ಬಾಗಲಕೋಟೆ: ಸಾರ್ವಜನಿಕರಿಗೆ ಉಪ ಯೋಗವಾಗುವ ದೃಷ್ಟಿಯಿಂದ ಕೃಷ್ಣಾ ಮೇಲ್ಡಂಡೆ ಯೋಜನೆಯ ಸಂಪೂರ್ಣ ಮಾಹಿತಿಯನ್ನು ವೆಬ್ಸೈಟ್ನಲ್ಲಿ ಅಳ ವಡಿಸಲಾಗಿದೆ ಎಂದು ಪುನರ್ವಸತಿ ಮತ್ತು ಪುನರ್ ನಿರ್ಮಾಣ ವಿಭಾಗದ ಆಯುಕ್ತ ಶಿವಯೋಗಿ ಕಳಸದ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಯೋಜನೆಯ ಸಂಪೂರ್ಣ ಮಾಹಿತಿ ಯುಳ್ಳ ವೆಬ್ಸೈಟ್ www. bagalkot.nic.in/ukp/html ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ ಎಂದರು.

ಆಡಳಿತದಲ್ಲಿ ಪಾರದರ್ಶಕತೆ ತರುವ ದೃಷ್ಟಿಯಿಂದ ಈ ವೆಬ್ಸೈಟ್ ಬಿಡುಗಡೆ ಮಾಡಿದ್ದು, ಇದರಲ್ಲಿ ಮೂರನೇ ಹಂತದ ಜೊತೆಗೆ 136 ಪುನರ್ವಸತಿ ಕೇಂದ್ರಗಳ ಬಗ್ಗೆ ಮಾಹಿತಿ ಪಡೆಯ ಬಹುದಾಗಿದೆ. ಜಮೀನು ಆಯ್ಕೆಯಿಂದ ಹಿಡಿದು ಅಲ್ಲಿ ನಡೆಯುವ ಪ್ರತಿ ಯೊಂದು ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸಂತ್ರಸ್ತರು ಮಾಹಿತಿಗಾಗಿ ಕಚೇರಿ ಯಿಂದ ಕಚೇರಿಗೆ ಅಲೆ ದಾಡುವುದ ನ್ನು ತಪ್ಪಿಸಲು ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕೇಂದ್ರ ಮುಂದಾಗಿದ್ದು, ಗ್ರಾಮಗಳ ಸ್ಥಳಾಂತರಕ್ಕೂ ಮುನ್ನ ಸಂತ್ರಸ್ತರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿ ಯನ್ನು ಸಮೀಕ್ಷೆ ಮಾಡಲಾಗಿದೆ. ಪ್ರತಿಯೊಂದು ಕುಟುಂಬದ ಸಮೀಕ್ಷೆ ಯನ್ನು ಪೂರ್ಣಗೊಳಿಸಿದ್ದು, ಸಂತ್ರಸ್ತರಿಗೆ ಹೊಸ ಕಾಯ್ದೆ ಅನುಸಾರವಾಗಿ ಅಗತ್ಯ ಸೌಲಭ್ಯ ಕಲ್ಪಿಸುವ ಬಗ್ಗೆ ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿಸಲಾಗಿದೆ ಎಂದರು.

ಜಲಾಶಯದ ಎತ್ತರವನ್ನು 519. 60 ರಿಂದ 524.256 ಮೀಟರ್ಗೆ ಹೆಚ್ಚಿಸುವುದರಿಂದ ಬಾಗಲಕೋಟೆ ನಗರ ಮತ್ತು ಜಿಲ್ಲೆಯ 17 ಹಾಗೂ ವಿಜಾಪುರ ಜಿಲ್ಲೆಯ 3 ಗ್ರಾಮಗಳು ಸೇರಿ ಒಟ್ಟು 20 ಗ್ರಾಮಗಳು ಬಾಧಿತ ವಾಗುತ್ತಿವೆ ಎಂದು ತಿಳಿಸಿದ್ದಾರೆ.

ಬಾಗಲಕೋಟೆ ನಗರ ಹೊರತು ಪಡಿಸಿ 20 ಗ್ರಾಮದ 78,187 ಜನರಿಗೆ ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಲ್ಪಿಸಲಾಗುವುದು, ಜಲಾಶಯದ ಹಿನ್ನೀರಿನಿಂದ ಬಾಧಿತವಾಗುವ ಬಾಗಲಕೋಟೆ ನಗರವನ್ನು 525 ಮೀಟರ್ ಗೆ ಸ್ಥಳಾಂತರ ಮಾಡಲು, ಸಂತ್ರಸ್ತರ ಪುನರ್ವಸತಿ ಕೇಂದ್ರಕ್ಕೆ ಅಗತ್ಯವಿರುವ ಭೂಸ್ವಾಧೀನಕ್ಕೆ 4(1) ಅಧಿಸೂಚನೆ ಹೊರಡಿಸಲಾಗಿದೆ. ಹಾಗೆಯೆ 20 ಗ್ರಾಮಗಳಲ್ಲಿ ಬಾಗಲಕೋಟೆ ತಾಲ್ಲೂ ಕಿನ ಊದಗಟ್ಟಿ ಗ್ರಾಮದ ಪುನರ್ವ ಸತಿಗೆ ಭೂಸ್ವಾಧೀನಕ್ಕೆ 4(1)ಅಧಿ ಸೂಚನೆ ಹೊರಡಿಸಿದ್ದು ತಿಂಗಳೊಳಗಾಗಿ ಉಳಿದ ಪುನರ್ವಸತಿ ಕೇಂದ್ರಗಳ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸುವ ನಿರೀಕ್ಷೆ ಇದೆ ಎಂದರು.

ನೂತನ ಭೂಸ್ವಾಧೀನ ಕಾಯ್ದೆ ಯಂತೆ ಸಂತ್ರಸ್ತರಿಗೆ ಪರಿಹಾರ, ಪುನರ್ವವತಿ ಸೌಲಭ್ಯ ದೊರೆಯಲಿದ್ದು, ಈ ವಿಷಯದಲ್ಲಿ ಸಂತ್ರಸ್ತರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.