ಶನಿವಾರ, ಜನವರಿ 25, 2020
19 °C

‘ವೀರಶೈವ ಧರ್ಮದಲ್ಲಿ ನೀತಿಗೆ ಮಹತ್ವ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ವೀರಶೈವ ಧರ್ಮ ಜಾತಿಗಿಂತ ನೀತಿಗೆ ಮಹತ್ವ ಕೊಟ್ಟಿದೆ. ತತ್ವಕ್ಕಿಂತ ನೀತಿಗೆ ಪ್ರಾಧಾನ್ಯತೆ ಕೊಡು ತ್ತದೆ ಎಂದು ಬಾಳೆಹೊನ್ನೂರು ರಂಭಾ ಪುರಿ ಮಠದ ಪ್ರಸನ್ನರೇಣುಕ ವೀರಸೋ ಮೇಶ್ವರ ರಾಜದೇಶೀಕೇಂದ್ರ ಶಿವಾ ಚಾರ್ಯ ಸ್ವಾಮೀಜಿ ತಿಳಿಸಿದರು.ನಗರ ಹೊರವಲಯ ಕುರುವಂಗಿ ಗ್ರಾಮದ ಉಕ್ಕಡಗಾತ್ರೆ ಕರಿಬಸವೇಶ್ವರ ಸ್ವಾಮಿ ಪ್ರತಿಷ್ಠಾಪನೆಯ 12ನೇ ವಾರ್ಷಿಕೋತ್ಸವ ಮತ್ತು ನಾಗಪ್ಪಜ್ಜಯ್ಯ ಸ್ವಾಮಿ ನೂತನವಿಗ್ರಹ ಪ್ರತಿಷ್ಠಾಪನೆ ಅಂಗವಾಗಿ ಆಯೋಜಿಸಿದ್ದ ಇಷ್ಟಲಿಂಗ ಶಿವಪೂಜೆಯ ಧರ್ಮಜಾಗೃತಿ ಸಮಾ ರಂಭದಲ್ಲಿ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.ಹಗಲು ಸೂರ್ಯ ಬೆಳಕು ನೀಡಿದರೆ, ರಾತ್ರಿ ಚಂದ್ರ ಬೆಳಕು ಕೊಡುತ್ತಾನೆ. ಸರ್ವ ಕಾಲದಲ್ಲೂ ಸರ್ವ ಸಮುದಾ ಯಕ್ಕೂ ಬೆಳಕು ಕೊಡುವುದೇ ಧರ್ಮ. ಧರ್ಮ ಮತ್ತು ಜಾತಿಗೆ ಭೂಮಿ ಆಕಾಶ ದಷ್ಟು ವ್ಯತ್ಯಾಸವಿದೆ. ಧರ್ಮದಲ್ಲಿ ಎಲ್ಲರ ಕಲ್ಯಾಣದ ಭಾವವಿದೆ. ವೀರಶೈವ ಧರ್ಮ ಸನಾತನ. ಇಲ್ಲಿ ಗಂಡು-ಹೆಣ್ಣು ಉಚ್ಛ-ನೀಚ, ಬಡವ-ಬಲ್ಲಿದ ತಾರತಮ್ಯ ಇಲ್ಲ. ಎಲ್ಲರಿಗೂ ಸಮಾನ ಅವಕಾಶ ಕೊಟ್ಟಿರುವ ವಿರೋಧರಹಿತ ಧರ್ಮ ವಿದು. ಆದಿಗುರು ರೇಣುಕಾಚಾ ರ್ಯರು ಸಂಸ್ಥಾಪಿಸಿದ ಧರ್ಮವನ್ನು 12ನೇ ಶತಮಾನದ ಶರಣ ಸಮೂಹ ಇನ್ನಷ್ಟು ಉಜ್ವಲಗೊಳಿಸಿದೆ ಎಂದರು.ಶಿಕ್ಷಣದಿಂದ ಬುದ್ಧಿಶಕ್ತಿ ಬೆಳೆದರೆ, ಧರ್ಮದ ಪರಿಪಾಲನೆಯಿಂದ ಭಾವನೆ ಗಳು ಬಲಿಯುತ್ತವೆ. ಯಾವುದೇ ಧರ್ಮ ಪರಂಪರೆಯಲ್ಲಿ ಬೆಳೆದವರಿಗೂ ಧರ್ಮ ಬಹಳ ಮುಖ್ಯ. ಪಂಚಪೀಠಗಳು ನಾಡಿನಲ್ಲಿ ಶಾಂತಿ, ಸೌಹಾರ್ದ, ಭಾವೈಕ್ಯ ದೇಶಪ್ರೇಮ ಬೆಳೆಯಲು ಸಹಕಾರಿಯಾಗಿವೆ. ದೇಹವನ್ನೆ ದೇವಾ ಲಯ ಮಾಡಿ, ಗುರುಕೊಟ್ಟ ಇಷ್ಷಲಿಂಗ ದೈವವನ್ನು ಆರಾಧ್ಯದೈವ ವೆಂದು ಆರಾಧಿಸುವ ಧರ್ಮದಲ್ಲಿ ಇಷ್ಟಲಿಂಗ ಧಾರಣೆ ಬಗ್ಗೆ ಧರ್ಮಿಯರಲ್ಲಿ ಉದಾ ಸೀನ ಪ್ರವೃತಿ ಬೇಡ ಎಂದು ಕಿವಿಮಾತು ಹೇಳಿದರು.ರಂಭಾಪುರಿ ಪೀಠದ ಲಾಂಚನ ಹಸಿರು ಸಮೃದ್ಧಿಯ ಸಂಕೇತ. ರೈತಾಪಿ ವರ್ಗವನ್ನೂ ಪ್ರತಿನಿಧಿಸುತ್ತದೆ.  ದೈವದ ಆಶಯದಂತೆ ಜಗದ್ಗುರುಗಳು 2ನೇ ಬಾರಿಗೆ ಕುರುವಂಗಿಗೆ ಆಗಮಿಸಿದ್ದಾರೆ ಎಂದು ಕೆ.ಬಿದರೆ ಮಠಾಧ್ಯಕ್ಷ ಪ್ರಭುಕು ಮಾರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ಸಮಾರಂಭ ಉದ್ಘಾಟಿಸಿದ ತಾಲ್ಲೂಕು ವೀರಶೈವ ಮಹಾಸಭಾ ಅಧ್ಯಕ್ಷೆ ಗೌರಮ್ಮಬಸವೇಗೌಡ ಮಾತನಾಡಿ, ಗುರುಭಕ್ತಿ, ಧರ್ಮನಿಷ್ಠೆ, ದೇಶಪ್ರೇಮ, ಸೇವಾ ಮನೋಭಾವ ಇಂದಿನ ಅಗತ್ಯ.  ನಗರಕ್ಕೆ ಸಮೀಪದಲ್ಲಿರುವ ಕುರುವಂಗಿ ಗ್ರಾಮಸ್ಥರು ಜಾಗೃತರಾಗಿರುವುದರಿಂದ ಸಾಕಷ್ಟು ಅಭಿವೃದ್ಧಿಕಾರ್ಯ ಇಲ್ಲಿ ನಡೆದಿವೆ ಎಂದರು.ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಪುಷ್ಪಾವತಿ ದೇವರಾಜ ಅವರನ್ನು ಜಗದ್ಗುರುಗಳು ಗುರುರಕ್ಷೆನೀಡಿ ಆಶೀರ್ವಸಿದರು. ಶಂಕರ ದೇವರ ಮಠದ ಚಂದ್ರಶೇಖರಶಿವಾಚಾರ್ಯ ಸ್ವಾಮೀಜಿ, ಗ್ರಾಮದ ಮುಖಂಡರಾದ ಹುಲಿಯಪ್ಪಗೌಡ, ಹಾಲಪ್ಪಗೌಡ, ಜಿಲ್ಲಾ ವಿಜ್ಞಾನ ಕೇಂದ್ರದ ಕಾರ್ಯ ದರ್ಶಿ ನೀಲಕಂಠ ಇನ್ನಿತರರು ಇದ್ದರು.ಜಗದ್ಗುರುಗಳನ್ನು ಪೂರ್ಣಕುಂಭ, ಮಂಗಳವಾದ್ಯದೊಂದಿಗೆ ರುದ್ರಪ್ಪ, ಕುಮಾರಸ್ವಾಮಿ ಮತ್ತು ಲಿಂಗಪ್ಪಶೆಟ್ಟಿ ನೇತೃತ್ವದಲ್ಲಿ ಗ್ರಾಮಸ್ಥರು ಮೆರವಣಿ ಗೆಯಲ್ಲಿ ದೇವಸ್ಥಾನಕ್ಕೆ ಕರೆತಂದರು.

ಪ್ರತಿಕ್ರಿಯಿಸಿ (+)