ಶನಿವಾರ, ಜನವರಿ 25, 2020
18 °C

‘ಸೂರಿ ಗ್ಯಾಂಗ್’ಗೆ ‘ಎ’ ಸರ್ಟಿಫಿಕೆಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿ.ವೆಂಕಟೇಶ್  ಮತ್ತು ಲಾಲಿ ಸ್ವಾಮಿ ಕೆ. ನಿರ್ಮಾಣದ ‘ಸೂರಿ ಗ್ಯಾಂಗ್’ ಚಿತ್ರಕ್ಕೆ ಸೆನ್ಸಾರ್ ಮಂಡಳಿ ‘ಎ’ ಪ್ರಮಾಣಪತ್ರ ನೀಡಿದೆ. ಚಿತ್ರ ಇದೇ ತಿಂಗಳು ತೆರೆಕಾಣಲಿದೆ.ಕೆ. ಅನ್ಬು ಕಥೆ, ಚಿತ್ರಕಥೆ, ಸಂಭಾಷಣೆ, ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಕುಮಾರ್ ಚಕ್ರವರ್ತಿ ಛಾಯಾಗ್ರಹಣ, ಎಸ್. ನಾಗು ಸಂಗೀತ,  ಮದನ್-ಹರಿಣಿ, ಚಿ.ಶಾಸ್ತ್ರಿ (ಮಾಲೂರು) ನೃತ್ಯ ನಿರ್ದೇಶನ ಮಾಡಿದ್ದಾರೆ. ಡಿಫರೆಂಟ್ ಡ್ಯಾನಿ ಮತ್ತು ಜೋನ್ಸ್  ಸಾಹಸ ನಿರ್ದೇಶನ, ಹರೀಶ್ ಜಿ.ಎಸ್. ರಾಡ್ ಸಂಕಲನ, ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ.ರಾಮ್, ಛಾಯಾಸಿಂಗ್, ಮೈಕೋ ನಾಗರಾಜ್, ರಮೇಶ್ ಭಟ್, ಬಿರಾದಾರ್, ಪದ್ಮಜಾ ರಾವ್, ಮಂಡ್ಯ ಜಗ್ಗಿ, ಹನುಮೇಶ್, ಹರ್ಷವರ್ಧನ್ ರೆಡ್ಡಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)