ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಯಣ್ಣಗೆ ಸುರಪುರ ಸಂಸ್ಥಾನ ಸೇನೆ ಒದಗಿಸಿತ್ತು’

Last Updated 8 ಡಿಸೆಂಬರ್ 2015, 8:20 IST
ಅಕ್ಷರ ಗಾತ್ರ

ಸುರಪುರ: ಸ್ವಾತಂತ್ರ್ಯ ಸೇನಾನಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅವರಿಗೆ ನಮ್ಮ ಸುರಪುರ ಸಂಸ್ಥಾನ ಸೇನೆ ಒದಗಿಸಿ ಸಹಾಯ ಹಸ್ತ ನೀಡಿತ್ತು. ನನಗೆ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ದೊರಕಿರುವುದು ನಮ್ಮ ಸಂಸ್ಥಾನಕ್ಕೆ ದೊರಕಿದ ಗೌರವ ಎಂದು ಸಂಸ್ಥಾನಿಕ ರಾಜಾ ಕೃಷ್ಟಪ್ಪನಾಯಕ ಹೇಳಿದರು.

ರಾಜ್ಯ ಮಟ್ಟದ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಶುಕ್ರವಾರ ನಗರದ ಅರಮನೆಯಲ್ಲಿ ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ಅಭಿಮಾನಿ ಬಳಗ ತಮಗೆ ನೀಡಿದ ಗೌರ ಸ್ವೀಕರಿಸಿ ಮಾತನಾಡಿದರು.

ಕನ್ನಡ ಪರ ಸಂಘಟನೆಗಳು ಸ್ವಾತಂತ್ರ್ಯ ಸೇನಾನಿಗಳ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ. ಈ ಮೂಲಕ ಹುತಾತ್ಮರ ಸ್ಮರಿಸಿದಂತಾ ಗುತ್ತದೆ. ಯುವರಾಜಾ ರಾಜಾ ಕೃಷ್ಟಪ್ಪ ನಾಯಕರಿಗೆ ಪ್ರಶಸ್ತಿ ಲಭಿಸಿದ್ದು ನಮಗೆಲ್ಲ ಹರ್ಷ ಮೂಡಿಸಿದೆ ಎಂದು ರಾಜಾ ನಾಲ್ವಡಿ ವೆಂಕಟಪ್ಪ ನಾಯಕ ಅಭಿಮಾನಿ ಬಳಗದ ಮುಖಂಡ ಅಶೋಕ ಸುರಪುರಕರ್ ಸಂತಸ ವ್ಯಕ್ತಪಡಿಸಿದರು.

ರಾಜಾ ಸುಭಾಶ್ಚಂದ್ರ ನಾಯಕ, ರಾಜಾ ಕೃಷ್ಣದೇವರಾಯ ನಾಯಕ, ವತನದಾರರಾದ ಮುದ್ದಣ್ಣ ಸರ್ ಪಟ್ಟಣಶೆಟ್ಟಿ, ವಾಸುದೇವ ನಾಯಕ ಸರ್ ಹವಲ್ದಾರ್, ಗಣೇಶ ಜಾಗೀರದಾರ, ಉಸ್ತಾದವಜಾಹತ್ ಹುಸೇನ, ದಿನೇಶ ಮಂತ್ರಿ, ಅಜೀಂ ಬೆಳ್ಳಿಬೆತ್ತ, ಶ್ರೀನಿವಾಸ ನಾಯಕ ಸೀಬಾರಬಂಡಿ, ಬಸ್ಸಣ್ಣ ಸಿದ್ದಾಪುರ, ಗೋಪಾಲ ನಾಯಕ, ಪರುಶುರಾಮ ಮೇದಾಗಲ್ಲಿ, ದಶರಥ ದೊರೆ ಕಚಕನೂರ, ಶಾಂತಗೌಡ ಪಾಟೀಲ, ನಿಂಗಯ್ಯ ಹಾಲಗೇರಾ, ವಾಸುದೇವ ನಾಯಕ ಕಚಕನೂರ, ಗೋಪಾಲ ದಾಸೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT