ಶುಕ್ರವಾರ, ಫೆಬ್ರವರಿ 26, 2021
27 °C

‘ಸಾಹಿತ್ಯದಿಂದ ಜಾತಿ ಧರ್ಮದಲ್ಲಿ ಏಕತೆೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಾಹಿತ್ಯದಿಂದ ಜಾತಿ ಧರ್ಮದಲ್ಲಿ ಏಕತೆೆ’

ಬಳ್ಳಾರಿ: ಜಾತಿ, ಧರ್ಮದ ಹೆಸರಿನಲ್ಲಿ ಒಡೆಯುವ ಮನಸ್ಸುಗಳನ್ನು ಸಾಹಿತ್ಯ,  ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಒಂದುಗೂಡಿಸುವ ಶಕ್ತಿ ಸಂಘಟನೆಗಳಿಗಿದೆ ಎಂದು ಕರ್ನಾಟಕ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಸಿ.ವೀರಣ್ಣ ಅಭಿಪ್ರಾಯಪಟ್ಟರು.ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶನಿವಾರ  ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ ಮತ್ತು ಸಂಸ್ಕೃತಿ ಪ್ರಕಾಶನ ಸಹಯೋಗದಲ್ಲಿ ನಡದ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಡಾ.ಎಚ್.ಎನ್. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಮೌಡ್ಯದ ವಿರುದ್ಧ ಹೋರಾಡಿದ ಶಿಕ್ಷಣ ತಜ್ಞ ಡಾ.ಎಚ್.ನರಸಿಂಹಯ್ಯ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿ­ಕೊಳ್ಳುವ ಅಗತ್ಯವಿದೆ.  ವಿಜ್ಞಾನವನ್ನು ಕಲಿಯು­ವುದು ಮಾತ್ರವಲ್ಲ, ವೈಚಾರಿಕ, ವೈಜ್ಞಾನಿಕ ಮನೋಭಾವ ಅಳವಡಿಸಿಕೊಳ್ಳಬೇಕು ಎಂದರು.ಕರ್ನಾಟಕ ವಿವಿ ಕುಲಸಚಿವ ಡಾ.ಎಚ್.ಟಿ. ಪೋತೆ, ಸರ್ಕಾರ ಡಾ.ಎಚ್. ನರಸಿಂಹಯ್ಯ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಬೇಕಿತ್ತು. ಆ ಕಾರ್ಯವನ್ನು ಭರಣಿ ವೇದಿಕೆ ಮಾಡುತ್ತಿರುವುದು ಅಭಿನಂದನೀಯ ಎಂದರು.ಚಿತ್ರ ಕಲಾವಿದ ನಾಡೋಜ ಡಾ.ವಿ.­ಟಿ. ಕಾಳೆ ಕಾರ್ಯಕ್ರಮ ಉದ್ಘಾಟಿ­ಸಿದರು.  ಪ್ರೊ.ಅರವಿಂದ ಮೂಲಿಮನಿ ಆಶಯ ನುಡಿಗಳನ್ನಾಡಿದರು. ಬುರ್ರಕಥಾ ಕಲಾವಿದೆ ದರೋಜಿ ಈರಮ್ಮ, ಕಪ್ಪಗಲ್ಲು ಪದ್ಮಮ್ಮ, ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಯರಕುಲಸ್ವಾಮಿ, ಭಾರತೀಯ ಬೌದ್ಧ ಮಹಾಸಭಾದ ಡಾ.ವೆಂಕಟಯ್ಯ ಅಪ್ಪಗೆರೆ, ಛಲವಾದಿ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಕೆ.ತಿಪ್ಪೇಸ್ವಾಮಿ ಹಾಜರಿದ್ದರು.ಡಾ.ಎಚ್.ಎನ್.ಪ್ರಶಸ್ತಿಯನ್ನು ಪ್ರೊ.ಪಿ.­ಸತ್ಯನಾರಾಯಣರಾವ್, ಪ್ರೊ.ಅರವಿಂದ ಮೂಲಿಮನಿ, ಡಾ.ಚೆಲುವರಾಜು, ಡಾ.ಗೋವಿಂದ­ರಾಜ್, ಹೊಸ ದರೋಜಿ ಶಾಲೆಯ ಅಧ್ಯಾಪಕ ಸಿ.ಡಿ. ಗೂಳಪ್ಪ, ಹೊಸ ದೇವಲಾಪುರ ಶಾಲೆಯ ಅಧ್ಯಾಪಕಿ ಸಿ.ಎಚ್.ಎಂ. ವತ್ಸಲಾ ಅವರಿಗೆ ನೀಡಿ ಗೌರವಿಸಲಾಯಿತು.ವೈದ್ಯ ಸೇವಾರತ್ನ ಪ್ರಶಸ್ತಿಯನ್ನು ಡಾ.ಕರ್ಜಗಿ ಸಿದ್ದಲಿಂಗಪ್ಪ, ಡಾ.ಪಿ.ಕೆ.ವೆಂಕಟೇಶ್,  ಡಾ.ಸಿ.ಎಂ. ವೀರೇಂದ್ರಕುಮಾರ್, ಡಾ.ಪರಸಪ್ಪ ಬಂದರಕಳ್ಳಿ ಅವರಿಗೆ ನೀಡಿ ಸನ್ಮಾನಿಸಲಾಯಿತು.ಡಾ.ಅಂಬೇಡ್ಕರ್ ಸ್ಮಾರಕ ಮಾಧ್ಯಮ ಪ್ರಶಸ್ತಿಯನ್ನು ಮಹೇಶ್ ಸುರ್ವೆ,  ಅನಿಲ್ ಹೊಸಮನಿ, ಪರಶು­ರಾಮ್ ಕಲಾಲ್, ಸಿರಾಜ್ ಬಿಸರಳ್ಳಿ, ಅನೂಪ್ ಕುಮಾರ್ ಸ್ವೀಕರಿಸಿದರು.ಭರಣಿಶ್ರೀ ಪ್ರಶಸ್ತಿಯನ್ನು ಸೌಮ್ಯಾ ಹಿರೇಮಠ, ರಂಜಿತಾ, ಕೀರ್ತಿಕಾ, ಮೌನಿಕಾ, ಹಾಗೂ ಚಿನ್ಮಯ ಅವರಿಗೆ ನೀಡಿ ಪ್ರೋತ್ಸಾಹಿಸಲಾಯಿತು.ವೇದಿಕೆಯ ಅಧ್ಯಕ್ಷ, ಪತ್ರಕರ್ತ ಸಿ.ಮಂಜುನಾಥ ಸ್ವಾಗತಿಸಿದರು. ಸಯ್ಯದ್ ಹುಸೇನ್, ವಿನೋದ್ ಕಾರ್ಯಕ್ರಮ ನಿರೂಪಿಸಿದರು, ಮೈಲೇಶಿ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.