ಶನಿವಾರ, ಜೂನ್ 19, 2021
27 °C
‘ಸಂಶೋಧನೆಗಳಿಂದ ಸೂಕ್ತ ಯೋಜನೆ ಸೃಷ್ಟಿ’

‘ಸುಸ್ಥಿರ ಜಾಗತಿಕ ಆರ್ಥಿಕ ಸ್ಥಿತಿ ಗಳಿಕೆ’ ಕುರಿತ ಅಂತರ­ರಾಷ್ಟ್ರೀಯ ವಿಚಾರ ಸಂಕಿರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಒಂದು ಸಂಸ್ಥೆ ಅಥವಾ ದೇಶ ಸಮಗ್ರ  ಪ್ರಗತಿ ಸಾಧಿಸಲು ಪ್ರತಿ­ಯೊಂದು ಯೋಜನೆ ಕುರಿತು ಆಳವಾದ ಸಂಶೋಧನೆ ನಡೆಸಬೇಕು.  ಸಂಶೋಧನೆ­ಗಳಿಂದ ಸರಿಯಾದ ಯೋಜನೆ ರೂಪು­ಗೊ­ಳ್ಳು­ತ್ತದೆ. ಇದರಿಂದ ದೇಶದ ಆರ್ಥಿ­ಕತೆ ಉತ್ತಮವಾಗುವುದರ ಜತೆಗೆ ಶಿಕ್ಷಣಕ್ಕೂ ಅನುಕೂಲವಾಗಲಿದೆ’ ಎಂದು ವಿಧಾನ ಪರಿಷತ್ ಸದಸ್ಯ ಎಂ.ಆರ್. ದೊರೆಸ್ವಾಮಿ ಅಭಿಪ್ರಾಯಪಟ್ಟರು.

 

ನಗರದ ಶ್ರೀಕೃಷ್ಣ ಅಂತರರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಶುಕ್ರ­ವಾರ ಆಯೋಜಿಸಿದ್ದ ‘ಸುಸ್ಥಿರ ಜಾಗತಿಕ ಆರ್ಥಿಕ ಸ್ಥಿತಿ ಗಳಿಕೆ’ ಕುರಿತ  ಅಂತರ­ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.‘ಬೆಂಗಳೂರು ವಿವಿ ಅಡಿಯಲ್ಲಿ 600 ಕಾಲೇಜುಗಳು ಇವೆ. ಇಷ್ಟು ದೊಡ್ಡ ಸಂಖ್ಯೆಯ ಕಾಲೇಜುಗಳನ್ನು ನಿರ್ವಹಿಸು­ವುದು ದೊಡ್ಡ ಹೊರೆ. ಜತೆಗೆ ವಿದ್ಯಾರ್ಥಿ­ಗಳಿಗೆ ತಲುಪಬೇಕಾದ ಯೋಜನೆಗಳು ಸಮರ್ಪಕವಾಗಿ ನೀಡಲು ಸಾಧ್ಯವಾಗು­ವು­ದಿಲ್ಲ. ಹೀಗಾಗಿ ದೊಡ್ಡ ವಿಶ್ವವಿದ್ಯಾಲ­ಯ­ಗಳನ್ನು ವಿಭಾಗಿಸಿ ಪ್ರತ್ಯೇಕ ಮಾಡುವ ಅಗತ್ಯವಿದೆ’ ಎಂದರು.ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ. ತಿಮ್ಮೇಗೌಡ ಮಾತ­ನಾಡಿ, ‘ಕಾಲೇಜುಗಳು ನಿರಂತರವಾಗಿ ವಿಚಾರಸಂಕಿರಣಗಳನ್ನು ಆಯೋಜಿಸ­ಬೇಕು’ ಎಂದು ಸಲಹೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.