ಮೂಡಲಗಿ: ‘ಭಾರತದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಬೆಳವಣಿಗೆಯು ಯುವ ಶಕ್ತಿಯ ಮನ:ಸ್ಥಿತಿಯ ಮೇಲೆ ಇದ್ದು, ಯುವಶಕ್ತಿಯು ಉತ್ತಮ ಚಿಂತನೆಗಳ ಮೂಲಕ ದೇಶವನ್ನು ಬಲಿಷ್ಠಗೊಳಿಸುವತ್ತ ಸಾಗ ಬೇಕು’ ಎಂದು ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಇಂಗ್ಲಿಷ್ ವಿಭಾ ಗದ ಮುಖ್ಯಸ್ಥ ಪ್ರೊ. ಎಸ್.ಬಿ. ಖೋತ ಹೇಳಿದರು.

ಇಲ್ಲಿಯ ರೂರಲ್ ಡೆವೆಲಪಮೆಂಟ್ ಸೊಸೈಟಿ ವತಿಯಿಂದ ಜಿಲ್ಲಾ ನೆಹರು ಯುವ ಕೇಂದ್ರ ಮತ್ತು ಜಿಲ್ಲಾ ಆಡಳಿತ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ರಾಷ್ಟ್ಟೀಯ ಭಾವೈಕ್ಯ ಶಿಬಿರದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಬದಲಾವಣೆಯ ತಂತ್ರಜ್ಞಾನ, ಮಾಹಿತಿ ಕ್ರಾಂತಿಯೊಂದಿಗೆ ಯುವಕರು ಸ್ಪರ್ಧಿಸಿ ತಾವು ಸಮರ್ಥರಾಗಿ ಬೆಳೆಯಬೇಕು ಮತ್ತು ದೇಶವನ್ನು ಬೆಳೆಸಬೇಕು ಎಂದರು.

ಉಪನ್ಯಾಸಕ ವೈ.ಬಿ. ಕೋರಿಶೆಟ್ಟಿ ಮಾತನಾಡಿ, ಮಹಿಳೆಯರು ಸಮಾಜದಲ್ಲಿ ತಲೆಯೆತ್ತಿ ನಿಲ್ಲುವ ರೀತಿಯಲ್ಲಿ ಬದಲಾಗಬೇಕು ಎಂದರು.
ಸಂಸ್ಥೆಯ ಅಧ್ಯಕ್ಷ ತಮ್ಮಣ್ಣ ಪಾರ್ಶಿ ಅಧ್ಯಕ್ಷತೆ ವಹಿಸಿದ್ದರು. ನೆಹರು ಯುವ ಕೇಂದ್ರದ ಬೇಬಿ ದೊಡ್ಡಮನಿ, ಮಹಾ ಲಕ್ಷ್ಮೀ ಸೊಸೈಟಿ ಪ್ರಧಾನ ವ್ಯವಸ್ಥಾಪಕ ಚಂದ್ರಶೇಖರ ಬಗನಾಳ ಉಪಸ್ಥಿತರಿದ್ದರು. ಹನಮಂತ ಸ್ವಾಗತಿಸಿ ದರು. ಸಿದ್ದು ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.