ಸೋಮವಾರ, ಜನವರಿ 20, 2020
21 °C
ಸಾಹಿತಿ ವಿವೇಕ ರೈ ಮಾರ್ಮಿಕ ನುಡಿ

‘ರಾಜಕೀಯ ಪ್ರಣಾಳಿಕೆಗೂ ಸಾಹಿತ್ಯಕ್ಕೂ ವ್ಯತ್ಯಾಸವಿದೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜಕೀಯ ಪ್ರಣಾಳಿಕೆ ಮತ್ತು ಸಾಹಿತ್ಯದ ನಡುವೆ ವ್ಯತ್ಯಾಸವಿದೆ. ಇದನ್ನು ಸಾಹಿತಿಗಳು ಕಂಡುಕೊಳ್ಳಬೇಕು’ ಎಂದು ಸಾಹಿತಿ ಬಿ.ಎ.ವಿವೇಕ ರೈ ಹೇಳಿದರು.ಅಭಿನವ ಹಾಗೂ ಪಲ್ಲವ ಪ್ರಕಾ­ಶನವು ನಗರದ ಕನ್ನಡ ಭವನದ ನಾಟಕ ಅಕಾಡೆಮಿಯ ಚಾವಡಿ ಸಭಾಂಗಣ­ದಲ್ಲಿ ಶನಿವಾರ ಆಯೋಜಿ­ಸಿದ್ದ ಅವ­ರದೇ ಕೃತಿಗಳಾದ ‘ಅರಿವು ಸಾಮಾ­ನ್ಯವೆ’, ‘ನೆತ್ತರ ಮದುವೆ’, ‘ಇರುಳ ಕಣ್ಣು’ ಕೃತಿಗಳ ಬಿಡುಗಡೆ ಕಾರ್ಯಕ್ರಮ­ದಲ್ಲಿ ಅವರು ಮಾತನಾಡಿದರು.‘ರಾಜಕೀಯದ ಪ್ರಣಾಳಿಕೆಗಳಿಗೂ ಹಾಗೂ ಸಾಹಿತ್ಯದ ಆಲೋಚನೆಗಳಿಗೂ ಬಹಳಷ್ಟು ವ್ಯತ್ಯಾಸವಿದೆ. ಇದರಿಂದ ಸಾಹಿತ್ಯ ಮತ್ತು ರಾಜಕೀಯವನ್ನು ಒಂದು ಅಂತರವಿಟ್ಟುಕೊಂಡೇ ನೋಡ­ಬೇಕು. ಸಾಹಿತಿಗಳು ರಾಜಕೀಯ ಪ್ರಣಾಳಿಕೆಯ ದಾಸರಾಗಬಾರದು’ ಎಂದು ನುಡಿದರು.‘ಎಲ್ಲರೊಂದಿಗೆ ಸ್ನೇಹಿತರಂತೆ ಇರ­ಬೇಕು. ಯಾರೊಂದಿಗೂ ದ್ವೇಷವನ್ನು ಸಾಧಿಸುವುದು ಸರಿಯಲ್ಲ. ನಮ್ಮ ನಿರ್ಧಾರಗಳ ಬಗ್ಗೆ ಖಚಿತತೆ ಇರಬೇಕು’ ಎಂದು ಹೇಳಿದರು.‘ನನ್ನ ಬರವಣಿಗೆಯಿಂದ ಕೆಲವರು ನನ್ನನ್ನು ಎಡ ಪಂಥೀಯನೆಂದು ಗುರುತಿ­ಸುತ್ತಾರೆ. ಆದರೆ. ನನಗೆ ನನ್ನ ಬರವಣಿಗೆ ಬಗೆಗೆ ಖಚಿತತೆಯಿದೆ’ ಎಂದು ಪ್ರತಿಪಾದಿಸಿದರು.‘ಎಲ್ಲಾ ನೋವುಗಳ ನಡುವೆ ನಮ್ಮನ್ನು ಕಾಪಾಡುವುದು ಬರವಣಿಗೆ. ನನ್ನ ಮುಂದಿನ ಜೀವನವನ್ನು ಬರವಣಿ­ಗೆಗಾಗಿ ಮೀಸಲಿಡುತ್ತೇನೆ’ ಎಂದರುವಿಮರ್ಶಕ ಪ್ರೊ.ಸಿ.ಎನ್‌.ರಾಮ­ಚಂದ್ರನ್‌, ‘ಅರಿವು ಸಾಮಾನ್ಯವೆ’ ಕೃತಿಯ ಕುರಿತು ಮಾತನಾಡಿ, ‘ಇತಿಹಾಸ- ಜನಪದದ ನಡುವಿನ ಭಿನ್ನತೆಯನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಭಿನ್ನ ಸಂಸ್ಕೃತಿ, ಭಿನ್ನ ಸಾಹಿತ್ಯಗಳ ವಿದ್ವತ್ತು, ಭಿನ್ನ ವಿಚಾರಗಳು ಕೂಡುವ ತಾಣವಾಗಿದ್ದು, ಇದೊಂದು ವೈಚಾರಿಕ ಲೇಖನಗಳ ಸಂಕಲನವಾಗಿದೆ’ ಎಂದರು.ಲೇಖಕ ಪುರುಷೋತ್ತಮ ಬಿಳಿಮಲೆ ಮಾತನಾಡಿ, ‘ಇರುಳ ಕಣ್ಣು’ ಕೃತಿಯಲ್ಲಿ ‘ಧಾರ್ಮಿಕ ಮೂಲಭೂತ­ವಾದದ ಬಗ್ಗೆ ವಿಸ್ತಾರತೆಯನ್ನು ಹೊಂದಿದೆ. ಕನ್ನಡ ಭಾಷೆ, ಸಾಹಿತ್ಯದ ಕುರಿತಾದ ಒಂದು ಉತ್ತಮ ಕೈಪಿಡಿ­ಯಾಗಿದೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)