ಭಾನುವಾರ, ಜನವರಿ 26, 2020
28 °C

‘ವಿಭೂತಿಪುರ ಕೆರೆ ಒತ್ತುವರಿ ತೆರವಿಗೆ ಕ್ರಮ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷ್ಣರಾಜಪುರ: ವಿಭೂತಿಪುರ ಕೆರೆ 45 ಎಕರೆ ಪಸರಿಸಿದ್ದು  4 ಎಕರೆ ಒತ್ತುವ ರಿಯಾಗಿದೆ. ಒತ್ತುವರಿ ತೆರವುಗೊಳಿಸಿ ಕೆರೆಯನ್ನು ಅಭಿವೃದ್ಧಿಗೊಳಿಸಬೇಕು ಎಂದು ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಂಬ್ರೀನ್‌ ಕ್ವಾದ್ರಿ ಒತ್ತಾಯಿಸಿದರು.ಶನಿವಾರ ಏರ್ಪಡಿಸಿದ್ದ ಕೆರೆ ರಕ್ಷಣೆಗೆ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೆರೆಗೆ ಕೊಳಚೆ ನೀರು ಹರಿಯುತ್ತಿದೆ. ಇದರಿಂದ ಕೆರೆ  ಕಲುಷಿತವಾಗುತ್ತಿದೆ ಎಂದು ವಿಷಾದಿಸಿದರು.ಶಾಸಕ ಬೈರತಿ ಎ ಬಸವರಾಜು ಅವರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ₨ 2.5 ಕೋಟಿ ಮಂಜೂರು ಮಾಡಿದೆ. ತಂತಿ ಬೇಲಿ ನಿರ್ಮಾಣದ ಜತೆಗೆ ಶೌಚಾ ಲಯವನ್ನು ಶಾಸಕರ ಅನುದಾನದಡಿ ನಿರ್ಮಿಸಲಾಗುವುದು. ಕೆರೆ ಗಡಿಯನ್ನು ಗುರುತಿಸುವ ಕಾರ್ಯ ಮುಗಿದಿದ್ದು 15 ದಿನಗಳ ಒಳಗೆ  ಒತ್ತುವರಿ ತೆರವುಗೊಳಿಸಲಾಗುವುದು ಎಂದು ಭರವಸೆ ನೀಡಿದರು.ವಿಭೂತಿಪುರ ಕೆರೆ ಜೊತೆಗೆ ದೊಡ್ಡನಕ್ಕುಂದಿ ಕೆರೆಯನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಹೇಳಿದರು.

ಪ್ರತಿಕ್ರಿಯಿಸಿ (+)