ಬೆಂಗಳೂರು: ‘ನಾಲ್ಕೈದು ತಲೆಮಾರುಗಳ ಹಿಂದೆ ಹೆಣ್ಣಿಗೆ ಲೈಂಗಿಕ ಸ್ವಾತಂತ್ರ್ಯವಿತ್ತು’ ಎಂದು ರಂಗಕರ್ಮಿ ಡಾ.ಲಕ್ಷ್ಮೀ ಚಂದ್ರಶೇಖರ್ ಹೇಳಿದರು.

ಸೃಷ್ಟಿ ಪ್ರಕಾಶನ ಮತ್ತು ಸಾಹಿತ್ಯ ಭಂಡಾರದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಕರ್ನಾಟಕ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಡಾ.ನಾಗರಾಜ್ ನೀರಗುಂದ ಅವರ ‘ತಿರುಪತಿ ಮಲ್ಲಿಗೆ ರಾಮ ದುರ್ಗದ ಸಂಪಿಗೆ ರಾಮ’ ನಾಟಕ ಮತ್ತು ಕಾದಂಬರಿಗಾರ್ತಿ ಡಾ.ಅನಸೂಯಾದೇವಿ ಅವರ ‘ಎದೆ ಹಾಸಿನ ಭಾವ ಹೂಗಳು’ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

‘ಲೈಂಗಿಕ ಸ್ವಾತಂತ್ರ್ಯವನ್ನು ಆಕೆಯ ಕುಟುಂಬ ಸದಸ್ಯರಾಗಲೀ, ಪತಿಯಾಗಲಿ ಕಸಿದುಕೊಳ್ಳುತ್ತಿರಲಿಲ್ಲ. ತಿರುಪತಿ ಮಲ್ಲಿಗೆ ರಾಮ ದುರ್ಗದ ಸಂಪಿಗೆ ರಾಮ ನಾಟಕವು ಹೆಣ್ಣಿನ ಲೈಂಗಿಕತೆಯನ್ನು ಸಮಾಜಶಾಸ್ತ್ರ ಮತ್ತು ಭೂ ವಿಜ್ಞಾನದ ನೆಲೆಯಲ್ಲಿ ವಿವರಿಸುತ್ತದೆ. ಅರ್ಥ, ಕೀರ್ತಿ, ಮೋಕ್ಷಗಳ ಹುಡುಕಾಟದಲ್ಲಿ ಗಂಡು ಹೆಣ್ಣನ್ನು ಮರೆತಾಗ ಆಗುವ ಅನಾಹುತದ ಬಗ್ಗೆ ಚರ್ಚಿಸುತ್ತದೆ’ ಎಂದರು.

ಕವಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ ಅವರು, ‘ಇದು ಕನ್ನಡ ಸಾಹಿತ್ಯದಲ್ಲೇ ಅಪರೂಪದ ಮತ್ತು ವಿಶಿಷ್ಟವಾದ ನಾಟಕ. ವೈಜ್ಞಾನಿಕ ತಳಹದಿಯ ಮೇಲೆ ರೂಪುಗೊಂಡಿರುವ ಈ ಸಾಂಕೇತಿಕ ನಾಟಕವು ಧರ್ಮ ಮತ್ತು ಮೋಕ್ಷಗಳಿಗೆ ಧಕ್ಕೆಯಾಗದಂತೆ ಅರ್ಥ ಮತ್ತು ಕಾಮವನ್ನು ಸಾಧಿಸುವ ಬಗ್ಗೆ ಚರ್ಚಿಸುತ್ತದೆ’ ಎಂದರು.

ಸಾಹಿತಿ ಡಾ.ಸಿ.ವೀರಣ್ಣ ಅವರು ಮಾತನಾಡಿ, ‘ಸಂಕೀರ್ಣವಾದ ಈಗಿನ ಬದುಕನ್ನು ಅರ್ಥ ಮಾಡಿಕೊಳ್ಳಲು ಲೇಖಕನ ಆಲೋಚನೆಗಳೂ ಸಂಕೀರ್ಣವಾಗಬೇಕು. ಇಲ್ಲದಿದ್ದಲ್ಲಿ ಸಂಘರ್ಷಗಳ ನಡುವಿನ ದಾರಿಯನ್ನು ಗುರುತಿಸಲು ಸಾಧ್ಯವಾಗುವುದಿಲ್ಲ’ ಎಂದರು.ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ ಅವರು ಮಾತನಾಡಿ, ‘ಹೆಣ್ಣಿನ ಹೃದಯದಲ್ಲಿ ಓಡಾಡುವ ಸಾವಿರಾರು ಭಾವಗಳಿಗೆ ಅನಸೂಯಾದೇವಿ ಅವರು ಕವನದ ರೂಪ ನೀಡಿದ್ದಾರೆ’ ಎಂದರು.ಕವಯಿತ್ರಿ ಪ್ರೊ.ಎಂ.ಆರ್.ಕಮಲ, ಪ್ರಕಾಶಕ ಸೃಷ್ಟಿನಾಗೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.