ಸೋಮವಾರ, ಜನವರಿ 27, 2020
25 °C

‘ಸಿರಿಯಾ ರಾಸಾಯನಿಕ ಅಸ್ತ್ರ ಬಳಸಿದ್ದು ನಿಜ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್‌ (ಪಿಟಿಐ): ಪ್ರತಿಭಟನಾ­ನಿರತ ಬಂಡು­ಕೋರರ  ಮೇಲೆ ಸಿರಿಯಾ ಸರ್ಕಾರ ರಾಸಾಯನಿಕ ಅಸ್ತ್ರ­ಗಳನ್ನು ಪ್ರಯೋಗ ಮಾಡಿರುವುದು ನಿಜ ಎಂದು ವಿಶ್ವ­ಸಂಸ್ಥೆಯ ಜಂಟಿ ತನಿಖಾ ತಂಡ ದೃಢಪಡಿಸಿದೆ.ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯ­ದರ್ಶಿ ಬಾನ್‌ ಕಿ ಮೂನ್‌ ಅವ­ರಿಗೆ ತನಿಖಾ ತಂಡದ ಮುಖ್ಯಸ್ಥ ಅಕೆ ಸೆಲ್‌­­ಸ್ಟ್ರಾಮ್‌  ಶುಕ್ರವಾರ ಸಲ್ಲಿಸಿದ 82 ಪುಟ­ಗಳ ಅಂತಿಮ ವರದಿಯಲ್ಲಿ ಈ ವಿಷಯ­ವನ್ನು ಬಹಿರಂಗ ಪಡಿಸಲಾಗಿದೆ.ಮಾರ್ಚ್‌ನಲ್ಲಿ ಸಿರಿಯಾ ಸರ್ಕಾರ ಹಾಗೂ ನಾಗ­ರಿಕ­ರ ನಡುವೆ ನಡೆದ ಘರ್ಷಣೆಯಲ್ಲಿ ರಾಸಾಯನಿಕ ಅಸ್ತ್ರ ಪ್ರಯೋಗ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ತನಿಖೆ ಕೈಗೊಳ್ಳಲಾಗಿತ್ತು.‘ರಾಸಾಯನಿಕ ಅಸ್ತ್ರ ಬಳಸಿರುವುದು ಖಚಿತವಾಗಿದೆ. ಇದು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಮತ್ತು ಮಾನ­ವೀ­ಯತೆಗೆ ಮಾಡಿದ ಅವಮಾನ. ಸಿರಿ­ಯಾದಲ್ಲಷ್ಟೇ ಅಲ್ಲದೆ ಜಗತ್ತಿನಾದ್ಯಂತ ಇನ್ನು ಇಂತಹ ಮಾರಕ ಅಸ್ತ್ರಗಳ ಬಳಕೆ­ಯಾಗುವುದಿಲ್ಲ ಎಂದು ನಾವು ಭರವಸೆ ನಿಡಬೇಕಾಗಿದೆ’ ಎಂದು ಮೂನ್‌ ಹೇಳಿದರು.

ಪ್ರತಿಕ್ರಿಯಿಸಿ (+)