ಸೋಮವಾರ, ಜೂನ್ 21, 2021
21 °C

‘ಸಾತ್ವಿಕ ಮಾರ್ಗದಲ್ಲಿ ಸಾಗಿದರೆ ಸಾರ್ಥಕತೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೆಲಮಂಗಲ: ‘ಸ್ಥಾವರವನ್ನು ಜಂಗಮವನ್ನಾಗಿಸುವ ಕಾಯಕವನ್ನು ವನಕಲ್ಲು ಮಠದಲ್ಲಿ ಮಾಡ­ಲಾಗುತ್ತಿದೆ. ಸಾತ್ವಿಕ ಮಾರ್ಗದಲ್ಲಿ ನಡೆಯುವುದೇ ಜೀವನದ ಸಾರ್ಥಕತೆ’ ಎಂದು ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.ತಾಲ್ಲೂಕಿನ ವನಕಲ್ಲು ಮಲ್ಲೇಶ್ವರ ಕ್ಷೇತ್ರದಲ್ಲಿ ಹತ್ತುದಿನಗಳ ನಡೆದ  ವನಕಲ್ಲು ಸಾಂಸ್ಕೃತಿಕ ಉತ್ಸವ, ಮಲ್ಲೇಶ್ವರ ಸ್ವಾಮಿ ಬ್ರಹ್ಮರಥೋತ್ಸವ ಹಾಗೂ ವಚನ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.‘ಜಂಗಮವನ್ನು ಸ್ಥಾವರವನ್ನಾಗಿಸುವ ಮೂಲಕ ಬಸವ ತತ್ವಕ್ಕೆ ಅಪಚಾರ ಮಾಡಲಾಗುತ್ತದೆ. ಬಸವ­ವಾದಿ ಶರಣರು, ದಾರ್ಶನಿಕರನ್ನು ಅರ್ಥಮಾಡಿ­ಕೊಂಡು ನಿಜ ಶರಣರಾಗಬೇಕು’ ಎಂದರು.ಸಿದ್ದಯೋಗಾನಂದ ಸ್ವಾಮೀಜಿ ಅವರ ಸ್ಮರಣಾರ್ಥ ಸ್ಥಾಪಿಸಿದ ‘ವನಕಲ್ಲು ಶ್ರೀ’ ಪ್ರಶಸ್ತಿಯನ್ನು ಹಿರಿಯ ಕವಿ ಡಾ.ಕೆ.ಎಸ್‌.ನಿಸಾರ್‌ ಅಹಮದ್‌ ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು , ‘ಮಠ ಮಾನ್ಯಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ, ಅಶಕ್ತರಿಗೆ, ದೀನರಿಗೆ ಆಶ್ರಯತಾಣಗಳಾಗಬೇಕು’ ಎಂದರು.ವನಕಲ್ಲು ಕ್ಷೇತ್ರದ ಬಸವ ರಮಾನಂದ ಸ್ವಾಮೀಜಿ ಮಠದ ಸಾಂಸ್ಕೃತಿಕ ಹಾಗೂ ಸೇವಾ ಕಾರ್ಯಗಳಿಗೆ ಸಾರ್ವಜನಿಕರು ಸ್ಪಂದಿಸಬೇಕು ಎಂದು ವಿನಂತಿಸಿದರು. ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಆಶೀರ್ವಚನ ನೀಡಿದರು.   ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಸುನಂದಾ ಶಿವಕುಮಾರ್‌, ವೇಣುಗೋಪಾಲ್‌, ಉದ್ಯಮಿ ಗೋವೇನಹಳ್ಳಿ ಶಿವಕುಮಾರ್‌ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.