ ಬಿ. ಶರಣಯ್ಯಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಶಿವರೆಡ್ಡಿ ನಾಯಕ, ತಾ.ಪಂ ಸದಸ್ಯೆ ಗಂಗಮ್ಮ, ಸಂಘದ ಅಧ್ಯಕ್ಷ ಎಂ.ಸಂದೀಪಗೌಡ ಇದ್ದರು. ರಾಮು ನಾಯಕ, ಶರಣಪ್ಪ ಕೋಟ್ಯಾಳ ನಿರೂಪಿಸಿದರು.

ಪ್ರತಿಕ್ರಿಯಿಸಿ (+)