ಸೋಮವಾರ, ಮಾರ್ಚ್ 1, 2021
24 °C
ಉದ್ಯಾನ ನಗರಿಯಲ್ಲಿ ಚುಟುಕು ಕ್ರಿಕೆಟ್‌ ಕಲರವ: ಭಾನುವಾರ ಮೊದಲ ಪಂದ್ಯ

‘ಬೆಂಗಳೂರಿನಲ್ಲಿ ಆಡಲು ಕಾತರವಾಗಿದ್ದೇವೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಬೆಂಗಳೂರಿನಲ್ಲಿ ಆಡಲು ಕಾತರವಾಗಿದ್ದೇವೆ’

ಬೆಂಗಳೂರು: ಉದ್ಯಾನ ನಗರದಲ್ಲಿ ಈಗ ಐಪಿಎಲ್‌ ಕಲರವ. ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ (ಯುಎಇ) ನಡೆದ ಟೂರ್ನಿಯ ಮೊದಲ ಹಂತದ ಆಟ ಮುಗಿಸಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಆಟಗಾರರು ನಗರಕ್ಕೆ ಮರಳಿದ್ದಾರೆ. ಕೆಲವರು ಅಭ್ಯಾಸದಲ್ಲಿ ಪಾಲ್ಗೊಂಡರೆ, ಇನ್ನು ಕೆಲವರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ.ಏಳನೇ ಆವೃತ್ತಿಯಲ್ಲಿ ಉತ್ತಮ ಆರಂಭ ಪಡೆದಿದ್ದ ಆರ್‌ಸಿಬಿ ನಂತರ ಸತತ ಮೂರು ಪಂದ್ಯಗಳಲ್ಲಿ ಸೋಲು  ಕಂಡಿದೆ. ಆದರೆ ಮುಂದಿನ ಪಂದ್ಯ ‘ತವರಿನ’ನಲ್ಲಿ ನಡೆಯುತ್ತಿರುವುದರಿಂದ ಆಟಗಾರರು ಉತ್ಸುಕರಾಗಿದ್ದಾರೆ. ಅದು ತಂಡದ ಕೋಚ್‌ ಡೇನಿಯಲ್‌ ವೆಟೋರಿ ಅವರ ಮಾತಿನಲ್ಲಿಯೇ ಗೊತ್ತಾಗುತ್ತದೆ. ಈ ತಂಡ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಎದುರು ಆಡಲಿದೆ.

‘ನಾವೀಗ ಬೆಂಗಳೂರಿನಲ್ಲಿ ಆಡಲು ಕಾತರ ದಿಂದ ಎದುರು ನೋಡುತ್ತಿದ್ದೇವೆ. ಹಿಂದಿನ ಟೂರ್ನಿಗಳಲ್ಲಿ ಇಲ್ಲಿ ನಾವು ಗಮನಾರ್ಹ ಪ್ರದರ್ಶನ ನೀಡಿದ್ದೇವೆ. ಅದನ್ನು ಮುಂದುವರಿಸಿ ಕೊಂಡು ಹೋಗುವ ಭರವಸೆ ಇದೆ’ ಎಂದು ಅವರು ಗುರುವಾರ ನುಡಿದರು.ಗಾಯಗೊಂಡ ನಿಕ್‌ ಮ್ಯಾಡಿನ್‌ಸನ್‌ ಬದಲಿಗೆ ತಂಡ ಸೇರಿಕೊಂಡಿರುವ ರಿಲೀ ರೊಸೋವ್‌ ಅವರಿಗೆ ವೆಟೋರಿ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ ಅಂಗಳದಲ್ಲಿ ಮಾರ್ಗದರ್ಶನ ನೀಡಿದರು. ವಿರಾಟ್‌ ಕೊಹ್ಲಿ ಸಾರರ್ಥ್ಯದ ರಾಯಲ್‌ ಚಾಲೆಂ ಜರ್ಸ್‌ ಆಡಿರುವ ಐದು ಪಂದ್ಯಗಳಿಂದ ನಾಲ್ಕು ಪಾಯಿಂಟ್‌ಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

‘ನಾವು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉತ್ತಮ ದಾಖಲೆ ಹೊಂದಿದ್ದೇವೆ. ಹಾಗಾಗಿ ಇದೇ ಭರವಸೆಯಲ್ಲಿ ನಾವಿದ್ದೇವೆ. ಬೌಲಿಂಗ್‌ ಹಾಗೂ ಫೀಲ್ಡಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದೇವೆ. ಆದರೆ ಬ್ಯಾಟಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಬೇಕಾಗಿದೆ’ ಎಂದು ಹೇಳಿದ್ದಾರೆ.‘ಮೊದಲ ಪಂದ್ಯದಲ್ಲಿ ಗೆಲ್ಲಲು ಯುವರಾಜ್‌ ಆಟ ಕಾರಣ. ಅವರ ಬಗ್ಗೆ ನಮಗೆ ಭರವಸೆ ಇದೆ. ಮುಂಬೈ ಇಂಡಿಯನ್ಸ್‌ ಎದುರು ಗೆಲ್ಲಲು ಕಾರಣ ಎಬಿ ಡಿವಿಲಿಯರ್ಸ್‌. ಅವರು ಪಂದ್ಯ ಗೆದ್ದು ಕೊಡ ಬಲ್ಲ ಆಟಗಾರ. ನಾಯಕ ವಿರಾಟ್‌ ತಮ್ಮ ಜವಾಬ್ದಾರಿ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಒಂದು ಪಂದ್ಯ ಆಡಿರುವ ಕ್ರಿಸ್‌ ಗೇಲ್‌ ಯಾವ ರೀತಿ ಆಟಗಾರ ಎಂಬುದು ಎಲ್ಲರಿಗೂ ಗೊತ್ತಿದೆ. ಬೌಲಿಂಗ್‌ನಲ್ಲಿ ಎಲ್ಲರೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ’ ಎಂದು ವೆಟೋರಿ ವಿವರಿಸಿದ್ದಾರೆ.

ಪುಟಿದೇಳುತ್ತೇವೆ: ಯುವಿ

ಬೆಂಗಳೂರು (ಪಿಟಿಐ): ‘ಯುಎಇ ಹಂತದ ಟೂರ್ನಿಯಲ್ಲಿ ಕೆಲ ತಂಡಗಳು ನೀರಸ ಪ್ರದರ್ಶನ ತೋರಿರಬಹುದು. ಆದರೆ ಭಾರತದ ನೆಲದಲ್ಲಿ ಪುಟಿದೇಳಲು ಎಲ್ಲಾ ತಂಡಗಳಿಗೆ ಅವಕಾಶವಿದೆ. ನಮ್ಮ ತಂಡ ಕೂಡ ಉತ್ತಮ ಪ್ರದರ್ಶನ ತೋರಲಿದೆ’ ಎಂದು ರಾಯಲ್‌ ಚಾಲೆಂಜರ್ಸ್‌ ಆಟಗಾರ ಯುವರಾಜ್‌ ಸಿಂಗ್‌ ನುಡಿದಿದ್ದಾರೆ. ‘ಸತತ ಮೂರು ಪಂದ್ಯ ಸೋತಿರುವುದು ನಿರಾಸೆ ಮೂಡಿಸಿದೆ. ಆದರೆ ತವರಿನ ಅಭಿಮಾನಿಗಳ ಎದುರು ತಿರುಗೇಟು ನೀಡುವ ವಿಶ್ವಾಸಲ್ಲಿ ನಾವಿದ್ದೇವೆ. ಎರಡು ದಿನಗಳ ಬಿಡುವು ಲಭಿಸಿದ್ದರಿಂದ ಮನಸ್ಸಿಗೆ ವಿಶ್ರಾಂತಿ ಲಭಿಸಿದೆ’ ಎಂದು ಆರ್‌ಸಿಬಿ ವೆಬ್‌ಸೈಟ್‌ನಲ್ಲಿ ಬರೆದಿರುವ ಲೇಖನದಲ್ಲಿ ಅವರು ತಿಳಿಸಿದ್ದಾರೆ.

ಟಿಕೆಟ್‌... ಟೆಕೆಟ್‌... ಟಿಕೆಟ್‌...

ಟಿಕೆಟ್‌ ಮಾರಾಟ ನಿಧಾನವಾಗಿ ಕಾವು ಪಡೆದುಕೊಳ್ಳುತ್ತಿದೆ. ‘ಜಿ’ ಸ್ಟ್ಯಾಂಡ್‌ಗೆ ₨ 550. ‘ಎ’ ಸ್ಟ್ಯಾಂಡ್‌ಗೆ ₨ 1750. ಇನ್ನುಳಿದ ಸ್ಟ್ಯಾಂಡ್‌ ಗಳಿಗೆ ಪ್ರತ್ಯೇಕ ದರ ನಿಗದಿಪಡಿಸಲಾಗಿದೆ. ಪೆವಿಲಿಯನ್‌ನಲ್ಲಿ ಕುಳಿತು ವೀಕ್ಷಿಸಲು ₨ 33 ಸಾವಿರ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.