ಶನಿವಾರ, ಜನವರಿ 18, 2020
21 °C

‘ಶ್ರವಣದೋಷ ಮಕ್ಕಳಲ್ಲಿ ವಿಶ್ವಾಸ ಮೂಡಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾಳಿಕೋಟೆ: ಶ್ರವಣದೊಷ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ ತಾವು ಶ್ರವಣ ದೋಷ ಉಳ್ಳವರು ಎಂಬ ಭಾವನೆ ಬರದಂತೆ ನೋಡಿಕೊಳ್ಳುವುದು ಸಮಾ ಜದ ಒಂದು ಜವಾಬ್ದಾರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ  ಜೆ.ಟಿ.ತಳಕೇರಿ ಹೇಳಿದರು.ಅವರು ಶನಿವಾರ ಸ್ಥಳೀಯ ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುದ್ದೇಬಿಹಾಳದ ರೀಚ್ಸ್‌ ಸಂಸ್ಥೆ ಹಾಗೂ ಎ.ಪಿ.ಡಿ. ಸಂಸ್ಥೆ ಸಂಯುಕ್ತಾ ಶ್ರಯದಲ್ಲಿ ಮಕ್ಕಳ ಶ್ರವಣ ದೋಷ ಕುರಿತು ಪ್ರಾಥಮಿಕ ಶಾಲಾ ಶಿಕ್ಷಕರಿ ಗಾಗಿ ಏರ್ಪಡಿಸಿದ್ದ ತರಬೇತಿ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಎಲ್ಲ ಮಕ್ಕಳಿಗೆ ದೊರೆವಂತೆ ಅವ ರಿಗೂ  ಶಿಕ್ಷಣದ ಹಕ್ಕು ಮತ್ತು ಗೌರವ  ಸಿಗಬೇಕು. ಇತರ  ಸಾಮಾನ್ಯರಂತೆ ಅವ ರನ್ನು ನೊಡಿಕೊಳ್ಳಬೇಕು.  ಅವರಲ್ಲಿ ಅಂಗವಿಕಲತೆ ಇದೆ ಎಂಬ ಭಾವನೆ ಬರದಂತೆ  ಬೋಧನೆ ಮಾಡಬೇಕು ಎಂದರು. 

  

ಎ.ಪಿ.ಡಿ. ಸಂಸ್ಥೆ ಬೆಂಗಳೂರನ ಸಂಪನ್ಮೂಲ ವ್ಯಕ್ತಿ ರವಿ ಮಾತನಾಡಿ, ರಾಜ್ಯದಲ್ಲಿ  6 ರಿಂದ 14ರ ಒಳಗಿನ ಮಕ್ಕಳಲ್ಲಿ ಸುಮಾರು 1,40 ಲಕ್ಷ   ಅಂಗವಿಕಲ  ಮಕ್ಕಳು  ಇದ್ದಾರೆ. ಅದರಲ್ಲಿ 25 ಸಾವಿರ ಮಕ್ಕಳು ಶ್ರವಣದೋಷವುಳ್ಳವರಾಗಿದ್ದಾರೆ ಎಂದ ಅವರು,  ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸಲು ಇರಬೇಕಾದ ಪ್ರಕ್ರಿಯೆಗಳು, ಕಲಿಕಾ ಸಾಮಗ್ರಿಗಳು, ಮಗುವಿನ ಭಾಷಾ ಬೆಳವಣಿಗೆಯಲ್ಲಿ ಅನುಸರಿಸಬಹುದಾದ  ಕ್ರಮಗಳ ಕುರಿತು ವಿವರಿಸಿದರು.  ಶೈಕ್ಷಣಿಕ ಸಮ ನ್ವಯ ಶಾಲಾ ತರಬೇತಿಯಲ್ಲಿ ಶ್ರವಣ ದೋಷ  ಮಕ್ಕಳ ನಿರ್ವಹಣೆಯಲ್ಲಿ ಶಿಕ್ಷಕರ ಪಾತ್ರ ಕುರಿತು ಚಟುವಟಿಕೆ ಗಳನ್ನು ಬಳಸಿ ವಿವರಿಸಿದರು.ಇದೇ ಸಂಸ್ಥೆಯ ಬಾಬುರಾವ್ ಮಾತನಾಡಿದರು. ರೀಚ್ಸ್‌ ಸಂಸ್ಥೆಯ ನಿರ್ದೇಶಕ ಕೆ.ಬೂದೆಪ್ಪ ಪ್ರಾಸ್ತಾವಿಕ ವಾಗಿ ಮಾತನಾಡಿದರು.

ಗಂಗಾ ತೋಟದ ಪ್ರಾರ್ಥಿಸಿದರು.   ಮಲ್ಲಮ್ಮ ಬಾಗೇವಾಡಿ ನಿರ್ವಹಿಸಿ ದರು. ಮಲ್ಲಮ್ಮ ಕಂಬಳಿ ಸ್ವಾಗತಿಸಿದರು.  ಏಳೆದಪ್ಪಾ ಮಾದರ ವಂದಿಸಿದರು.ರೀಚ್ಸ್‌ ಸಂಸ್ಥೆ ಸಿಬ್ಬಂದಿ ಚನ್ನಮ್ಮ, ಹರ್ಷಾ, ಗಂಗಾ, ಬಸವರಾಜ, ತಾಲ್ಲೂ ಕಿನ ವಿವಿಧ ಶಾಲೆಗಳಿಂದ ಆಗಮಿಸಿದ್ದ ಶಿಕ್ಷಕವೃಂದ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)