ಬುಧವಾರ, ಜನವರಿ 22, 2020
17 °C

‘ಶೀಘ್ರ 12 ಸಾವಿರ ಶಿಕ್ಷಕರ ನೇಮಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಕಲೇಶಪುರ: ‘ಹೈದರಾಬಾದ್‌ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ಪ್ರಕ್ರಿಯೆ ಮುಗಿದ ಕೂಡಲೇ, ಉಪನ್ಯಾಸಕರು ಸೇರಿದಂತೆ 12 ಸಾವಿರ ಶಿಕ್ಷಕರ ನೇಮಕಾತಿ ಮಾಡಲಾಗುವುದು’ ಎಂದು ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್‌ ಹೇಳಿದರು.ಖಾಸಗಿ ಕಾರ್ಯಕ್ರಮವೊಂದಕ್ಕೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.‘ಹೈದರಾಬಾದ್‌ ಕರ್ನಾಟಕ ವಿಶೇಷ ಸ್ಥಾನ ಮಾನ ನೀಡಿರುವುದರಿಂದ 371ಜೆ ಅಡಿ ಯಲ್ಲಿ ಅಲ್ಲಿಯವರಿಗೆ ಮೀಸ ಲಾತಿ ನೀಡಬೇಕಾಗಿದೆ.  ಅಷ್ಟರೊಳಗೆ ನೇಮ ಕಾತಿ ಮಾಡಿಕೊಂಡರೆ ಸ್ಥಳೀಯ ಅಭ್ಯರ್ಥಿಗಳಿಗೆ ತೊಂದರೆ ಆಗುತ್ತದೆ ಎಂಬ ಕಾರಣದಿಂದ ತಡೆಹಿಡಿ ಯಲಾಗಿದೆ.ಒಂದು ತಿಂಗಳಲ್ಲಿ ಆ ಪ್ರಕ್ರಿಯೆ ಮುಗಿಯಲಿದ್ದು, ಮುಂದಿನ ಎರಡು ತಿಂಗಳಲ್ಲಿ ಪ್ರಾಥಮಿಕ ಶಾಲೆಗಳಿಗೆ 9 ಸಾವಿರ, ಪ್ರೌಢ ಶಾಲೆಗಳಿಗೆ 2 ಸಾವಿರ ಶಿಕ್ಷಕರನ್ನು, ಪಿಯುಸಿ ತರಗತಿಗಳಿಗೆ ಒಂದು ಸಾವಿರ ಉಪನ್ಯಾಸಕರನ್ನು ನೇಮಕ ಮಾಡಿ ಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಪ್ರತಿಕ್ರಿಯಿಸಿ (+)