ಶುಕ್ರವಾರ, ಫೆಬ್ರವರಿ 26, 2021
22 °C

‘ಭಕ್ತಿಮಾರ್ಗದಲ್ಲಿ ನಡೆದರೆ ದೈವತ್ವ ಪ್ರಾಪ್ತಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಭಕ್ತಿಮಾರ್ಗದಲ್ಲಿ ನಡೆದರೆ ದೈವತ್ವ ಪ್ರಾಪ್ತಿ’

ಹುಕ್ಕೇರಿ: ‘ಸದ್ಭಾವನೆ, ಸನ್ಮಾರ್ಗ, ಸರಳ ತೆಯ ಭಕ್ತಿಮಾರ್ಗದಲ್ಲಿ ನಡೆದರೆ ದೈವತ್ವ ಪ್ರಾಪ್ತವಾಗುತ್ತದೆ’ ಎಂದು ಸಾವಳಗಿ ಸಿದ್ದ ಸಂಸ್ಥಾನ ಪೀಠದ   ಶಿವಲಿಂಗೇಶ್ವರ ಕುಮಾರೇಂದ್ರ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಬಡಕುಂದ್ರಿಯಲ್ಲಿ ಈಚೆಗೆ ನಡೆದ  ರಾಮಾರೂಢ ಮಹಾಂತ ಯಲ್ಲಾರೂಢ ಸ್ವಾಮಿ 'ಚೈತನ್ಯ' ಆಶ್ರಮದ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಭಾರತೀಯರು ಧರ್ಮ, ನೀತಿ, ಸಂಸ್ಕೃತಿ, ನಂಬಿಕೆಯ ತಳಹದಿಯ ಮೇಲೆ ಬದುಕಿದವರು.  ಸಮಾಜದ ಏಳಿಗೆಗೆ ಮನುಷ್ಯನ ನಿಸ್ವಾರ್ಥ ಸೇವೆ ಪರಮ ಶ್ರೇಷ್ಠವಾದದ್ದು ಎಂದ ಅವರು ಪರರ ಸಂಪತ್ತು, ಯಶಸ್ಸು ಕಂಡು ಅಸೂಯೆ ಪಡದೆ, ವಿಶಾಲ ಮನೋಭಾವನೆಯಿಂದ ಧರ್ಮದ ಮಾರ್ಗದಲ್ಲಿ ನಡೆಯಬೇಕು ಎಂದರು.ಭಕ್ತರ ಕಲ್ಯಾಣಕ್ಕಾಗಿ ಚೈತನ್ಯ ಆಶ್ರಮದ ಪೀಠಾಧಿಪತಿ ಯಲ್ಲಾರೂಢ ಸ್ವಾಮೀಜಿ ನಿರ್ಮಿಸುತ್ತಿರುವ ನೂತನ ಆಶ್ರಮ ಸರ್ವಸ್ವವನ್ನು ಸಾಧಿಸಲಿ ಎಂದು ಶುಭ ಕೋರಿದರು.ಸಾನ್ನಿಧ್ಯ ವಹಿಸಿದ್ದ ಬಾಗಲಕೋಟೆಯ ಸಿಮಿಕೆೇರಿಯ ಪರಮ ರಾಮಾರೂಢ ಸ್ವಾಮೀಜಿ ಮಾತನಾಡಿ, ಮಾನವ ಇಂದಿನ ಒತ್ತಡದ ಜೀವನದಲ್ಲಿ ಸೂಕ್ಷ್ಮ ಶರೀರದಲ್ಲಿನ ರೋಗ, ಅಶಾಂತಿ ನಿವಾರ ಣೆಗೆ ಮಠ-, ಮಂದಿರ, ಆಶ್ರಮಗಳ ಅವಶ್ಯಕತೆ ಇದೆ ಎಂದರು. ನೂತನ ಆಶ್ರಮ ದೊಡ್ಡ ಶಾಂತಿ ನೀಡುವ ಧಾಮ ವಾಗಲಿ ಎಂದು ಶುಭ ಹಾರೈಸಿದರು.ರಾಮಾರೂಢ ಮಹಾಂತ ಯಲ್ಲಾರೂಢ ಸ್ವಾಮಿ ಚೈತನ್ಯ ಆಶ್ರಮದ ಪೀಠಾಧಿಪತಿ ಯಲ್ಲಾರೂಢ ಸ್ವಾಮೀಜಿ, ಮುಜರಾಯಿ ಇಲಾಖೆ ಸಹಾಯಕ ಆಯುಕ್ತ ರವಿ ಕೊಟಾರಗಸ್ತಿ, ಎನ್. ಎನ್.ಹಲಗತ್ತಿ, ಅವಿನಾಶ ಧಾಮಣೆಕರ, ಎಚ್.ಎಲ್.ಪೂಜೇರಿ, ಮುಜರಾಯಿ ಇಲಾಖೆಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.ಶಿವನಗೌಡ ಪಾಟೀಲ ಸ್ವಾಗತಿಸಿದರು. ಎಚ್.ಎಲ್.ಪೂಜೇರಿ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.