ಶುಕ್ರವಾರ, ಜೂನ್ 25, 2021
30 °C

‘ಸೋನಿಯಾ, ದೇಶದ ಯಾವ ರಾಜ್ಯದವರು?’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ತಾವು ‘ಹೊರಗಿನವರು’ ಎನ್ನುವ ಗುಲ್ಲೆಬ್ಬಿಸಿ­ರುವ ಎದುರಾಳಿ ಕಾಂಗ್ರೆಸ್‌ ಅಭ್ಯರ್ಥಿಗೆ ತಿರುಗೇಟು ನೀಡಿರುವ ಪಂಜಾಬ್‌ನ ಅಮೃತಸರದ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ್‌ ಜೇಟ್ಲಿ, ‘ನಿಮ್ಮ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಭಾರತದ ಯಾವ ರಾಜ್ಯಕ್ಕೆ ಸೇರಿದವರು’ ಎಂದು ಪ್ರಶ್ನಿಸಿದ್ದಾರೆ.‘ನಮ್ಮ ಪೂರ್ವಿಕರು ಪಂಜಾಬ್‌­ನೊಂದಿಗೆ ಹೊಂದಿ­ರುವ ನಿಕಟ ಸಂಪ­ರ್ಕದ ಹೊರತಾ­ಗಿಯೂ ನನ್ನನ್ನು ‘ಹೊರಗಿನವ’

ಹಾಗೂ  ‘ನಕಲಿ ಪಂಜಾಬಿ’ ಎಂದು ಕರೆಯುತ್ತಿರುವ ಕಾಂಗ್ರೆಸ್‌ ಅಭ್ಯರ್ಥಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರು ಸೋನಿಯಾ ಮೂಲದ ಬಗ್ಗೆ ಮಾತನಾಡಲಿ’ ಎಂದು ಕಿಡಿಕಾರಿದ್ದಾರೆ.‘ಚುನಾವಣೆಯಲ್ಲಿ ಗೆದ್ದ ನಂತರ ಅಮೃತಸರದಲ್ಲಿ ಕಚೇರಿ ತೆರೆದು ಅಲ್ಲಿಯೇ ಮನೆ ಮಾಡುವೆ’ ಎಂದು ಜೇಟ್ಲಿ ಭರವಸೆ ನೀಡಿದರು.

ಪಂಜಾಬ್‌ ಮಾಜಿ ಮುಖ್ಯಮಂತ್ರಿಯೂ ಆಗಿರುವ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರನ್ನು ಕಾಂಗ್ರೆಸ್‌, ಜೇಟ್ಲಿ ವಿರುದ್ಧ ಕಣಕ್ಕೆ ಇಳಿಸಿರುವುದರಿಂದ ಈ ಕ್ಷೇತ್ರ ಕುತೂಹಲ ಮೂಡಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.