ಮಂಗಳವಾರ, ಜೂನ್ 15, 2021
27 °C

‘ಯುವ ಮತದಾರರ ಜವಾಬ್ದಾರಿ ಹೆಚ್ಚಾಗಿದೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಭಾರತದ ಪ್ರಗತಿಯನ್ನು ನಿರ್ಧರಿಸುವ ಉತ್ತರದಾಯಿತ್ವ ಯುವ ಮತದಾರರ ಮೇಲಿದೆ. ಜಾಗೃತ, ಸಕ್ರಿಯ, ಮಾಹಿತಿಯುಳ್ಳ ಮತ್ತು ಯೋಗ್ಯ ನಿರ್ಣಯ ತೆಗೆದುಕೊಳ್ಳಬಲ್ಲ ಯುವ­ಶಕ್ತಿಯೇ ಭಾರತಕ್ಕೆ ಬದ­ಲಾವಣೆ ತರಬಲ್ಲವರು’ ಎಂದು ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಹೇಳಿದರು.ನಗರದ ಪಿ.ಇ.ಎಸ್ ಇನ್ಸ್‌­ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಕಾಲೇಜಿನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಯುವಶಕ್ತಿಯ ಪಾತ್ರ ಮತ್ತು ಮಹತ್ವದ ಕುರಿತು ಹಾಗೂ ಮೊದಲ ಬಾರಿಗೆ ಮತದಾನ ಮಾಡುತ್ತಿರುವ  ಯುವ ಸಮುದಾಯವನ್ನು ಉದ್ದೇಶಿಸಿ ಅವರು ಮಾತನಾಡಿದರು.‘ಕಲುಷಿತಗೊಳ್ಳದ ಯುವ ಸಮು­ದಾಯದ ಮನಸ್ಸುಗಳು ಯೋಗ್ಯ ನಿರ್ಧಾರ ತೆಗೆದುಕೊಳ್ಳಲು ಇದು ಒಳ್ಳೆಯ ಸಮಯ. ಭ್ರಷ್ಟಾಚಾರ, ಹಗರಣ­ಗಳ ವಿರುದ್ದ ಸೆಣಸಲು ಯುವ­ಸಮುದಾಯ ಟೊಂಕ ಕಟ್ಟಿ ನಿಲ್ಲ­ಬೇಕು. ಯುವ­ಸಮುದಾಯ­ದಿಂದಲೇ ದೇಶದ ನಿಜವಾದ ಬದಲಾವಣೆ ಸಾಧ್ಯ. ಆದ್ದರಿಂದ, ಯುವ ಸಮುದಾಯ ಯೋಚಿಸಿ, ವಿಶ್ಲೇಷಿಸಿ, ನಿರ್ಧಾರ ತೆಗೆದು­ಕೊಳ್ಳ­ಬೇಕು. ಅದು ಖಂಡಿತ ಪರಿ­ಣಾಮ ಬೀರುತ್ತದೆ’ ಎಂದು ಹೇಳಿದರು.‘ಪ್ರಾದೇಶಿಕ ಆಕಾಂಕ್ಷೆಗಳನ್ನು ನಿಭಾ­ಯಿಸಿಕೊಂಡು ರಾಷ್ಟ್ರೀಯ ಆಲೋ­ಚನೆಗಳನ್ನು ಜಾರಿಗೆ ತರಬಲ್ಲ ಮುನ್ನೋಟ­ವಿರುವ ನಾಯಕನನ್ನು ಆರಿಸಬೇಕಾಗಿದೆ. ಅಭ್ಯರ್ಥಿಗಳಿಗೆ ನಿಮ್ಮ ಅಗತ್ಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿ ನಂತರ ನಿರ್ಣಯಿಸಿ. ಇಂದಿನ ಆಧುನಿಕ ಯುಗದಲ್ಲಿ ಸಾಮಾಜಿಕ ತಾಣಗಳಿಂದ ಎಲ್ಲ ನಾಯಕರು ಎಟಕುತ್ತಾರೆ. ನಿಮ್ಮ ನಿರ್ಣಯ ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ’ ಎಂದು ಕಿವಿ ಮಾತು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.