ಭಾನುವಾರ, ಜನವರಿ 26, 2020
18 °C

‘ಭಾಷೆ ಬಳಸಿದಂತೆ ಬೆಳೆಯುತ್ತದೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುರುಮಠಕಲ್: ‘ಗಡಿಭಾಗದಲ್ಲಿ ಕನ್ನಡ ಭಾಷೆಯ ಬಳಕೆ ಕಡಿಮೆಯಾಗಿದ್ದು, ಕನ್ನಡದ ಅಸ್ತಿತ್ವಕ್ಕೆ ದಕ್ಕೆ ಬರುತ್ತಿದೆ. ಹಾಗಾಗಿ ನಾವೆಲ್ಲ ಭಾಷೆಯನ್ನು ಹೆಚ್ಚಾಗಿ ಬಳಸಿದರೆ ಕನ್ನಡ ಭಾಷೆ ಬೆಳೆಯುತ್ತದೆ’ ಎಂದು ಖಾಸಾಮಠದ ಶಾಂತವೀರ ಗುರು ಮಹಾಸ್ವಾಮೀಜಿ ಹೇಳಿದರು.ಕಂದಕೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಶನಿವಾರ ಸಗರನಾಡು ಸೇವಾ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿದ್ದ ಸಾಹಿತಿ– ಮಾಹಿತಿ ಕನ್ನಡ ಜಾಗೃತಿ ಸಾಪ್ತಾಹಿಕ ಸರಣಿ ಮಾಲಿಕೆ– 4ರಲ್ಲಿ ತಿ.ನಂ.ಶ್ರೀಕಂಠಯ್ಯನವರ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.ತಿ.ನಂ.ಶ್ರೀ.ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು., ಕನ್ನಡ ದಿಗ್ಗಜರಲ್ಲಿ ಮೂವರು ಶ್ರೀ.ಗಳು ಪ್ರಸಿದ್ದರು. ಅವರುಗಳಲ್ಲಿ ಬಿ.ಎಂ.ಶ್ರೀ., ಎಂ.ಆರ್.ಶ್ರೀ ಹಾಗೆಯೇ ತೀ.ನಂ.ಶ್ರೀ ಅವರು ಕನ್ನಡದ ಕಳಸವನ್ನು ಬೆಳಗಿದ ಕೀರ್ತಿ ಪಡೆದವರು ಎಂದು ಹೇಳಿದರು.ಸಾಹಿತಿ ಸಾಹೇಬಗೌಡ ಬಿರಾದರ ಉಪನ್ಯಾಸ ನೀಡಿದರು. ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮೀತಿ ಅಧ್ಯಕ್ಷ ಭೀಮರಾಯ ಅಯ್ಯಾಲಪ್ಪನೊರ್‌ ಉದ್ಘಾಟಿಸಿದರು. ಶಾಲೆಯ ಮುಖ್ಯಗುರು ಮಲ್ಲಪ್ಪ.ಡಿ ಅಧ್ಯಕ್ಷೆತೆ ವಹಿಸಿದ್ದರು. ಕರ್ನಾಟಕ ಸೇವಾ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಸಿದ್ದಲಿಂಗರೆಡ್ಡಿ ಕಂದಕೂರು, ಎಸ್‌ಡಿಎಂಸಿ ಅಧ್ಯಕ್ಷ ಶರಣಪ್ಪ ಹಳ್ಳದ ವೇದಿಕೆಯಲ್ಲಿದ್ದರು. ನೇತೃತ್ವ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ವೀರಭದ್ರಪ್ಪ ಸ್ವಾಗತಿಸಿದರು. ನಾಗಪ್ಪ ವಂದಿಸಿದರು. ಗಂಗಾಧರ ಬಡಿಗೇರ ನಿರೂಪಿಸಿದರು.

ಪ್ರತಿಕ್ರಿಯಿಸಿ (+)